ದುಷ್ಟರನ್ನು ‘ಸಂಹಾರ’ ಮಾಡುವ ಶಿವನ ಗೆಟಪ್ ನಲ್ಲಿ ಚಿರಂಜೀವಿ ಸರ್ಜಾ

Entertainment, Kannada News No Comments on ದುಷ್ಟರನ್ನು ‘ಸಂಹಾರ’ ಮಾಡುವ ಶಿವನ ಗೆಟಪ್ ನಲ್ಲಿ ಚಿರಂಜೀವಿ ಸರ್ಜಾ 33

ಸಿನಿಮಾ: ಕನ್ನಡದಲ್ಲಿ ಅದೇಷ್ಟೋ ವಿಭಿನ್ನ ಟೈಟಲ್​ ಇಟ್ಕೊಂಡು ಅದಾಗ್ಲೇ ಸಾಕಷ್ಟು ಸಿನಿಮಾಗಳು ಬಂದಿವೆ. ಇದೀಗ ಸಂಹಾರ ಅನ್ನೋ ಟೈಟಲ್​ನ ಸಿನಿಮಾ ಕೂಡ ಸೆಟ್ಟೇರಿ ಆಡಿಯೋ ರಿಲೀಸ್​ ಮಾಡಿದೆ.

ನಟ ಚಿರು ಸರ್ಜಾ ಅಭಿನಯದ ಸಂಹಾರ ಚಿತ್ರದ ಫಸ್ಟ್ ಲುಕ್ ಟ್ರೇಲರ್​ನಿಂದ ಹಿಡಿದು ಸಾಕಷ್ಟು ಕ್ಯೂರಿಯಾಸಿಟಿ ಹುಟ್ಟಿಸಿರೋ ಚಿತ್ರ. ಚಿತ್ರದಲ್ಲಿ ಚಿರುಸರ್ಜಾ ಡಿಫರೆಂಟ್ ಲುಕ್ ನಲ್ಲಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿರುವುದು ಸಾಕಷ್ಟು ಕುತೂಹಲ ಹುಟ್ಟಿಸಿದೆ. ಚಿರುಸರ್ಜಾ ದುಷ್ಟರನ್ನು ಸಂಹಾರ ಮಾಡುವ ಶಿವನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದು ಇದೊಂದು ಪಕ್ಕಾ ಮಾಸ್ ಆ್ಯಕ್ಷನ್ ಚಿತ್ರವಾಗಿ ಕಂಡುಬರುತ್ತಿದೆ. ಇಷ್ಟೆಲ್ಲ ಸ್ಪೆಷಾಲಿಟಿ ಇರೋ ಈ ಚಿತ್ರದ ಆಡಿಯೋ ರಿಲೀಸ್​ ನಿನ್ನೆ ನಡೆದಿದ್ದು, ಚಿತ್ರದ ಹಾಡುಗಳು ಸಖತ್ತಾಗೇ ಮೂಡಿ ಬಂದಿದೆ. ರವಿ ಬಸರೂರ್​ ಸಂಗೀತ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದೆ.

ಈ ಹಿಂದೆ ಚಿರಂಜೀವಿ ಸರ್ಜಾ ಅಭಿನಯದ ರುದ್ರತಾಂಡವ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಗುರು ದೇಶಪಾಂಡೆ, ಸಂಹಾರ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ಚಿಕ್ಕಣ್ಣ ಖಡಕ್​ ಪೋಲೀಸ್​ ಆಧಿಕಾರಿಯಾಗಿ, ನಾಯಕಿಯಾಗಿ ನಟಿ ಹರಿಪ್ರಿಯ ಬಣ್ಣಹಚ್ಚಿದ್ದು ಖಳನಟಿಯಾಗಿ ಕಾಣಿಸಿಕೊಳ್ಳಲಿದ್ದು, ಕಾವ್ಯ ಶೆಟ್ಟಿ ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.