100 ವರ್ಷಗಳ ಬಳಿಕ ಪ್ರಥಮ ವಿಶ್ವಯುದ್ಧದಲ್ಲಿ ಮಡಿದ ಭಾರತೀಯ ಯೋಧರ ಶವಸಂಸ್ಕಾರ

International, Kannada News, Top News No Comments on 100 ವರ್ಷಗಳ ಬಳಿಕ ಪ್ರಥಮ ವಿಶ್ವಯುದ್ಧದಲ್ಲಿ ಮಡಿದ ಭಾರತೀಯ ಯೋಧರ ಶವಸಂಸ್ಕಾರ 14

ಪ್ಯಾರಿಸ್: ಫ್ರಾನ್ಸ್ ದೇಶದ ಉತ್ತರ ಭಾಗದಲ್ಲಿ ದೊರೆತಿದ್ದ ಇಬ್ಬರು ಭಾರತೀಯ ಮೂಲದ ಯೋಧರ ಮೃತದೇಹಗಳ ಶವಸಂಸ್ಕಾರ ಕಡೆಗೂ ನಡೆದಿದೆ. ಪ್ಯಾರಿಸ್’ನಿಂದ ಸುಮಾರು 230 ಕಿ.ಮೀ. ದೂರದಲ್ಲಿ ಉತ್ಖನನ ನಡೆಸುತ್ತಿದ್ದ ವೇಳೆ ಎರಡು ಯೋಧರ ಶವ ಪತ್ತೆಯಾಗಿತ್ತು. ಅವುಗಳನ್ನು ರಾಷ್ಟ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದೆ ವೇಳೆ ಅವುಗಳು ಭಾರತೀಯ ಯೋಧರ ಶವಗಳು ಎಂದು ಖಚಿತಪಡಿಸಲಾಗಿತ್ತು.

ಪ್ರಥಮ ವಿಶ್ವಯುದ್ಧದ ವೇಳೆ ಇಂಗ್ಲಿಷರ ವಿರುದ್ಧ ಫ್ರಾನ್ಸ್’ನಲ್ಲಿ ನಡೆದ ನಿರ್ಣಾಯಕ ಯುದ್ಧದಲ್ಲಿ ಪಾಲ್ಗೊಂಡಿದ್ದ ಈ ಇಬ್ಬರೂ ಮೃತಪಟ್ಟಿದ್ದರು ಎಂದು ಹೇಳಲಾಗಿದೆ. ಇಬ್ಬರೂ ಸಹ 39ನೇ ರಾಯಲ್ ಘರ್ವಾಲ್ ರೈಫಲ್ಸ್ ಸೇನಾ ತುಕಡಿಗೆ ಸೇರಿದ ಯೋಧರು ಎಂದು ಧೃಡಪಟ್ಟಿತ್ತು ಹಾಗೂ ಇಬ್ಬರೂ ಸಹ ಯುದ್ಧ ಭೂಮಿಯಲ್ಲಿ ಹೋರಟ ನಡೆಸುವ ವೇಳೆ ವೀರಮರಣ ಹೊಂದಿದ್ದರು ಎಂದು ತಿಳಿದುಬಂದಿದೆ.

ಇಬ್ಬರ ಶವವನ್ನು ಇದೀಗ ಸಕಲ ಸರ್ಕಾರಿ ಮರ್ಯಾದೆಯೊಂದಿಗೆ ಶವಸಂಸ್ಕಾರ ಮಾಡಲಾಗಿದೆ. ಭಾರತೀಯ ಮೂಲದ ನೂರಾರು ಮಂದಿ ಶವಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು ಹಾಗೂ ಹಿಂದೂ ಪದ್ದತಿಯಂತೆ ಅವರ ಅಂತಿಮ ಸಂಸ್ಕಾರ ನಡೆಸಲಾಯಿತು.

Related Articles

Leave a comment

Back to Top

© 2015 - 2017. All Rights Reserved.