ಹಿಂದೋನ್‌ ವಾಯುನೆಲೆ ಪ್ರವೇಶಿಸಲು ಯತ್ನಿಸಿದ ಅಪರಿಚಿತನಿಗೆ ಗುಂಡೇಟು

Crime, Kannada News, National No Comments on ಹಿಂದೋನ್‌ ವಾಯುನೆಲೆ ಪ್ರವೇಶಿಸಲು ಯತ್ನಿಸಿದ ಅಪರಿಚಿತನಿಗೆ ಗುಂಡೇಟು 15

ಗಾಜಿಯಾಬಾದ್: ಗಾಜಿಯಾಬಾದ್’ನ ಹಿಂದೋನ್‌ ವಾಯು ನೆಲೆಯ ಆವರಣ ಗೋಡೆಯನ್ನು ಹಾರಿ ಒಳಪ್ರವೇಶಿಸಲು ಯತ್ನಿಸಿದ ಅಪರಿಚಿತ ವ್ಯಕ್ತಿಯೋರ್ವನಿಗೆ ಭದ್ರತಾ ಪಡೆಗಳು ಗುಂಡಿಕ್ಕಿದ್ದಾರೆ.

ಈ ವಿಚಾರವನ್ನು ಐಎಎಫ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆಂದು ಉಲ್ಲೇಖಿಸಿ ಎಎನ್‌ಐ ವರದಿ ಬಿತ್ತರಿಸಿದೆ. ಗುಂಡೇಟಿಗೆ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು,ಆತನನ್ನು ಉತ್ತರಪ್ರದೇಶದ ಪ್ರತಾಪಗಡದ ನಿವಾಸಿ ಸುಜೀತ್‌ ಎಂದು ಗುರುತಿಸಲಾಗಿದೆ. ನನ್ನ ಬಳಿ ತಿನ್ನಲು ಏನೂ ಆಹಾರವಿಲ್ಲದ ಕಾರಣ ಸುಮ್ಮನೆ ಆವರಣ ಗೋಡೆಯಲ್ಲಿ ಕುಳಿತುಕೊಳ್ಳಲು ಗೋಡೆ ಏರಿದೆಯೆಂದು ಆತ ಹೇಳಿಕೆ ನೀಡಿದ್ದಾನೆ.

Related Articles

Leave a comment

Back to Top

© 2015 - 2017. All Rights Reserved.