ಗೌರಿ ಲಂಕೇಶ್ ಹತ್ಯೆ ಮಾಡಿದವರು ಹೇಡಿಗಳು: ಪ್ರೊ. ದಯಾನಂದ ಮಾನೆ

BREAKING NEWS, Kannada News, Regional No Comments on ಗೌರಿ ಲಂಕೇಶ್ ಹತ್ಯೆ ಮಾಡಿದವರು ಹೇಡಿಗಳು: ಪ್ರೊ. ದಯಾನಂದ ಮಾನೆ 54

ಮೈಸೂರು: ಪ್ರಜಾಪ್ರಭುತ್ವದಲ್ಲಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಇದೆ. ಸಹೋದರತೆ ಮತ್ತು ಭ್ರಾತೃತ್ವ ವನ್ನು ಬೌದ್ಧ ಧರ್ಮ ಸಾರುತ್ತದೆ. ನಮ್ಮ ಬೌದ್ಧಿಕ ದಾರಿದ್ರ್ಯದ ಕೊರತೆಯಿಂದ ಗೌರಿ ಲಂಕೇಶ್ ಹತ್ಯೆ ತರಹದ ಘಟನೆಗಳು ಇನ್ನೂ ನಡೆಯುತ್ತಿವೆ, ನನ್ನ ಪ್ರಕಾರ ಗೌರಿ ಲಂಕೇಶ್ ಹತ್ಯೆ ಮಾಡಿದವರು ಹೇಡಿಗಳು ಎಂದು ಮೈಸೂರು ವಿವಿಯ ಪ್ರಭಾರ ಕುಲಪತಿಗಳಾದ ಫ್ರೊ. ದಯಾನಂದ ಮಾನೆ ತಮ್ಮ ಉದ್ಘಾಟನಾ ಭಾಷಣದಲ್ಲಿ ತಿಳಿಸಿದರು.

ಮೈಸೂರು ವಿವಿಯಲ್ಲಿ ಆಯೋಜಿಸಲಾಗಿದ್ದ ಡಾ. ಎಂ . ಎಂ . ಕಲಬುರ್ಗಿ ವೇದಿಕೆಯಡಿ, ‘ ನಮ್ಮ ಗೌರಿ’ ಸಾಕ್ಷ್ಯ ಚಿತ್ರ ಪ್ರದರ್ಶನ ಕಾರ್ಯಕ್ರಮವನ್ನು ಕುರಿತು, ಮಾತನಾಡಿದರು.

ನಾನು ಮತ್ತು ಗೌರಿ ಒಳ್ಳೆಯ ಸ್ನೇಹಿತರಾಗಿದ್ದೇವು. 2002 ರಿಂದ 2017 ರವರೆಗಿನ ಗೌರಿಯ ಛಾಯಾಚಿತ್ರಗಳನ್ನು ಸಂಗ್ರಹಿಸಿ, ಕೇವಲ 22ದಿನಗಳ ಕಾಲ ಮಾಡಿದ 1 ಘಂಟೆಗಳ ಈ ಸಾಕ್ಷ್ಯಚಿತ್ರ ಗೌರಿಯ ಸಂಪೂರ್ಣ ಮಾಹಿತಿ ಹೊಂದಿದೆ ಜೊತೆಗೆ ಇದು 173ನೇ ಸಾಕ್ಷ್ಯ ಚಿತ್ರ ಪ್ರದರ್ಶನ ಎಂದು ನಿರ್ದೇಶಕರು ಹಾಗೂ ಹೊರಾಟಗಾರರಾದ ದೀಪು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಗತಿಪರ ಚಿಂತಕರಾದ ಪ್ರೋ. ಕೆ. ಎಸ್. ಭಗವಾನ್, ಕೆ.ಎಸ್.ಓ.ಯು ಸಿಂಡಿಕೇಟ್ ಸದಸ್ಯರಾದ ಕೆ. ಎಸ್. ಶಿವರಾಂ, ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಫ್ರೊ. ಬಿ. ಪಿ. ಮಹೇಶ್ ಚಂದ್ರಗುರು ಅವರು ಉಪಸ್ಥಿತರಿದ್ದರು.

ವರದಿ: ಶ್ವೇತಾ. ಜಿ

Related Articles

Leave a comment

Back to Top

© 2015 - 2017. All Rights Reserved.