ಉತ್ತಮ ಯೋಜನೆಗಳು ಸಮಾಜವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯುತ್ತವೆ

Kannada News, Regional No Comments on ಉತ್ತಮ ಯೋಜನೆಗಳು ಸಮಾಜವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯುತ್ತವೆ 23
ಉಜಿರೆ: ಉತ್ತಮ ಯೋಜನೆಗಳು ಸಮಾಜವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯುತ್ತವೆ ಎಂದು ವೆಲ್ಲೂರ್ ತಿರುಮಲೈಕೊಡಿ ಶ್ರೀ ನಾರಾಯಣೀ ಪೀಠಂನ ಶ್ರೀ ಶಕ್ತಿ ಅಮ್ಮ  ಹೇಳಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಅಂಗವಾಗಿ ನಡೆದ ಸರ್ವಧರ್ಮ ಸಮ್ಮೇಳವನ್ನು  ಉದ್ಘಾಟಿಸಿ ಮಾತನಾಡಿದರು. 
 
ಅನ್ನದಾನಕ್ಕೆ  ಶ್ರೀ ಕ್ಷೇತ್ರ ಧರ್ಮಸ್ಥಳ  ಹೆಸರುವಾಸಿಯಾಗಿದೆ. ಶ್ರೀ ಕ್ಷೇತ್ರದಲ್ಲಿ ಸಾವಿರಾರು ಜನರಿಗೆ  ಅನ್ನಸಂತರ್ಪಣೆ ಮಾಡಲಾಗುತ್ತದೆ. ಶ್ರೀ ಕ್ಷೇತ್ರವು ಇದಕ್ಕಾಗಿಯೇ ಪ್ರಸಿದ್ಧಿ ಪಡೆದಿದೆ. ಧರ್ಮ ಭಕ್ತಿಗೆ ತುಂಬಾ ಪ್ರಾಧಾನ್ಯತೆಯನ್ನು ನೀಡುತ್ತದೆ. ಭಕ್ತಿ ಮತ್ತು ಒಳ್ಳೆಯ ಕಾರ್ಯಗಳು ಎಲ್ಲರ ಮನಸ್ಸಿಗೆ ಬೇಗ ತಲುಪುತ್ತವೆ. ಇದುವೇ ಧರ್ಮದ ಶಕ್ತಿ ಎಂದರು.
ನಾವೆಲ್ಲರೂ ಸಹೋದರತ್ವದಿಂದ ಬಾಳುತ್ತಿದ್ದೇವೆ. ಇಲ್ಲಿ ಎಲ್ಲಾ ಧರ್ಮಗಳು ಒಂದಾಗಿವೆ.  ಉತ್ತಮ ಬದುಕಿಗಾಗಿ ಎಲ್ಲಾ ಧರ್ಮಗಳನ್ನು ಗೌರವಿಸುವುದು ಒಳಿತು ಎಂದು ಹೇಳಿದರು. ಭಕ್ತಿ ಎಂದರೆ ಪ್ರೀತಿ, ಆ ಪ್ರೀತಿ ದೈವಿಕ ರೀತಿಯಲ್ಲಿ ನಮ್ಮ ಘನತೆ- ಗೌರವನ್ನು ಕಾಪಾಡುತ್ತದೆ. ಕೆಟ್ಟ ವಿಷಯಗಳನ್ನು ದೂರಮಾಡಲು ಭಕ್ತಿಯು ಸಹಾಯ ಮಾಡುತ್ತದೆ. ಭಕ್ತಿಯಿಂದ ಎಲ್ಲವನ್ನು ಪಡೆಯಲು ಸಾಧ್ಯ. ಭಕ್ತಿಯಿಂದ ಉತ್ತಮ ಸಮಾಜವನ್ನೇ ನಿರ್ಮಾಣ ಮಾಡಬಹುದು. ಕೆಡುಕನ್ನು ಉಂಟುಮಾಡಬಾರದು ಎಂಬ ಎಚ್ಚರವು  ಪ್ರೀತಿಯಾಗಿ ಬದಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗೆಡೆ ಸ್ವಾಗತಿಸಿದರು. ಚಂದನ್ ಕಾಮತ್ ವಂದಿಸಿದರು. ಡಾ.ಸಂಪತ್ ಕುಮಾರ್ ಬಿ ಮತ್ತು ಡಾ.ಕುಮಾರ್ ಹೆಗಡೆ ಕಾರ್ಯಕ್ರಮವನ್ನು ನಿರೂಪಿಸಿದರು.
ವರದಿ: ಶಶಿಕಲಾ ಬೆತ್ತೋಡಿ
ಚಿತ್ರ: ಪೌಲೋಸ್. ಬಿ
ಸ್ನಾತ್ತಕೋತ್ತರ ಪತ್ರಿಕೋದ್ಯಮ ವಿಭಾಗ
ಎಸ್.ಡಿ.ಎಂ ಕಾಲೇಜು ಉಜಿರೆ.

Related Articles

Leave a comment

Back to Top

© 2015 - 2017. All Rights Reserved.