ಮಗು ಬೆಳ್ಳಗಿದೆ ಎಂದು ಹತ್ಯೆ ಮಾಡಿದ ಪಾಪಿ ತಂದೆ..?

Crime, Kannada News, National No Comments on ಮಗು ಬೆಳ್ಳಗಿದೆ ಎಂದು ಹತ್ಯೆ ಮಾಡಿದ ಪಾಪಿ ತಂದೆ..? 19

ಕೋಲ್ಕತ್ತಾ: ತಮಗೆ ಹುಟ್ಟುವ ಮಕ್ಕಳು ಬೆಳ್ಳಗೆ, ಸುಂದರವಾಗಿ ಕಾಣುವಂತೆ ಇರಬೇಕು ಎಂದು ಪ್ರತಿ ಪೋಷಕರು ಹಂಬಲಿಸುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಪಾಪಿ ತಂದೆ ತನ್ನ ಮಗು ಬೆಳ್ಳಗಿದೆ ಎಂಬ ಕಾರಣಕ್ಕೆ ಅದನ್ನು ಸಾಯಿಸಿದ್ದಾನೆ ಎಂದು ಹೇಳಲಾಗುತ್ತಿದೆ.

ಪಶ್ಚಿಮ ಬಂಗಾಳದಲ್ಲಿ ಇಂತಹ ಅಮಾನವೀಯ ಘಟನೆ ನಡೆದಿದೆ. ದಂಪತಿಗಳಾದ ಶೇಕ್ ನಜೀರ್ ಮತ್ತು ಸೈಮಾ ಬಿಬಿ ಎಂಬುವರಿಗೆ ಎರಡುವರೆ ತಿಂಗಳ ಹಿಂದೆ ಮಗು ಜನಿಸಿತ್ತು. ದಂಪತಿಗಳಿಬ್ಬರು ಕಪ್ಪಗಿದ್ದು ಅವರಿಗೆ ಹುಟ್ಟಿದ ಮಗು ಮಾತ್ರ ತುಂಬಾ ಬೆಳ್ಳಗಿದಿದ್ದರಿಂದ ಪತ್ನಿಯ ಮೇಲೆ ಅನುಮಾನಗೊಂಡ ಶೇಕ್ ನಜೀರ್ ತನ್ನ ಸ್ವಂತ ಮಗುವನ್ನೇ ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.

ಮಗು ವಿಚಾರವಾಗಿ ಗಂಡ ಹೆಂಡತಿ ಇಬ್ಬರ ನಡುವೆ ಭಾನುವಾರ ರಾತ್ರಿ ವಾಗ್ವಾದ ನಡೆದಿತ್ತು. ಅಲ್ಲದೆ ಮಗುವನ್ನು ಸಾಯಿಸುವುದಾಗಿ ಗಂಡ ಬೆದರಿಕೆ ಹಾಕಿದ್ದ. ಜಗಳ ಮುಗಿದು ಬೆಳಗ್ಗೆ ಎದ್ದಾಗ ಮಗು ಮೃತಪಟ್ಟಿದೆ. ಇದರಿಂದ ಘಾಸಿಕೊಂಡ ಸೈಮಾ ಜೋರಾಗಿ ಅಳುತ್ತಿದ್ದು ಇದನ್ನು ಗಮನಿಸಿದ ನೆರೆಮನೆಯವರು ನಜೀರ್ ನನ್ನು ಹಿಡಿದು ಚನ್ನಾಗಿ ಥಳಿಸಿದ್ದಾರೆ. ಆದರೆ ಮಗು ಸಾವನ್ನಪ್ಪುವುದಕ್ಕೆ ಚಳಿ ಕಾರಣ ಎಂದು ನಜೀರ್ ಪೋಷಕರು ಹೇಳುತ್ತಿದ್ದಾರೆ.

ಮಗು ಸಾವಿನ ಕುರಿತಂತೆ ಪ್ರಕರಣವನ್ನು ದಾಖಲಿಸಿಕೊಳ್ಳಲು ಪೊಲೀಸರು ಮುಂದಾಗಿಲ್ಲ. ಮಗುವಿನ ಸಾವು ನೈಸರ್ಗಿಕವೋ ಅಥವಾ ಕೊಲೆಯೋ ಎಂಬುದು ಮರಣೋತ್ತರ ಪರೀಕ್ಷೆ ನಂತರ ತಿಳಿದುಬರುವುದರಿಂದ ಮರಣೋತ್ತರ ಪರೀಕ್ಷಾ ವರದಿ ಬಂದ ನಂತರ ತಾವು ನಜೀರ್ ಮೇಲೆ ಕ್ರಮಕೈಗೊಳ್ಳುವುದಾಗಿ ಪೊಲೀಸರು ಹೇಳುತ್ತಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.