ರಸಗುಲ್ಲಾ ಒಡೆತನದ ಕದನ ಅಂತ್ಯ: ರಸಗುಲ್ಲಾದ ಮೂಲ ಈ ರಾಜ್ಯದ್ದು

Kannada News, National No Comments on ರಸಗುಲ್ಲಾ ಒಡೆತನದ ಕದನ ಅಂತ್ಯ: ರಸಗುಲ್ಲಾದ ಮೂಲ ಈ ರಾಜ್ಯದ್ದು 19

ಕೋಲ್ಕೊತ್ತ:  ವಿವಾಹ ಮುಂತಾದ ಸಮಾರಂಭಗಳಲ್ಲಿ ರಸಗುಲ್ಲಾ ಸಿಹಿತಿಂಡಿ ಇದ್ದೆ ಇರುತ್ತದೆ. ಇದರ ಹೆಸರು ಕೇಳಿದರೆ ಒಮ್ಮೆ ತಿನ್ನಲೇಬೇಕು ಎನ್ನಿಸುವುದು ಸುಳ್ಳಲ್ಲ. ಆದರೆ ಈ ಸಿಹಿ ತಿಂಡಿಗಾಗಿ ಎರಡೂ ರಾಜ್ಯಗಳು ಕಾನೂನಿನ ಕದನಕ್ಕಿಳಿದಿದ್ದವು. ಇದೀಗ ತೀರ್ಪು ಬಂದಿದೆ.

ಬಹುತೇಕರು ಇದನ್ನು ಪಶ್ಚಿಮ ಬಂಗಾಳ ಮೂಲದ್ದು ಎಂದು ತಿಳಿದುಕೊಂಡಿದ್ದಾರೆ. ಆದರೆ ಕೆಲವು ವರ್ಷಗಳಿಂದ ಒಡಿಶಾ ರಾಜ್ಯ ಈ ಸಿಹಿ ತಿಂಡಿ ತಮ್ಮ ಮೂಲದೆಂದು ವಾದಿಸುತ್ತಾ ಕಾನೂನು ಸಮರಕ್ಕೆ ಇಳಿದಿತ್ತು. ಎರಡೂ ರಾಜ್ಯಗಳ ನಡುವಿನ ಫೈಟ್’ನಲ್ಲಿ ಈಗ ಬಂಗಾಳಕ್ಕೆ ಜಯ ಲಭಿಸಿದೆ.

2 ವರ್ಷಗಳ ವಾದದಲ್ಲಿ ಟ್ರೇಡ್ ಮಾರ್ಕ್ಸ್(ಜಿಐ) ಹಾಗೂ ಜಿಯೋಗ್ರಾಫಿಕಲ್ ಇಂಡಿಕೇಶನ್ ಸಂಸ್ಥೆ ರಸಗುಲ್ಲಾ ಸಹಿತಿಂಡಿ ಮೂಲತಃ ಪಶ್ಚಿಮ ಬಂಗಾಳ ಮೂಲದೆಂದು ತೀರ್ಪು ನೀಡಿದೆ. ಜಿಐ ಸಂಸ್ಥೆಯ ಸಹಾಯಕ ರಿಜಿಸ್ಟ್ರಾರ್ ಚೆನ್ನರಾಜ ಜಿ ನಾಯ್ಡು ‘ ರಸಗುಲ್ಲಾ  ಬಂಗಾಳ ಮೂಲದೆಂದು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಈ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ’ ರಸಗುಲ್ಲ ವಿಜಯಕ್ಕೆ ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.