ಧರ್ಮಸ್ಥಳ ಲಕ್ಷದೀಪೋತ್ಸವ: ಪಾದಯಾತ್ರಿಗಳಿಗಾಗಿ ತಂಪು ಪಾನೀಯ

Kannada News, Regional No Comments on ಧರ್ಮಸ್ಥಳ ಲಕ್ಷದೀಪೋತ್ಸವ: ಪಾದಯಾತ್ರಿಗಳಿಗಾಗಿ ತಂಪು ಪಾನೀಯ 31

ಧರ್ಮಸ್ಥಳ: ಸಾವಿರಾರು ಜನ ಭಕ್ತರು ಬಹಳ ವೇಗವಾಗಿ ನಡೆದುಕೊಂಡು ಬರುತ್ತಿದ್ದರು. ಬಹಳ ಶಿಸ್ತಿನಿಂದ ದೇವರ ಮೇಲಿನ ಭಕ್ತಿಯಿಂದ ಉತ್ಸಾಹದಿಂದ ಹೆಜ್ಜೆ ಹಾಕುತಿದ್ದರು. ಅವರ ಆಯಾಸ ನೀಗಿಸಲು ಮಾರ್ಗದ ಮಧ್ಯೆದಲ್ಲಿ ತಂಪು ಪಾನೀಯ, ಐಸ್‍ಕ್ರೀಮ್ ವಿತರಿಸಲಾಗುತ್ತಿತ್ತು.

ಧರ್ಮಸ್ಥಳ ಲಕ್ಷದೀಪೋತ್ಸವದ ಪ್ರಯುಕ್ತ 5ನೇ ವರ್ಷದ ‘ನಮ್ಮ ನಡಿಗೆ ಮಂಜುನಾಥನ ಕಡೆಗೆ’ ಎಂಬ ಧ್ಯೇಯ ವಾಕ್ಯದೊಂದಿಗೆ ಉಜಿರೆಯ ಶ್ರೀ ಜನಾರ್ದನಸ್ವಾಮಿ ದೇವಾಲಯದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದವರೆಗೆ ಭಕ್ತಾದಿಗಳು ಪಾದಯಾತ್ರೆ ಕೈಗೊಂಡರು. ಪಾದಯಾತ್ರೆಯಲ್ಲಿ ಹತ್ತು ಸಾವಿರಕ್ಕೂ ಮಿಗಿಲಾದ ಜನರು ಮಕ್ಕಳು, ಕಿರಿಯರು, ಹಿರಿಯರೆನ್ನದೆ ಭಕ್ತರು ಪಾಲ್ಗೊಂಡಿದ್ದರು.

ಪಾನೀಯ ವಿತರಕರು ಬನ್ನಿ ಬನ್ನಿ ದನಿವಾರಿಸಿಕೊಳ್ಳಿ ನೀರು ಕುಡಿದು ನಿಧಾನವಾಗಿ ಸಂಚರಿಸಿ ಎನ್ನುತ್ತಿದ್ದರು. ಪ್ರತಿ ಒಂದು ಕಿ.ಲೋ ಮೀಟರ್ ಅಂತರದಲ್ಲಿ ಪಾನೀಯ ನೀಡಲಾಗುತ್ತಿತ್ತು. ಭಕ್ತಾದಿಗಳಿಗೆ ದಣಿವಾರಿಸಿಕೊಳ್ಳಲು ಕ್ಯಾಂಡಿ, ಪಾನಕ, ಜ್ಯೂಸ್, ಕಲ್ಲಂಗಡಿಯ ಪಾನೀಯದ ವ್ಯವಸ್ಥೆಯಿತ್ತು.

ವರದಿ: ಶಿವರಂಜಿನಿ ಕೊೈಲ, ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ,
ಎಸ್.ಡಿ.ಎಂ ಕಾಲೇಜು, ಉಜಿರೆ

ಚಿತ್ರಗಳು: ಅಭಿನಂದನ್ ಎಂ, ಸ್ನಾತಕೋತ್ತರ ಪತ್ರಿಕೋದ್ಯಮ
ವಿಭಾಗ, ಎಸ್.ಡಿ.ಎಂ ಕಾಲೇಜು, ಉಜಿರೆ

 

 

Related Articles

Leave a comment

Back to Top

© 2015 - 2017. All Rights Reserved.