ನೊ ಕಟಿಂಗ್ಸ್: ಡ್ರಗ್ ಕಂಟ್ರೋಲ್’ಗೆ ಮತ್ತೊಂದು ದೂರು

Crime, Kannada News, Regional, Top News No Comments on ನೊ ಕಟಿಂಗ್ಸ್: ಡ್ರಗ್ ಕಂಟ್ರೋಲ್’ಗೆ ಮತ್ತೊಂದು ದೂರು 24

ಚಾಮರಾಜನಗರ: ರೋಗಿಗಳು ಅಲ್ಪ ಪ್ರಮಾಣದಲ್ಲಿ ಟ್ಯಾಬ್ಲೆಟ್ ಕೇಳಿದರೆ ಕೊಡೊಕಾಗೊಲ್ಲ (ನೊ ಕಟಿಂಗ್ಸ್) ಎಂಬ ಆರೋಪಕ್ಕೆ ಸಂಬಂದಿಸಿದಂತೆ ಈಗ ಸಹಾಯಕ ನಿಯಂತ್ರಣ ಅದಿಕಾರಿಗಳ ಕಚೇರಿಗೆ ದೂರು ದಾಖಲಾಗಿದೆ.

ಸೇವೆ ಮಾಡುವ ಕ್ಷೇತ್ರವಾಗಿರುವ ಕೆಲವು ಮೆಡಿಕಲ್ ಸ್ಟೋರ್ ಗಳು ಈಗ ಹಣ ಬಾಚುವ ಕಾರ್ಯಗಳಿಗೆ ಮುಂದಾಗಿದೆ ಎಂದರೆ ತಪ್ಪಾಗಲಾರದು. ಹಿಂದೆ ಸಿದ್ದಪ್ಪಾಜಿ ಎಂಬುವವರು ಕೃಷ್ಣ ಮೆಡಿಕಲ್ ಸ್ಟೋರ್ ಬಗ್ಗೆ ದೂರು ಇಟ್ಟಿದ್ದರು.ಆದರೆ ಅಂದಿನ ಅದಿಕಾರಿ ಏನೋ ವಿಚಾರಣೆ‌ ಮಾಡಿ ಬುದ್ದಿ ಹೇಳಿದ್ದೇವೆ ಎನ್ನುವ ಉಡಾಪೆ ಉತ್ತರ ಕೊಟ್ಟಿದ್ದರು.

ಈಗ ಪ್ರಶಾಂತ್ ಎಂಬುವವರು ಇದೆ ವಿಚಾರಕ್ಕೆ ಮತ್ತೊಂದು ಮೆಡಿಕಲ್ ವಿರುದ್ಧ ದೂರು ನೀಡಿದ್ದು, ಅದಿಕಾರಿಗೆ ಇವರು ಕಟಿಂಗ್ ಕೊಡಬಾರದು ಎಂಬ ನಿಯಮ ಇದಿಯೇ? ಕೊಟ್ಟರೆ ನಮಗೆ ನಷ್ಟ ಆಗುತ್ತದೆ ಎಂದರೆ ಲಾಭ ಮಾಡಲು ಇದ್ದಾರಾ ಸೇವೆ ಮಾಡಲು ಇದ್ದಾರಾ.? ಇವರ ಈ ವೈಖರಿಯಿಂದ ಮಾನಸಿಕ ತೊಂದರೆ ಜೊತೆಗೆ ರೋಗ ಉಲ್ಬಣವಾಗಲು ಕಾರಣವಾಗಿದೆ ಎಂದು ಆಪಾದಿಸಿದ್ದಾರೆ.

ಮೆಡಿಕಲ್ ಸ್ಟೊರ್ ಒಂದರಲ್ಲಿ ನೀಡಿದ ಔಷದ ಏರುಪೇರಿಂದ ಸಾವನ್ನಪ್ಪಿದ ಘಟನೆ ಇಲಾಖೆಯಲ್ಲಿ ದಾಖಲಾಗಿರುವ ಅಂಶ ಈಗ ಮಾಹಿತಿ ಹಕ್ಕು ಕಾರ್ಯಕರ್ತರು ಪತ್ತೆ ಹಚ್ಚಿದ್ದಾರೆ. ಏನೆ ಇರಲಿ ಅದಿಕಾರಿಗಳು ತಮ್ಮ ಕೆಲಸಗಳ ಕರ್ತವ್ಯ ಜವಬ್ದಾರಿ ಮರೆತಿರುವುದಕ್ಕೆ ಮಾ.ಹ.೪.೧(ಎ), ೪.೧(ಬಿ) ದಾಖಲೆ ಸ್ಪಷ್ಟವಾಗಿ ಹೇಳುತ್ತದೆ.

ಕೆಲವು ಅಂಗಡಿಗಳಲ್ಲಿ ಬಿಲ್ ನೀಡದೇ ವಂಚಿಸುತ್ತಿರುವುದು ಒಂದೆಡೆಯಾದರೆ ಜಿಎಸ್ಟಿ ನೆಪ ಹೇಳಿ ಮತ್ತೊಂದು ಪ್ರಕರಣದಲ್ಲಿ ಕೈ ತೊಳೆದುಕೊಳ್ಳುತ್ತಿದ್ದಾರೆ.

ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ 

Related Articles

Leave a comment

Back to Top

© 2015 - 2017. All Rights Reserved.