ನಾಯಿ ಮೇಲೆ ಚಿರತೆ ದಾಳಿ: ಗ್ರಾಮಸ್ಥರಲ್ಲಿ ಆತಂಕ

Kannada News, Regional, Top News No Comments on ನಾಯಿ ಮೇಲೆ ಚಿರತೆ ದಾಳಿ: ಗ್ರಾಮಸ್ಥರಲ್ಲಿ ಆತಂಕ 33

ಮಂಡ್ಯ: ನಾಯಿ ಮೇಲೆ ಚಿರತೆ ದಾಳಿ ಮಾಡಿದೆ. ಕೆ.ಆರ್.ಪೇಟೆ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ದಾಳಿ ನಡೆದಿದ್ದು, ಗ್ರಾಮಕ್ಕೆ ನುಗ್ಗಿದ್ದ ಚಿರತೆ ಸಾಕು ನಾಯಿ ಮೇಲೆ ದಾಳಿ ಮಾಡಿ ಎಳೆದೊಯ್ಯಲು ಯತ್ನಿಸಿದೆ ಎಂದು ಹೇಳಲಾಗುತ್ತಿದೆ.

ನಾಯಿ ಚೀರಾಟದಿಂದ ಮಾಲೀಕರು ದೊಣ್ಣೆ ಹಿಡಿದು ಚಿರತೆಯನ್ನು ಓಡಿಸಿದ್ದಾರೆ. ರಂಗಸ್ವಾಮಿ ಎಂಬುವವರು ಸಾಕಿದ್ದ ಪಮೋರಿಯನ್ ನಾಯಿ ಮೇಲೆ ಚಿರತೆ ದಾಳಿ ನಡೆಸಿ ಕತ್ತಿನ ಭಾಗಕ್ಕೆ ಕಚ್ಚಿದೆ. ತೀವ್ರವಾಗಿ ಗಾಯಗೊಂಡಿರುವ ನಾಯಿಗೆ ಚಿಕಿತ್ಸೆ ನೀಡಲಾಗಿದೆ. ಚಿರತೆ ದಾಳಿಯಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಚಿರತೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರ ಆಗ್ರಹಿಸಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.