ಆಂಗ್ಲ ನಾಮಫಲಕ ತೆಗೆದು ಹಾಕಲು ಕನ್ನಡಸೇನೆಯಿಂದ ವಾರದ ಗಡುವು

Kannada News, Regional No Comments on ಆಂಗ್ಲ ನಾಮಫಲಕ ತೆಗೆದು ಹಾಕಲು ಕನ್ನಡಸೇನೆಯಿಂದ ವಾರದ ಗಡುವು 6

ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಕನ್ನಡ ನಾಮಫಲಕ ಅಳವಡಿಸುವುದನ್ನು ಕಡ್ಡಾಯಗೊಳಿಸುವಂತೆ ಒತ್ತಾಯಿಸಿ ಮಂಗಳವಾರ ಜಿಲ್ಲಾ ಕನ್ನಡಸೇನೆ ಕಾರ್ಯಕರ್ತರು ಅಧ್ಯಕ್ಷ ಪಿ.ಸಿ.ರಾಜೇಗೌಡ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಈ ಸಂಬಂಧ ರಾಜ್ಯ ಸರ್ಕಾರ ರಾಜ್ಯದಲ್ಲಿ ಕನ್ನಡ ನಾಮಫಲಕಗಳನ್ನು ಅಳವಡಿಸುವ ಕುರಿತು ಕಡ್ಡಾಯಗೊಳಿಸಿದ್ದು ,ನಿಯಮವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಜಾರಿಗೊಳಿಸಿ ಕನ್ನಡ ನಾಮಫಲಕ ಬರೆಸಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು. ಕಾಫಿನಾಡು ಪ್ರವಾಸೋದ್ಯಮಕ್ಕೆ ಉತ್ತಮ ತಾಣವಾಗಿದೆ. ವಾರಾಂತ್ಯ ಮತ್ತು ರಜಾದಿನಗಳಲ್ಲಿ ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಿಂದ ಸಹಸ್ರಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಜಿಲ್ಲೆಯಾದ್ಯಂತ ಬಹುತೇಕ ಅಂಗಡಿಗಳಲ್ಲಿ ಕನ್ನಡನಾಮಫಲಕ ಕಣ್ಮರೆಯಾಗಿ ಭಾಷೆಯನ್ನು ಕಡೆಗಣಿಸುತ್ತಿರುವುದು ಸರಿಯಲ್ಲ.ಕನ್ನಡ ನಾಮಫಲಕಗಳು ಮಾಯವಾಗಿರುವುದನ್ನು ನೋಡಿದಾಗ ಅನ್ಯಬಾಷಿಕರಿಗೆ ಇದು ಯಾವ ರಾಜ್ಯ ಎಂಬ ಅನುಮಾನಕ್ಕೆ ಯಡೆಮಾಡುತ್ತದೆ.

ಈ ಸಂಬಂಧ ಕನ್ನಡಭಾಷೆ ಉಳಿಸಿ – ಬೆಳೆಸಬೇಕಾದುದು ಕನ್ನಡಿಗರಾದ ನಮ್ಮೆಲ್ಲರ ಆದ್ಯಕರ್ತವ್ಯ ವಾಗಿದೆ.ಕನ್ನಡಸೇನೆ ಕಾರ್ಯಕರ್ತರು ಈ ಹಿಂದೆಯೂ ಹಲವುಬಾರಿ ನಗರಸಭೆ ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಿದ್ದರೂ ಯಾವುದೆ ಕ್ರಮಕೈಗೊಳ್ಳದಿರುವುದು ದುರದೃಷ್ಟಕರ ಸಂಗತಿ ಎಂದು ಅಸಮಾದಾನ ವ್ಯಕ್ತಪಡಿಸಿದರು.

ನಗರದ ಲಾಡ್ಜ್,ಹೋಟೆಲ್‍ಗಳು ಸೇರಿದಂತೆ ಬಹುತೇಕ ಅಂಗಡಿಗಳಲ್ಲಿ ಕನ್ನಡವನ್ನು ಕಡೆಗಣಿಸಿ ಆಂಗ್ಲನಾಮಫಲಕ ಅಳವಡಿಸಿರುವುದು ನಮ್ಮಗಮನಕ್ಕೆ ಬಂದಿದ್ದು ಜಿಲ್ಲೆಯಾದ್ಯಂತ ಇರುವ ರೆಸಾರ್ಟ್ ಮತ್ತು ಹೋಂ ಸ್ಟೇ ನಾಮಫಲಕದಲ್ಲಿ ಆಂಗ್ಲಭಾಷೆ ವ್ಯಾಮೋಹ ಹೆಚ್ಚಾಗಿರುವುದು ಕನ್ನಡಕ್ಕೆ ಮಾಡುತ್ತಿರುವ ಅವಮಾನವಾಗಿದೆ.ಕನ್ನಡ ನೆಲದ ನೀರು ಕುಡಿದು, ಅನ್ನ ತಿನ್ನುತ್ತ,ಬಾಳಿ ಬಧುಕುತ್ತಿರುವ ಕನ್ನಡಿಗರೆ ಮಾತೃಭಾಷೆಗೆ ದ್ರೋಹ ಬಗೆಯುತ್ತಿರುವುದು ಕೇದಕರಸಂಗತಿಯಾಗಿದೆ.ಒಂದುವಾರದಲ್ಲಿ

ಆಂಗ್ಲನಾಮಫಲಕಗಳನ್ನು ತೆಗೆದು ಕನ್ನಡನಾಮಫಲಕ ಗಳನ್ನು ಅಳವಡಿಸದಿದ್ದರೆ ಕನ್ನಡಸೇನೆ ಸಂಘಟನೆ ಕಾರ್ಯಕರ್ತರು ನಾಮಫಲಕಗಳಿಗೆ ಮಸಿ ಬಳಿಯುವ ಚಳುವಳಿ ಜೊತೆ ಬೋರ್ಡ್‍ಗಳನ್ನು ತೆಗೆದು ಹಾಕಲಾಗುತ್ತದೆ ಎಂದು ರಾಜೇಗೌಡ ಎಚ್ಚರಿಸಿದ್ದಾರೆ.

ಮುಖಂಡರಾದ ಶ್ರೀನಿವಾಸ್ ದೇವಾಂಗ, ದೇವರಾಜ್, ಜಯಪ್ರಕಾಶ್, ಹೇಮಂತ್, ಹರೀಶ್, ಲಕ್ಷ್ಮಣ್‍ಗೌಡ, ನೀಲೇಶ್, ರಘು, ಬಾಲು, ಮಂಜುನಾಥ್, ಚಂದ್ರು ಇತರರು ಹಾಜರಿದ್ದರು.

Related Articles

Leave a comment

Back to Top

© 2015 - 2017. All Rights Reserved.