‘ಧರ್ಮಸ್ಥಳದಿಂದ ಸರ್ವಧರ್ಮಗಳ ಮೌಲಿಕತೆಯ ಪ್ರಸರಣ’

Kannada News, Regional No Comments on ‘ಧರ್ಮಸ್ಥಳದಿಂದ ಸರ್ವಧರ್ಮಗಳ ಮೌಲಿಕತೆಯ ಪ್ರಸರಣ’ 26

ಎಲ್ಲ ಧರ್ಮಗಳ ಮೌಲಿಕತೆ ಸಾರುತ್ತಿರುವ ಧರ್ಮಸ್ಥಳದ ಶ್ರೀಕ್ಷೇತ್ರದಲ್ಲಿ ಸರ್ವಧರ್ಮ ಸಮ್ಮೇಳನ ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ಬೆಂಗಳೂರಿನ ಸೇಂಟ್ ಪೀಟರ‍್ಸ್ ಪಾಂಟಿಫಿಕಲ್ ಇನ್‌ಸ್ಟಿಟ್ಯೂಟ್‌ನ ಕುಲಸಚಿವರಾದ ಆಂತೋಣಿ ರಾಜ್ ನುಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಪ್ರಯುಕ್ತ ಅಮೃತವರ್ಷಿಣಿ ಸಭಾಂಗಣದಲ್ಲಿ ಆಯೋಜಿಸಿದ್ದ ಸರ್ವಧರ್ಮ ಸಮ್ಮೇಳನದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು. 

ಎಲ್ಲಾ ಧರ್ಮಗಳು ಬೋಧಿಸುವುದು ಒಂದೇ ಧರ್ಮ, ಅದು ಮಾನವ ಧರ್ಮ. ’ಧರ್ಮಾಂಧರಾಗದಿರಿ. ಬದಲಿಗೆ ಮನುಷ್ಯತ್ವದೊಂದಿಗಿರಿ’ ಎಂಬುದು ಯೇಸುವಿನ ಸಂದೇಶವಾಗಿತ್ತು. ಹಾಗೆಯೇ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯವೂ ಇದೇ ಆಗಿತ್ತು ಎಂದು ಹೇಳಿದರು.

ಮನುಷ್ಯನ ಸರ್ವತೋಮುಖ ಅಭಿವೃದ್ದಿಗಾಗಿ, ರಕ್ಷಣೆಗಾಗಿ ಅವನನ್ನು ಸನ್ಮಾರ್ಗದಲ್ಲಿ ನೆಡೆಸುವುದಕ್ಕಾಗಿ ಅವನಲ್ಲಿ ಮಾನವೀಯ ಮೌಲ್ಯ ಬಿತ್ತುವುದಕ್ಕಾಗಿ ಮತ್ತು ಇರುವ ಕೌರ್ಯ ಶೋಷಣೆಗಳನ್ನು ದಮನ ಮಾಡುವುದಕ್ಕಾಗಿ ಧರ್ಮದ ಅಸ್ತಿತ್ವವಿರುತ್ತದೆ. ಧರ್ಮದ ಈ ಸತ್ವವನ್ನು ಅರಿತುಕೊಂಡು ಬದುಕಬೇಕು ಎಂದು ಸಲಹೆ ನೀಡಿದರು.

ಇಂದಿನ ಪ್ರಪಂಚದಲ್ಲಿ ಧರ್ಮದ ರೈಲು ಹಳಿ ತಪ್ಪಿದೆ. ಮಾನವೀಯತೆ ಕಾಣೆಯಾಗುತ್ತಿದೆ. ಕುರುಡು ಸಂಪ್ರಾದಾಯಗಳಲ್ಲಿ ತೊಡಗಿಕೊಂಡು ಮನುಷ್ಯತ್ವವನ್ನು ಕಡೆಗಣಿಸಲಾಗುತ್ತಿದೆ. ಮನುಜರನ್ನು ಮೇಲೆತ್ತುವಂಥ ಧರ್ಮದ ಆಶಯಗಳನ್ನು ಹಿನ್ನೆಲೆಗೆ ಸರಿಸಲಾಗುತ್ತಿದೆ. ಜಾತಿ, ಬಾಷೆ, ಬಣ್ಣ, ಸಂಸ್ಕೃತಿ ಸೇರಿದಂತೆ ವಿವಿಧ ಕಟ್ಟು ಪಾಡುಗಳ ಹೆಸರಿನಲ್ಲಿ ಮನುಜರನ್ನ ವಿಂಗಡಿಸಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಧರ್ಮಕ್ಕೆ ತದ್ವಿರುದ್ಧವಾದ ಅಂಶಗಳು ಇತರರನ್ನು ಹಾದಿ ತಪ್ಪಿಸುತ್ತಿವೆ. ಅಂಬೇಡ್ಕರ್ ಮತ್ತು ಕ್ರಿಸ್ತ ಅಂಧಶ್ರದ್ಧೆಗಳನ್ನು ಖಂಡಿಸಿದರು. ಆಪತ್ತಿನಲ್ಲಿರುವವರಿಗೆ ಆಪ್ತನಾಗಬೇಕು. ಕೊರತೆಯಲ್ಲಿರುವವರಿಗೆ ನೆರವಾಗಬೇಕು. ಅದೇ ನಿಜವಾದ ಧರ್ಮ. ಮಾನವಿಯತೆಯೇ ಅದರ ಮರ್ಮ ಎಂಬುದನ್ನು ಅರಿತುಕೊಳ್ಳಬೇಕು. ಮಾನವನ ಉದ್ಧಾರದ ಹೆಸರಿನಲ್ಲಿ ಬಡವರ ಕಲ್ಯಾಣದ ನೆಪದಲ್ಲಿ ಬಹು ದೊಡ್ಡ ಶಾಲೆಗಳು ಆಸ್ಪತ್ರೆಗಳು ಇತ್ಯಾದಿ ಕಟ್ಟಡಗಳು ತಲೆ ಎತ್ತಿ ನಿಂತಿವೆ. ಇಂಥ ಸುಸಜ್ಜಿತ ಕಟ್ಟಡಗಳಷ್ಟೇ ಇವೆ. ಆದರೆ ಮಾನವಿಯತೆಯೇ ಇಲ್ಲವಾಗಿದೆ ಎಂದರು. 

ವರದಿ: ಚರಿತ ಬಿ.ಸಿ

ಚಿತ್ರಗಳು: ಪೌಲೋಸ್ ಬಿ.

ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ ಎಸ್‌ಡಿಎಂ ಕಾಲೇಜು, ಉಜಿರೆ

 

 

Related Articles

Leave a comment

Back to Top

© 2015 - 2017. All Rights Reserved.