ದಾನ ಮಾಡಲು ಎ.ಟಿ.ಎಂ ನಲ್ಲಿ ಕಳ್ಳತನ ಮಾಡ್ತಿದ್ದ: ಒಂದೂವರೆ ವರ್ಷ ಕದ್ದದ್ದು ಯಾರಿಗೂ ಗೊತ್ತಾಗಲಿಲ್ಲ..!

BREAKING NEWS, Mysore Dasara 2015, Regional, Top News No Comments on ದಾನ ಮಾಡಲು ಎ.ಟಿ.ಎಂ ನಲ್ಲಿ ಕಳ್ಳತನ ಮಾಡ್ತಿದ್ದ: ಒಂದೂವರೆ ವರ್ಷ ಕದ್ದದ್ದು ಯಾರಿಗೂ ಗೊತ್ತಾಗಲಿಲ್ಲ..! 30

ಬೆಂಗಳೂರು: ಈ ಕಳ್ಳನ ಹಿನ್ನೆಲೆ ಕೇಳಿ ಪೊಲೀಸರೆ ದಂಗಾಗೋಗಿದ್ದಾರೆ. ಕಾರಣ, ಈತ ಕಳ್ಳ ಮಾತ್ರನಲ್ಲ, ಜೊತೆಗೆ ದಾನಶೂರ ಕರ್ಣ ಕೂಡ. ಈ ಎಟಿಎಂ ಕಳ್ಳ, ಕಳ್ಳತನ ಮಾಡುವುದು ತನ್ನ ಸ್ವಾರ್ಥಸಾಧನೆಗೆ ಅಲ್ಲ. ಊರವರ ಕಷ್ಟ ಪರಿಹಾರಕ್ಕೆ.

ಕೊಳ್ಳೇಗಾಲದ ಚಿಕ್ಕಮಲ್ಲಾಪುರ ಮೂಲದ ಶಿವಕುಮಾರಗೆ ಬೆಂಗಳೂರಿನಲ್ಲಿ ಎಟಿಎಂಗಳಿಗೆ ಹಣ ತುಂಬಿಸುವ ಸೇಫ್ ಗಾರ್ಡ್ ಕೆಲಸ. ಕೆಲಸ ಸಣ್ಣದಾದರೂ ದಾನ ಮಾಡುವ ಉದ್ದೇಶದಿಂದಲೋ ಏನು,  ಬ್ಯಾಂಕ್’ನವರು ಈತನಿಗೆ ಹಣ ತುಂಬಿಸಲು ಕೊಟ್ಟ ಹಣದಲ್ಲಿ ಅಲ್ಪ ಪ್ರಮಾಣದ ಹಣ ಕಳ್ಳತನ ಮಾಡಿ ಊರಿನಲ್ಲಿ ಕರ್ಣನಾಗಿ ಮೆರೆದಿದ್ದಾನೆ.

ಎಚ್’ಡಿಎಫ್’ಸಿ ಹಾಗೂ ಐಸಿಐಸಿಐ ಸೇರಿದಂತೆ 31 ಎಟಿಎಂಗಳಿಗೆ ಹಣ ತುಂಬುವ ಕೆಲಸಕ್ಕೆ ಶಿವಕುಮಾರ ನೇಮಿಸಲಾಗಿತ್ತು. ಅಲ್ಲದೇ ಇವರಿಗಾಗಿ ಪ್ರತ್ಯೇಕ ಪಾಸ್’ವರ್ಡ್ ಕೂಡ ನೀಡಿದ್ದರು. ಹೀಗೆ ಹಣ ತುಂಬಿಸುವ ಕಾರ್ಯದ ವೇಳೆ 5ರಿಂದ 10 ಲಕ್ಷರೂಪಾಯಿ ಹಣವನ್ನು ಕಳ್ಳತನ ಮಾಡಿ ಸುಳ್ಳು ದಾಖಲೆಯನ್ನು ಈತ ಬ್ಯಾಂಕ್ ಅಧಿಕಾರಿಗಳಿಗೆ ನೀಡುತ್ತಿದ್ದ. 1 ಕೋಟಿ ತುಂಬಿಸಲು ಕೊಟ್ಟರೆ 90 ಲಕ್ಷ ತುಂಬಿಸಿ 10 ಲಕ್ಷವನ್ನು ಜೇಬಿಗಿಳಿಸುತ್ತಿದ್ದ. ಈ ರೀತಿ  ವರ್ಷಗಳಿಂದ ಈತ ಸುಳ್ಳು ಮಾಹಿತಿ ನೀಡಿ ಸಂಪಾದಿಸಿದ ಹಣದ ಮೊತ್ತವೆ ಈತನಿಗೆ ನೆನಪಿಲ್ಲ. ಕಾರಣ ಈ ಹಣವನ್ನೆಲ್ಲಾ ಆತ ಊರಿನಲ್ಲಿ ಬಡ್ಡಿ ಇಲ್ಲದೆ ದಾನವಾಗಿ ನೀಡಿ ಊರು ಉದ್ದಾರ ಮಾಡಿದ್ದಾನೆ.

