ಪ್ರಿಸಂ ಸಹೋದಯ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಶ್ರೀ ಸಾಯಿಏಂಜಲ್ಸ್ ಶಾಲೆಗೆ ಸಮಗ್ರ ಪ್ರಶಸ್ತಿ

Kannada News, Regional No Comments on ಪ್ರಿಸಂ ಸಹೋದಯ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಶ್ರೀ ಸಾಯಿಏಂಜಲ್ಸ್ ಶಾಲೆಗೆ ಸಮಗ್ರ ಪ್ರಶಸ್ತಿ 7

ಚಿಕ್ಕಮಗಳೂರು: ಅಜ್ಜಂಪುರದಲ್ಲಿ ನಡೆದ 2017-18ನೇ ಸಾಲಿನ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಪ್ರಿಸಂ ಸಹೋದಯ ಕ್ಲಸ್ಟರ್ ಮಟ್ಟದ ಸಿಬಿಎಸ್‍ಇ ಪ್ರಥಮ ಗುಂಪು ಸ್ಪರ್ಧೆ ,ಅಥ್ಲೆಟಿಕ್ ಹಾಗೂ ಸಾಂಸ್ಕøತಿಕ ಸ್ಪರ್ಧೆಯಲ್ಲಿ ಸಿರಿಗಾಪುರ ಶ್ರೀ ಸಾಯಿಏಂಜಲ್ಸ್ ಶಾಲೆಯ ವಿದ್ಯಾರ್ಥಿಗಳು ಹಲವು ಬಹುಮಾನಕ್ಕೆ ಪಾತ್ರರಾಗಿ ಸಮಗ್ರ ಪ್ರಶಸ್ತಿ ಪಡೆದಿದ್ದಾರೆ ಎಂದು ಜಂಟಿ ಕಾರ್ಯದರ್ಶಿ ಎಂ.ಜೆ.ಕಾರ್ತಿಕ್ ತಿಳಿಸಿದ್ದಾರೆ.

100 ಹಾಗೂ 200 ಮೀ ಓಟದಲ್ಲಿ ಶ್ರಾವ್ಯ ಪ್ರಥಮ ಹಾಗೂ 4*400 ಮೀ ರಿಲೆ ದ್ವಿತೀಯಸ್ಥಾನ, ಸೃಷ್ಟಿಶಿವಾನಂದ 400ಮೀ ಓಟ ಪ್ರಥಮ ಹಾಗೂ 4*400 ಮೀ ರಿಲೆಸ್ಪರ್ಧೆಯಲ್ಲಿ ದ್ವಿತೀಯಸ್ಥಾನ ಪಡೆದಿದ್ದಾರೆ. ಕೃತಿ 400ಮೀ ಓಟ ಹಾಗೂ 4*400 ಮೀಟರ್ ರಿಲೆಸ್ಪರ್ಧೆಯಲ್ಲಿ ದ್ವಿತೀಯಸ್ಥಾನ, ನಿಸರ್ಗ 100 ಮೀ ಪ್ರಥಮ ಹಾಗೂ 200ಮೀ ತೃತೀಯ, ಆವಿಷ್ಕಾ ಶಾಟ್‍ಪುಟ್ ಪ್ರಥಮ, ಸ್ಪರ್ಷಿತ್ 400 ಮೀ ಪ್ರಥಮ, ಆದಿತ್ಯಾಶೆಟ್ಟಿ ಶಾಟ್‍ಪುಟ್ ದ್ವಿತೀಯ, ಅನುಷಾ 400ಮೀ ದ್ವಿತೀಯ, ಕಿರಣ್, ಶಮಂತ್ ಶಾಟ್‍ಪುಟ್ ಪ್ರಥಮ, ಸುಪ್ರಿತ್ 100ಮೀ ಪ್ರಥಮ, ಉತ್ತಮ್ 400ಮೀ ಪ್ರಥಮ,ಚಿಂತನಾ 4*400 ಮೀಟರ್ ರಿಲೆಸ್ಪರ್ಧೆಯಲ್ಲಿ ದ್ವಿತೀಯಸ್ಥಾನ ಪಡೆದಿದ್ದಾರೆ.

ವಾಲಿಬಾಲ್ ಹಾಗೂ ಕಬಡ್ಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ವಿಜೇತರಿಗೆ ಶಾಲೆಯ ಕಾರ್ಯದರ್ಶಿ ವಿಜಯಾನಾಗೇಶ್,ಪ್ರಾಚಾರ್ಯರಾದ ಯಾಮಿನಿ ಸವೂರ್, ಮುಖ್ಯಶಿಕ್ಷಕಿ ರಾಧಿಕಾಸುರೇಶ್ ಹಾಗೂ ದೈಹಿಕ ಶಿಕ್ಷಕರಾದ ರವಿನಾಯಕ್,ಕೃಷ್ಣವೇಣಿ ಮತ್ತು ಚಂದ್ರಶೇಖರ್ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.