ವಿಶೇಷ ಮಕ್ಕಳೊಂದಿಗೆ ಮಕ್ಕಳ ದಿನಾಚರಣೆ

Kannada News, Regional No Comments on ವಿಶೇಷ ಮಕ್ಕಳೊಂದಿಗೆ ಮಕ್ಕಳ ದಿನಾಚರಣೆ 35

ಮೈಸೂರು: ಮಕ್ಕಳ ದಿನಾಚರಣೆ ಅಂಗವಾಗಿ ಮೈಸೂರು ವಿವಿ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳೆಲ್ಲರು ನೀರಿಕ್ಷೆ ವಿಶೇಷ ಮಕ್ಕಳ ಶಾಲೆಗೆ ಬೇಟಿ ನೀಡಿ ಅಲ್ಲಿನ ಮಕ್ಕಳೊಂದಿಗೆ ಅವರು ಮಕ್ಕಳಾಗಿ ಕುಣಿದು ಕುಪ್ಪಳಿಸಿದರು.

ವಿಭಾಗದ ಸಹಾಯಕ ಪ್ರಧ್ಯಾಪಕರಾದ ಡಾ. ಸಪ್ನ ಅವರ ಜೊತೆಗೆ ಮಕ್ಕಳ ದಿನಾಚರಣೆ ಅಂಗವಾಗಿ ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನೀರಿಕ್ಷೆ ವಿಶೇಷ ಮಕ್ಕಳ ಶಾಲೆಯಲ್ಲಿನ ವಿಶೇಷ ಮಕ್ಕಳ ಶಾಲೆಗೆ ಭೇಟಿ ನೀಡಿದ್ದೆವು.

ಈ ವೇಳೆ ಮಕ್ಕಳಿಗೆ ರಸ್ಕ್, ಬಿಸ್ಕೆಟ್, ಚಾಕೊಲೇಟ್ ಗಳನ್ನು ವಿತರಿಸಲಾಯಿತು. ನಂತರ ಮಕ್ಕಳು ಪ್ರಾರ್ಥನೆ, ಸಂಗೀತ, ನೃತ್ಯ ಮಾಡಿ ನಮ್ಮನ್ನು ರಂಜಿಸಿದರು. ಅಲ್ಲದೆ ನಾವೂ ಕೂಡ ಮಕ್ಕಳಿಗಾಗಿ ಹಾಡು, ನೃತ್ಯವನ್ನು ಮಾಡಿದೆವು. ಕೊನೆಯಲ್ಲಿ ವಿಧ್ಯಾರ್ಥಿಗಳು ಮಕ್ಕಳ ಒಟ್ಟಿಗೆ ಸುಸ್ತಾಗುವವರೆಗೂ ಕಣಿದು ಕುಪ್ಪಳಿಸಿದರು‌. ಈ ನಂತರ ಮಕ್ಕಳೆ ಸ್ವತಃ ತಯಾರಿಸಿದ ಕ್ರಿಯಾತ್ಮಕ ಪೆನ್, ಪೋಟೋ ಫ್ರೇಮ್, ಬಳೆ, ಸರ, ಒಲೆ ಮುಂತಾದ ಆಭರಣಗಳನ್ನು ಆಶ್ಚರ್ಯದಿಂದ ವೀಕ್ಷಿಸಿದೆವು. ಕೊನೆಗೆ ಮಕ್ಕಳೊಟ್ಟಿಗೆ ಪೋಟೋ, ಸೆಲ್ಫಿಗೆ ಪೋಸ್ ನೀಡಿ ಮಕ್ಕಳ ಚಟುವಟಿಕೆ, ಆಟೋಟ, ನೃತ್ಯ ಕಾರ್ಯಕ್ರಮವನ್ನು, ಆನಂದಿಸಿ ಹೊರ ನಡೆದೆವು.

 ರಕ್ಷಿತ ಬಿ.ಎನ್

ಪತ್ರಿಕೋದ್ಯಮ ವಿದ್ಯಾರ್ಥಿ, ಮಾನಸಗಂಗೋತ್ರಿ 

Related Articles

Leave a comment

Back to Top

© 2015 - 2017. All Rights Reserved.