ಖಾಸಗಿ ವೈದ್ಯರ ಮುಷ್ಕರಕ್ಕೆ ಚಾಮರಾಜನಗರ ರೈತ ಬಲಿ

Kannada News, Regional, Top News No Comments on ಖಾಸಗಿ ವೈದ್ಯರ ಮುಷ್ಕರಕ್ಕೆ ಚಾಮರಾಜನಗರ ರೈತ ಬಲಿ 30

ಚಾಮರಾಜನಗರ: ಖಾಸಗಿ ವೈದ್ಯರು ಮತ್ತು  ಸರ್ಕಾರ ಹಗ್ಗ ಜಗ್ಗಾಟಕ್ಕೆ ಮತ್ತೊಂದು‌ ಜೀವ ಬಲಿಯಾಗಿದೆ. ಹಸು ತಿವಿದು ಗಾಯಗೊಂಡಿದ್ದ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾರೆ.

ಮಾದೇಗೌಡ(52) ಮೃತ ರೈತ.  ಚಾಮರಾಜನಗರ ಜಿಲ್ಲೆಯ ಯಳದುಂಬ ಗ್ರಾಮ ವಾಸಿಯಾದ ಮಾದೇಗೌಡ ಅವರು ಹಸು ತಿವಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಗೊಂಡ ಅವರನ್ನು ತಕ್ಷಣಕ್ಕೆ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.  ಅಲ್ಲಿ ಸೂಕ್ತ ಚಿಕಿತ್ಸೆ ಲಭಿಸದ ಹಿನ್ನೆಲೆಯಲ್ಲಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚಿಸಿದರು. ಆದರೆ ಅಲ್ಲಿ ಕೂಡ ಸೂಕ್ತ ಚಿಕಿತ್ಸೆ ಸಿಗದ ಕಾರಣ ಅವರನ್ನು ಬೆಂಗಳೂರಿಗೆ ಕರೆತರಲಾಗಿದೆ. ಈ ವೇಳೆ ಮಾರ್ಗ  ಮಧ್ಯೆ ಅಸುನೀಗಿದ್ದಾರೆ. ಖಾಸಗಿ ಆಸ್ಪತ್ರೆಗಳು ಬಂದ್  ಆದ  ಹಿನ್ನಲೆಯಲ್ಲಿ  ರೈತನಿಗೆ ಚಿಕಿತ್ಸೆಗಾಗಿ ಕುಟುಂಬಸ್ಥರು ಪರದಾಡಿದ್ದಾರೆ. ಅಲ್ಲದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ವೈದ್ಯಕೀಯ ಸೇವೆ ಇಲ್ಲದಂತಾಗಿದ್ದು ರೈತನ ಸಾವಿಗೆ  ಮತ್ತೊಂದು ಕಾರಣವಾಗಿದೆ.

Related Articles

Leave a comment

Back to Top

© 2015 - 2017. All Rights Reserved.