ವೈದ್ಯರ ಸೋಗಿನಲ್ಲಿ ಬಂದು ಸರಗಳ್ಳತನ

Crime, Kannada News, Regional, Top News No Comments on ವೈದ್ಯರ ಸೋಗಿನಲ್ಲಿ ಬಂದು ಸರಗಳ್ಳತನ 13

ಮೈಸೂರು: ಬೈಕಿನಲ್ಲಿ ಬಂದು ಕೃತ್ಯವೆಸಗುತ್ತಿದ್ದ ಸರಗಳ್ಳರು ಈಗ ಹೊಸ ಖತರ್ನಾಕ್ ಹಾದಿ ಹಿಡಿದಿದ್ದಾರೆ. ಪ್ರತಿಷ್ಠಿತ ಆಸ್ಪತ್ರೆಗಳ ರೋಗಿಗಳೇ ಇವರ ಟಾರ್ಗೆಟ್ ಆಗಿದ್ದಾರೆ. ಆಸ್ಪತ್ರೆಗಳಲ್ಲಿ ವೈದ್ಯರ ಸೋಗಿನಲ್ಲಿ ಬಂದು ರೋಗಿಗಳ ಬಳಿಯಿರುವ ಚಿನ್ನಾಭರಣಗಳನ್ನು ಎಗರಿಸುತ್ತಿದ್ದಾರೆ.

ವೈದ್ಯರ ಸೋಗಿನಲ್ಲಿ ಬಂದ ಕಳ್ಳ 1 ಲಕ್ಷ ಮೌಲ್ಯದ ಮಾಂಗಲ್ಯದ ಸರ ದೋಚಿದ್ದಾನೆ. ವೈದ್ಯನ ವೇಷದಲ್ಲಿದ್ದ ಸರಗಳ್ಳನನ್ನು ನಂಬಿ ರೋಗಿ ಅಗ್ರಹಾರದ ಸೌಮ್ಯಶ್ರೀ ಮೋಸ ಹೋಗಿದ್ದಾರೆ. ಚಿಕಿತ್ಸೆ ನೀಡುವ ನೆಪದಲ್ಲಿ ಸ್ಪೆಷಲ್ ವಾರ್ಡ್ ಗೆ ಬಂದ ಖದೀಮ ನಾಜೂಕಿನಿಂದ ಗಮನ ಬೇರೆಡೆ ಚಿನ್ನದ ಸರ ಎಗರಿಸಿದ್ದಾನೆ. ನಂತರ ವಿಚಾರಿಸಿದಾಗ ನಕಲಿ ವೈದ್ಯನ ಕೈಚಳಕ ಬಯಲಾಗಿದೆ. ಕೆ.ಆರ್.ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a comment

Back to Top

© 2015 - 2017. All Rights Reserved.