ಗಾಲ್ಫ್ ಕ್ಲಬ್ ನಲ್ಲಿ ಕಾಣಿಸಿಕೊಂಡ ನಾಗರಹಾವು: ಬೆದರಿದ ಸಿಬ್ಬಂದಿ

Kannada News, Regional No Comments on ಗಾಲ್ಫ್ ಕ್ಲಬ್ ನಲ್ಲಿ ಕಾಣಿಸಿಕೊಂಡ ನಾಗರಹಾವು: ಬೆದರಿದ ಸಿಬ್ಬಂದಿ 13

ಮೈಸೂರು: ನಗರದ ಗಾಲ್ಫ್ ಕ್ಲಬ್ ನಲ್ಲಿ ನಾಗರಹಾವು ಕಾಣಿಸಿಕೊಂಡಿದ್ದು ಮೈದಾನದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿ ಹೌಹಾರಿದ ಘಟನೆಯೊಂದು ನಡೆದಿದೆ.

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಗಾಲ್ಫ್ ಕ್ಲಬ್ ನ ಅಲಂಕಾರಿಕ ಗಿಡಗಳ ಮಧ್ಯೆ ನಾಗರಹಾವು ಕಾಣಿಸಿಕೊಂಡಿದೆ. ಮುಂಜಾನೆಯ ಬಿಸಿಲಿಗೆ ಮೈವೊಡ್ಡಿ ವಿರಮಿಸುತ್ತಿದ್ದ ಹಾವನ್ನು ಕಂಡು ಸಿಬ್ಬಂದಿ ಬೆದರಿದ್ದಾರೆ. ತಕ್ಷಣವೇ ಸಿಬ್ಬಂದಿಗಳು ಉರುಗ ತಜ್ಞ ಕೆಂಪರಾಜುಗೆ  ಮಾಹಿತಿ ನೀಡಿದ್ದಾರೆ. ಕ್ಲಬ್ ನ ಸುತ್ತಮುತ್ತಲು ಅರಣ್ಯ ಪ್ರದೇಶವಿರುವುದರಿಂದ ಹಾವುಗಳು ಮತ್ತು ಅರಣ್ಯ ಪ್ರಾಣಿಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಸ್ಥಳಕ್ಕೆ ಆಗಮಿಸಿದ ಕೆಂಪರಾಜು ಹಾವನ್ನು ಸೆರೆಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.