ದೊಡ್ಡ ಗೌಡರ ಮನೆಯಿಂದ ಇಬ್ಬರಲ್ಲ ಮೂವರು ಚುನಾವಣ ಕಣಕ್ಕೆ: ಫ್ಯಾಮಿಲಿ‌ ಪಾಲಿಟಿಕ್ಸ್ ಗೆ ಹೊಸ ತಿರುವು

BREAKING NEWS, Kannada News, Regional, Top News No Comments on ದೊಡ್ಡ ಗೌಡರ ಮನೆಯಿಂದ ಇಬ್ಬರಲ್ಲ ಮೂವರು ಚುನಾವಣ ಕಣಕ್ಕೆ: ಫ್ಯಾಮಿಲಿ‌ ಪಾಲಿಟಿಕ್ಸ್ ಗೆ ಹೊಸ ತಿರುವು 32

ಬೆಂಗಳೂರು: ಇಷ್ಟು ದಿನ ಚುನಾವಣೆಗೆ ನಮ್ಮ ಕುಟುಂಬದಿಂದ, ಇಬ್ಬರು ಮಾತ್ರ ಸ್ಪರ್ಧಿಸುತ್ತಾರೆ ಎಂದು ಗಂಟಾನುಘೋಷವಾಗಿ ಹೇಳುತ್ತಿದ್ದ ಹೆಚ್‌ಡಿಕೆ, ಈಗ ಪತ್ನಿ ಅನಿತಾ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಮೂಲಕ ಮಾಜಿ ಪ್ರಧಾನಿ ದೇವೇಗೌಡರ ಫ್ಯಾಮಿಲಿ‌ ಪಾಲಿಟಿಕ್ಸ್ ಗೆ ಹೊಸ ತಿರುವು ಸಿಕ್ಕಿದೆ. ಅಲ್ಲದೆ ಇದು ದೊಡ್ಡ ಗೌಡರ ಕುಟುಂಬದ ದಾಯಾದಿ ಕಲಹಕ್ಕೆ ಕಾರಣವಾಗುವ ಸಾಧ್ಯತೆ ಇದೆ.

ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಹೊರೆಹೊತ್ತ ಮಹಿಳೆಗಾಗಿ ಕುಟುಂಬದಲ್ಲೇ ಕಲಹ ಶುರುವಾಗಿದ. ದೇವೇಗೌಡರ ಕುಟುಂಬದಲ್ಲಿ ಕಳೆದೊಂದು ತಿಂಗಳಿಂದ ಟಿಕೇಟ್’ಗಾಗಿ ಶುರುವಾಗಿದ್ದ ಕಲಹ ಹೊಸ ಟ್ವಿಸ್ಟ್ ಸಿಕ್ಕಿದೆ. ಕುಟುಂಬ ಕಲಹದ ನಡುವೆಯೂ ಟಿಕೆಟ್ ಪಡೆಯುವಲ್ಲಿ ಅನಿತಾಕುಮಾರಸ್ವಾಮಿ ಬಹುತೇಕ ಸಫಲರಾಗಿದ್ದಾರೆ.

ನಮ್ಮ ಕುಟುಂಬದಲ್ಲಿ ಇಬ್ಬರಿಂದ ಮಾತ್ರ ಸ್ಪರ್ಧೆ ಎನ್ನುತ್ತಿದ್ದ ಹೆಚ್‌.ಡಿ ಕುಮಾರಸ್ವಾಮಿಯನ್ನು, ಕಳೆದೆರೆಡು ದಿನಗಳ ಹಿಂದೆ ಚನ್ನಪಟ್ಟಣ ಜೆಡಿಎಸ್ ಕಾರ್ಯಕರ್ತರು ಭೇಟಿಯಾಗಿದ್ದಾರೆ. ರಾತ್ರೋರಾತ್ರಿ ಹೆಚ್‌ಡಿಕೆ ಜೊತೆ ಚರ್ಚಿಸಿ, ಅನಿತಾ ಕುಮಾರಸ್ವಾಮಿಗೆ ಟಿಕೆಟ್ ನೀಡಲು ಒಪ್ಪಿಸಿದ್ದಾರೆ. ಅಲ್ಲದೇ ಅನಿತಾ ಕುಮಾರಸ್ವಾಮಿಯೇ ಅಭ್ಯರ್ಥಿ ಎಂದು ಹೆಚ್ಡಿಕೆ ಸ್ಪಷ್ಟಪಡಿಸಿದ್ದಾರಂತೆ. ಇನ್ನು ಈ ಬಾರಿ ಇಬ್ಬರಿಗೆ ಮಾತ್ರ ಕುಟುಂಬದಿಂದ ಟಿಕೇಟ್ ಅನ್ನುತ್ತಿದ್ದ ಹೆಚ್.ಡಿ.ಕೆ, ಅನಿತಾ ಕುಮಾರಸ್ವಾಮಿ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ನೀಡೋದಕ್ಕೆ ಸ್ಪಷ್ಟನೆಯನ್ನೂ ನೀಡಲಿದ್ದಾರಂತೆ.

ಅನಿತಾ ಹೊಸದಾಗಿ ಸ್ಪರ್ಧಿಸುತ್ತಿಲ್ಲ. ಕಳೆದ ಬಾರಿ ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಸೋತಿದ್ದು, ಈ ಬಾರಿ ಜಯಭೇರಿ ಭಾರಿಸಲಿದ್ದಾರೆ ಎಂಬುದನ್ನ ಕುಟುಂಬಕ್ಕೆ ಹೇಳಲಿದ್ದಾರೆ. ಎಂಬ ಮಾಹಿತಿ ಜೆಡಿಎಸ್ ಮೂಲಗಳಿಂದ ಲಭ್ಯವಾಗಿದೆ‌.

ಇತ್ತ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಖಚಿತ ಅನ್ನೋದು, ರೇವಣ್ಣ‌ ಕುಟುಂಬದ ಕಣ್ಣು ಕೆಂಪು ಮಾಡಿದ್ದು, ಯಾವ ರೀತಿ ಹೊಸ ತಿರುವು ಪಡೆಯಲಿದೆ ಎನ್ನುವುದು ಕುತೂಹಲ ಹುಟ್ಟಿಸಿದೆ. ನ‌ವಂಬರ್ 19 ರಂದು ಭವಾನಿ ರೇವಣ್ಣ ಬೇಲೂರಿನಲ್ಲಿ ನಡೆಸಲಿರುವ ಶಕ್ತಿಪ್ರದರ್ಶನದತ್ತ ಇದೀಗ ಕಾರ್ಯಕರ್ತರ ಚಿತ್ತ ಹರಿದಿದೆ.

Related Articles

Leave a comment

Back to Top

© 2015 - 2017. All Rights Reserved.