ದಲಿತ ವ್ಯಕ್ತಿಗಳಿಗೆ ಕೊಳಚೆ ಗುಂಡಿಯಲ್ಲಿ ಮುಳುಗೇಳುವ ಶಿಕ್ಷೆ ನೀಡಿದ ಬಿಜೆಪಿ ಮುಖಂಡ

Crime, Kannada News, Regional No Comments on ದಲಿತ ವ್ಯಕ್ತಿಗಳಿಗೆ ಕೊಳಚೆ ಗುಂಡಿಯಲ್ಲಿ ಮುಳುಗೇಳುವ ಶಿಕ್ಷೆ ನೀಡಿದ ಬಿಜೆಪಿ ಮುಖಂಡ 14

ಹೈದರಾಬಾದ್: ತೆಲಂಗಾಣದ ಬಿಜೆಪಿ ಮುಖಂಡರೊಬ್ಬರು ದಲಿತ ವ್ಯಕ್ತಿಗಳಿಗೆ ಕೋಲಿನಿಂದ ಹೊಡೆದು ಕೊಳಚೆ ಗುಂಡಿಯಲ್ಲಿ ಮುಳುಗೇಳುವ ಶಿಕ್ಷೆ ನೀಡಿದ ಘಟನೆ ನಡೆದಿದೆ.

ಅಭಂಗಪಟ್ನಂ ಗ್ರಾಮದ ನವೀಪೇಟ್‌ನಲ್ಲಿ ಕಳೆದ ತಿಂಗಳು ಈ ಘಟನೆ ನಡೆದಿದ್ದು, ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ಬಿಜೆಪಿಯ ಜಿಲ್ಲಾ ಮಾಜಿ ಕಾರ್ಯದರ್ಶಿ ಎಂ ಭರತ್ ರೆಡ್ಡಿ ಅವರು ಎರ್ರಾಕುಂಟಾ ಎಂಬ ಕೊಳದಲ್ಲಿನ ಜಲ್ಲಿ ಕಲ್ಲುಗಳನ್ನು ಸರ್ಕಾರದ ಅನುಮತಿ ಇಲ್ಲದೆ ಅಕ್ರಮವಾಗಿ ಸಾಗಿಸುವುದನ್ನು ಕೊಂಡ್ರಾ ಲಕ್ಷ್ಮಣ್ ಮತ್ತು ರಾಜೇಶ್ವರ್ ಪ್ರಶ್ನಿಸಿದ್ದಾರೆ. ಈಗಾಗಿ ಕೆರೆಯಲ್ಲಿ ಮುಳುಗಿ ಏಳುವ ಶಿಕ್ಷೆ ವಿಧಿಸಿದ್ದಾರೆ ಎಂದು ಹಿಂದೂಸ್ತಾನ್‌ ಟೈಮ್ಸ್ ವರದಿ ಮಾಡಿದೆ.

ಇಬ್ಬರು ದಲಿತರನ್ನು ಹಿಂಸಿಸಿದ ಬಿಜೆಪಿಯ ಜಿಲ್ಲಾ ಮಾಜಿ ಕಾರ್ಯದರ್ಶಿ ಎಂ ಭರತ್ ರೆಡ್ಡಿ ವಿರುದ್ಧ ಸ್ಥಳೀಯ ದಲಿತ ನಾಯಕ ಮಣಿಕೊಲ್ಲಾ ಗಂಗಾಧರ್ ಅವರು ದೂರು ದಾಖಲಿಸಿದ್ದಾರೆ. ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಭರತ್ ತಲೆಮರೆಸಿಕೊಂಡಿದ್ದು, ಶೀಘ್ರವೇ ಅವರನ್ನು ಪತ್ತೆ ಹಚ್ಚಲಾಗುವುದು ಎಂದು ಪೋಲೀಸರು ಹೇಳಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.