ಊರಿನಲ್ಲಿ ಯಾವುದೇ ಮದುವೆ, ಸಮಾರಂಭ, ಕೃಷಿ ಚಟುವಟಿಕೆ, ಬೈಕ್ , ಟ್ರಾಕ್ಟರ್ ತೆಗೆದುಕೊಳ್ಳಲು ಹಣ ನೀಡುತ್ತಿದ್ದ ಈತ ಊರಿನಲ್ಲಿ ಕರ್ಣನ ಸಮಾನ. ಈ ರೀತಿಯಲ್ಲಿ ಹಣ ಎಗುರಿಸುತ್ತಿದ್ದ ಅ.10 ರಂದು ರಜೆ ಮೇಲೆ ತೆರಳುವ ಮೊದಲು ಒಂದೇ ಬಾರಿ ಪಾಸ್‌ವರ್ಡ್‌ ಉಪಯೋಗಿಸಿ 80 ಲಕ್ಷ ರೂ. ಕದ್ದು ಬಿಟ್ಟಿದ್ದ. ಈ ವೇಳೆ ಬ್ಯಾಂಕಿನವರಿಗೆ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದಾಗ ಈತನ ಎರಡು ಮುಖದ ಪರಿಚಯವಾಗಿದೆ.

ಒಂದೂವರೆ ವರ್ಷಗಳಿಂದ 1.60 ಕೋಟಿ ಹಣ ಕನ್ನ ಹಾಕಿದರೂ ಬ್ಯಾಂಕಿನವರಿಗೆ ಅನುಮಾನ ಬರದಿರಲು ಕಾರಣ ಏಜೆನ್ಸಿಗಳು. ಎಟಿಎಂನಲ್ಲಿ ಹಣ ಕೊರತೆ ಬಿದ್ದರೆ, ಏಜೆನ್ಸಿಯವರ ಜವಾಬ್ದಾರಿ ಎಂದು ಬ್ಯಾಂಕ್‌ ಸಿಬ್ಬಂದಿ ಸುಮ್ಮನಾಗುತ್ತರೆ. ಅಲ್ಲದೇ ಎಟಿಎಂನಲ್ಲಿ ಹಣ ಕಳ್ಳತನವಾದರೆ ವಿಮಾ ಕಂಪನಿ ತುಂಬಿ ಕೊಡುತ್ತದೆ ಎಂದು ಏಜೆನ್ಸಿಯವರು ಬೇಜವಾಬ್ದಾರಿತನ ತೋರಿಸುತ್ತಾರೆ. ಇದು ಶಿವಕುಮಾರ್‌ಗೆ  ವರ ವಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಶಿವಕುಮಾರ್ ಗೆ ಈ ರೀತಿಯ ವಿದ್ಯೆ ಕಲಿಸಿದ್ದು ಮಾಜಿ ನೌಕರ ಸುನಿಲ್ ಎಂಬಾತ. ಈತ ಕೂಡ ಇದೇ ರೀತಿ ಹಣ ದೋಚುತ್ತಿದ್ದ. ಈತನ ಮುಂದಾಲೋಚನೆ ಹೇಗಿತ್ತೆಂದರೆ ಸಿಕ್ಕಿಬಿದ್ದರೆ ತನಗೆ ಜಾಮೀನು ನೀಡುವಂತೆ ಲಾಯರ್’ನನ್ನು ನೇಮಕ ಮಾಡಿ ಅವರಿಗೂ ಫೀಸ್ ಕೊಟ್ಟಿದ್ದ. ಅವರು ತನನ್ನು ಬಿಡಿಸಿದರೆ, ಹಣ ಕೊಟ್ಟವರ ಬಳಿ ವಸೂಲಿ ಮಾಡಿ ಜೀವನ ಮಾಡುವುದು ಎಂದು ಯೋಜನೆ ರೂಪಿಸಿದ್ದ. ಇದೇ ತಂತ್ರವನ್ನು ತನ್ನ ಶಿಷ್ಯ ಶಿವುಗೂ ಹೇಳಿಕೊಟ್ಟಿದ್ದ ಎಂದು ಶಿವಕುಮಾರ್ ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

Related Articles

Leave a comment

Back to Top

© 2015 - 2017. All Rights Reserved.