ಅಧಿಕಾರಿಗಳ ಯಡವಟ್ಟು: ದಿವಂಗತ ಸಾಹಿತಿಗಳ ಜೊತೆ ಬದುಕಿರೋ ಪ್ರಸಿದ್ಧ ಸಾಹಿತಿಗಳಿಗೂ ಹೂ ಮಾಲೆ

Kannada News, Regional, Top News No Comments on ಅಧಿಕಾರಿಗಳ ಯಡವಟ್ಟು: ದಿವಂಗತ ಸಾಹಿತಿಗಳ ಜೊತೆ ಬದುಕಿರೋ ಪ್ರಸಿದ್ಧ ಸಾಹಿತಿಗಳಿಗೂ ಹೂ ಮಾಲೆ 54

ಧಾರವಾಡ: ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಯೋಜಿಸಿದ್ದ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ.

ಧಾರವಾಡ ನಗರದ ಕಲಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ದಿವಂಗತ ಸಾಹಿತಿಗಳ ಭಾವಚಿತ್ರಕ್ಕೆ ಹೂಮಾಲೆ ಹಾಕುವುದರ ಜೊತೆಗೆ ಸಾಹಿತಿ‌ ಗಿರೀಶ್ ಕಾರ್ನಾಡ್ ಮತ್ತು ಡಾ. ಚಂದ್ರಶೇಖರ ಕಂಬಾರ ಭಾವಚಿತ್ರಗಳಿಗೂ ಹೂ ಮಾಲೆ ಹಾಕಿದ್ದಾರೆ.

ಸಾಹಿತಿ‌ ಗಿರೀಶ್ ಕಾರ್ನಾಡ್ ಮತ್ತು ಡಾ. ಚಂದ್ರಶೇಖರ ಕಂಬಾರ ಭಾವಚಿತ್ರಗಳಿಗೆ ವಿಭೂತಿ ಬಳಿದು, ಕುಂಕುಮವಿಟ್ಟ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ. ಸಮಾರಂಭದ ಉದ್ಘಾಟನೆಗೆ ಅಗಮಿಸಿದ ಉನ್ನತ ಶಿಕ್ಷಣ ಸಚಿವ ತನ್ವೀರ್ ಸೇಠ್ ಅಧಿಕಾರಿಗಳ ಪ್ರಮಾದವನ್ನು ಗಮನಿಸಿ ಕೂಡಲೇ ಹೂವಿನ ಹಾರಗಳನ್ನು ತೆಗೆಯಲು ಸೂಚಿಸಿದರು.

Related Articles

Leave a comment

Back to Top

© 2015 - 2017. All Rights Reserved.