‘ಜೈನಧರ್ಮದ ಸದಾಶಯಗಳು ಜನಜನಿತವಾಗಲಿ’: ಪದ್ಮರಾಜ ದಂಡಾವತಿ

Kannada News, Regional No Comments on ‘ಜೈನಧರ್ಮದ ಸದಾಶಯಗಳು ಜನಜನಿತವಾಗಲಿ’: ಪದ್ಮರಾಜ ದಂಡಾವತಿ 129

ಉಜಿರೆ: ಅಲ್ಪಸಂಖ್ಯಾತ ಎಂದು ಪರಿಗಣಿತವಾಗಿರುವ ಜೈನಧರ್ಮದ ಮೌಲಿಕ ಆಶಯಗಳು ವ್ಯಾಪಕ ಮನ್ನಣೆ ಪಡೆಯಬೇಕಿದೆ ಎಂದು ಪ್ರಜಾವಾಣಿ ಪತ್ರಿಕೆಯ ನಿವೃತ್ತ ಸಹಸಂಪಾದಕ ಪದ್ಮರಾಜ ದಂಡಾವತಿ ಹೇಳಿದರು.

ಅವರು ಧರ್ಮಸ್ಥಳದ ಲಕ್ಷದೀಪೋತ್ಸವದಲ್ಲಿ ಗುರುವಾರದಂದು ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಸರ್ವಧರ್ಮ ಸಮ್ಮೇಳನ ಕಾರ್ಯಕ್ರಮದಲ್ಲಿ ಜೈನ ಧರ್ಮದ ಬಗ್ಗೆ ಉಪನ್ಯಾಸ ನೀಡಿದರು. ಭಾರತ ಎಂಬ ಹೆಸರು ಈ ದೇಶಕ್ಕೆ ಬಂದಿರುವುದು ಜೈನ ಧರ್ಮದ ಪ್ರಥಮ ತೀರ್ಥಾಂಕ ವೃಷಾಭನಾಥರಿಂದ. ದೇಶದ ಧರ್ಮವಾಗಿದ್ದ ಜೈನ ಧರ್ಮವನ್ನು ಇಂದು ಅಲ್ಪಸಂಖ್ಯಾತ ಧರ್ಮ ಎಂದು ಪರಿಗಣಿಸಲಾಗುತ್ತಿದೆ. ಈ ಧರ್ಮ ಹಲವರ ಮೇಲೆ ಪ್ರಭಾವ ಬೀರಿದೆ. ವಿವಿಧ ಧರ್ಮಗಳ ಸತ್ವ ಹೆಚ್ಚಿಸುವುದಕ್ಕೆ ಬೇಕಾದ ಆಶಯಗಳೊಂದಿಗೆ ಗುರುತಿಸಿಕೊಂಡಿದೆ ಎಂದರು.

ಪಠ್ಯಪುಸ್ತಕದ ಕ್ರಮದಲ್ಲಿ ಮಹಾವೀರ ತೀರ್ಥಂಕರರನ್ನು ಜೈನ ಧರ್ಮದ ಸ್ಥಾಪಕ ಎಂದು ತಿಳಿಸಿದ್ದಾರೆ. ಆದರೆ ಈ ಧರ್ಮ ಬಹಳ ಹಿಂದಿನದ್ದಾಗಿದೆ. ಮಹಾವೀರ 24ನೇ ತಿರ್ಥಂಕರರು. ಅವರು ತಿಳಿಸಿಕೊಟ್ಟ ಅಹಿಂಸಾ  ತತ್ವಗಳನ್ನು ಧರ್ಮದವರು ಪಾಲಿಸುತ್ತಾರೆ. ಸತ್ಯ ಮತ್ತು ಅಹಿಂಸೆಗೆ ಜೈನ ಧರ್ಮ ಮೊದಲ ಪ್ರಾಧಾನ್ಯತೆಯನ್ನು ನೀಡುತ್ತದೆ ಎಂದು
ತಿಳಿಸಿದರು.

ಜಗತ್ತಿನಲ್ಲಿರುವ ಸಕಲ ಜೀವಿಗಳಿಗೆ ಜೀವವಿದೆ, ಶಕ್ತಿ ಇದೆ ಎಂಬುದನ್ನು ಜೈನ ಧರ್ಮ ಸ್ಪಷ್ಟಪಡಿಸಿದೆ. ಹೆಣ್ಣು ಮಕ್ಕಳನ್ನು ಮತ್ತು ಗರ್ಭಗುಡಿಯನ್ನು ರಕ್ಷಿಸುವಂಥದ್ದು ಬಹಳ ಪವಿತ್ರ ಕಾರ್ಯವಾಗಿರುತ್ತದೆ. ವಿವಿಧೆಡೆ ಬಾಹುಬಲಿಯನ್ನು ಸ್ಥಾಪಿಸುವುದರ ಮೂಲಕ ಜೈನಧರ್ಮದವರು ಶಾಂತಿಯನ್ನು ಬೋಧಿಸಿದ್ದಾರೆ. 48 ಮುನಿಗಳ ಭಕ್ತಿ ಸ್ತೋತ್ರಗಳನ್ನು ಪ್ರತಿನಿತ್ಯ ಜೈನರು ತಮ್ಮ ಮನೆಯಲ್ಲಿ ಹೇಳುವ ಪರಿಪಾಠವಿದೆ. ಮೌಲ್ಯದ ಪ್ರತೀಕ ಜೈನಧರ್ಮವಾಗಿದೆ ಎಂದರು. ಜೈನ ಧರ್ಮದ ಶಕ್ತಿಯನ್ನು ಇಂದು ಕಳೆದುಕೊಳ್ಳುತ್ತಿದೆಯಾದರೂ ಅದರ ಪ್ರಭಾವ ತುಂಬಾ ದೊಡ್ಡದು. ಯಾವಾಗ ನನ್ನ ಮಾತು ಸತ್ಯ ನನೊಬ್ಬನೆ ಸರಿ ಎಂಬ ಪ್ರವೃತ್ತಿ ಬರುತ್ತದೆಯೊ ಆಗ ಮತಾಂಧತೆ ಹುಟ್ಟಿಕೊಳ್ಳುತ್ತದೆ ಎಂದರು.

ವರದಿ: ರಾಜೇಶ್ವರಿ ಬೆಳಾಲು
ಚಿತ್ರ: ಅಭಿನಂದನ್
ಸ್ನಾತಕೊತ್ತರ ಪತ್ರಿಕೋದ್ಯಮ ವಿಭಾಗ
ಎಸ್.ಡಿ.ಎಮ ಕಾಲೇಜು ಉಜಿರೆ

Related Articles

Leave a comment

Back to Top

© 2015 - 2017. All Rights Reserved.