ಅಂಬೇಡ್ಕರ್, ಸಂವಿಧಾನದ ವಿರುದ್ಧ ಬಿ.ಜೆ.ಪಿ ಮುಖಂಡ ಗೋ ಮಧುಸೂದನ್ ಅವಿವೇಕದ ಹೇಳಿಕೆ ನೀಡಿದ್ದಾರೆ

BREAKING NEWS, Kannada News, Regional No Comments on ಅಂಬೇಡ್ಕರ್, ಸಂವಿಧಾನದ ವಿರುದ್ಧ ಬಿ.ಜೆ.ಪಿ ಮುಖಂಡ ಗೋ ಮಧುಸೂದನ್ ಅವಿವೇಕದ ಹೇಳಿಕೆ ನೀಡಿದ್ದಾರೆ 68

ಮೈಸೂರು: ಬಿ.ಜೆ.ಪಿ ಮುಖಂಡ ಗೋ ಮಧುಸೂದನ್ ಅವರು ಭಾರತ ಸಂವಿಧಾನದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಖಂಡಿಸಿ ದಲಿತ ವಿದ್ಯಾರ್ಥಿ ಒಕ್ಕೂಟ, ಸಂಶೋಧಕರ ಸಂಘ ಮೈಸೂರು ವಿವಿ, ಮತ್ತು ಯುವ ಪ್ರಗತಿಪರ ಚಿಂತಕರ ಸಂಘ ಹಾಗೂ ಮೈಸೂರು ವಿವಿಯ ಎಲ್ಲಾ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಮಾನಸಗಂಗೋತ್ರಿಯ ಗಡಿಯಾರ ಗೋಪುರದ ಬಳಿ ನಡೆದ ಪ್ರತಿಭಟನೆಯಲ್ಲಿ ನೂರಾರು ವಿದ್ಯಾರ್ಥಿಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿ ಗೋ ಮಧುಸೂದನ್ ವಿರುದ್ಧ ಧಿಕ್ಕಾರ ಕೂಗಿದರು. ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು ಸುವರ್ಣ ನ್ಯೂಸ್ ವಾಹಿನಿಯಲ್ಲಿ ನಡೆದ ಚರ್ಚಾ ಕಾರ್ಯಕ್ರಮವೊಂದರಲ್ಲಿ ಜಿ.ಜೆ.ಪಿ ವಕ್ತಾರರಾಗಿ ಭಾಗವಹಿಸಿದ್ದ ಗೋ ಮಧುಸೂದನ್ ಅವರು ಭಾರತ ಸಂವಿಧಾನ ಹಾಗೂ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಘನತೆಗೆ ಧಕ್ಕೆ ಬರುವಂತೆ “ದಲಿತ ಬರೆದ ಸಂವಿಧಾನ ನಮ್ಮ ದೇಶದ ಸಂವಿಧಾನವೇ ಅಲ್ಲ ನಾನು ಈ ಸಂವಿಧಾನವನ್ನು ವಿರೋಧಿಸುತ್ತೇನೆ” ಎಂದು ಅವಿವೇಕದ ಹೇಳಿಕೆಯನ್ನು ನೀಡಿದ್ದಾರೆ.

ಮೇಲ್ನೋಟಕ್ಕೆ ಒಂದು ಕಡೆ ಬಿ.ಜೆ.ಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ದಲಿತರ ಮನೆಗಳಿಗಲ್ಲಿ ಊಟ ಮಾಡಿ ಭಾರತದಲ್ಲಿ ಎಲ್ಲ ಜನರು ಸಮಾನರು ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಇತ್ತ ಬಿ.ಜೆ.ಪಿ ವಕ್ತಾರರು ದಲಿತ ವಿರೋಧಿ ಹೇಳಿಕೆ ನೀಡುತ್ತಲೇ ಇರುವುದನ್ನು ಗಮನಿಸಿದರೆ ಬಿ.ಜೆ.ಪಿ ಯ ದಲಿತ ವಿರೋಧ ಧೋರಣೆ ಸ್ಪಷ್ಟವಾಗುತ್ತದೆ. ಈಗಾಗಿ ಈ ಕೂಡಲೆ ಗೋ ಮಧುಸೂದನ್ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಇಲ್ಲವಾದರೆ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

Related Articles

Leave a comment

Back to Top

© 2015 - 2017. All Rights Reserved.