ಭೇರುಂಡ ಹೆಸರಿನಲ್ಲಿ ಸುದ್ದಿಪತ್ರ ಆರಂಭಿಸಿದ ಯದುವೀರ್: ಬ್ಲಾಗ್‌ನಲ್ಲಿ ರಾಜರ ಮನಸಿನ ಮಾತನ್ನು ನೋಡಿ

BREAKING NEWS, Kannada News, Regional, Top News No Comments on ಭೇರುಂಡ ಹೆಸರಿನಲ್ಲಿ ಸುದ್ದಿಪತ್ರ ಆರಂಭಿಸಿದ ಯದುವೀರ್: ಬ್ಲಾಗ್‌ನಲ್ಲಿ ರಾಜರ ಮನಸಿನ ಮಾತನ್ನು ನೋಡಿ 75

ಮೈಸೂರು: ರಾಜರ ಇತಿಹಾಸ ಪರಿಚಯಿಸಲು ಮೈಸೂರು ರಾಜವಂಶಸ್ಥ ಮುಂದಾಗಿದ್ದು, ಬ್ಲಾಗ್‌ನಲ್ಲಿ ತಮ್ಮ ಮನಸಿನ ಮಾತನ್ನು ಯದುವಂಶದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಂಚಿಕೊಂಡಿದ್ದಾರೆ.

ವೈಯುಕ್ತಿಕ ವೆಬ್‌ಸೈಟ್‌‌ನಲ್ಲಿ ಮೊದಲ ನ್ಯೂಸ್ ಲೆಟರ್ ಬಂದಿದ್ದು, ಭೇರುಂಡ ಹೆಸರಿನಲ್ಲಿ ಸುದ್ದಿಪತ್ರ ಆರಂಭಿಸಿದ್ದಾರೆ. “ದಸರಾ ವಿಶೇಷಾಂಕದ ಸುದ್ದಿಪತ್ರ ಬಿಡುಗಡೆ. ಉದ್ಘಾಟನೆಯ ಸುದ್ದಿ ಪತ್ರ” ಎಂದು ಬ್ಲಾಗ್‌ನಲ್ಲಿ ಪ್ರಕಟಿಸಿದ್ದಾರೆ.

ಬ್ಲಾಗ್‌ನಲ್ಲಿ ಬರವಣಿಗೆ ಆರಂಭಿಸಿದ ಯದುವೀರ್, ಈ ನ್ಯೂಸ್ ಲೆಟರ್ ನಿಮಗೆಲ್ಲ ನಮ್ಮ ಪ್ರಾಥಮಿಕ ಮಾಹಿತಿ ನೀಡಲಿದೆ. ರಾಜಮನೆತನದ ಇತಿಹಾಸ ಮತ್ತು ಪರಂಪರೆಯನ್ನು ತಿಳಿಸಲಿದೆ. ಈ ಬ್ಲಾಗ್ ಮೂಲಕ ನಮ್ಮ ಕಾರ್ಯಕ್ರಮಗಳು ನಿಮಗೆ ತಿಳಿಯಲಿದೆ. ರಾಜಮನೆತನ ಕಾರ್ಯಕ್ರಮಗಳಲ್ಲಿ ಸೇವೆಯು ಒಂದು ಭಾಗ. ನಾವು ನೀವು ಅರ್ಥ ಮಾಡಿಕೊಳ್ಳಲು ಈ ಪತ್ರ ನಾಂದಿಯಾಗಲಿದೆ, ನನಗೆ ಬರವಣಿಗೆ ಇಷ್ಟ.  ನನ್ನ ಆಲೋಚನೆಗಳನ್ನ ಈ ಮೂಲಕ ಹಂಚಿಕೊಳ್ಳಲಿದ್ದೇನೆ ಎಂದು ಶುಭಾಶಯದೊಂದಿಗೆ ಬರವಣಿಗೆ ಯದುವೀರ್ ಬ್ಲಾಗ್ ಆರಂಭಿಸಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.