ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಬೃಹತ್ ಗಾತ್ರದ ಅಕ್ಷರ ರಚಿಸಿದ ಸಾವಿರಾರು ವಿದ್ಯಾರ್ಥಿಗಳು

BREAKING NEWS, Kannada News, Regional, Top News No Comments on ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಬೃಹತ್ ಗಾತ್ರದ ಅಕ್ಷರ ರಚಿಸಿದ ಸಾವಿರಾರು ವಿದ್ಯಾರ್ಥಿಗಳು 25

ಮೈಸೂರು: 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಿನಗಣನೆ ಆರಂಭವಾಗಿದ್ದು, ಇಂದು ಅರಮನೆ ಎದುರು ಹಳದಿ-ಕೆಂಪು ಬಣ್ಣದಲ್ಲಿ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಶ್ರೀರಾಮಾಯಣ ದರ್ಶನಂ ಎಂಬ ಬೃಹತ್ ಗಾತ್ರದ ಅಕ್ಷರ ರಚಿಸಿ ಪ್ರವಾಸಿಗರಿಗೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರೀತಿಯ ಸ್ವಾಗತ ಕೋರಲಾಯಿತು.

ಕಾರ್ಡ್ ಬೋರ್ಡ್ ನಿಂದ ಮಾಡಲಾಗಿರುವ ರಚನೆಯನ್ನು ಆಗಸದಿಂದ ಕ್ಯಾಮರಾ ಮೂಲಕ ಚಿತ್ರೀಕರಿಸಲಾಗಿದ್ದು, ಹಿನ್ನೆಲೆ ಸಂಗೀತದೊಂದಿಗೆ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡಲಾಗುತ್ತಿದೆ. 20 ಶಾಲೆಗಳ ಎರಡು ಸಾವಿರ ವಿದ್ಯಾರ್ಥಿಗಳು ಅಕ್ಷರ ಸಂರಚನೆಯಲ್ಲಿ ಭಾಗವಹಿಸಿದ್ದರು. 

ಈ ಬಗ್ಗೆ ಜಿಲ್ಲಾಧಿಕಾರಿಗಳಾದ ಡಿ.ರಂದೀಪ್ ಅವರು ಮಾತನಾಡಿ ಸಮ್ಮೇಳನದ ಪ್ರಚಾರದ ಒಂದು ಭಾಗವಾಗಿ ಮಾಡಲಾಗುತ್ತಿದ್ದು, ಈ ಯೋಜನೆ ಸಮ್ಮೇಳನದ ಉದ್ಘಾಟನೆಗೂ ಮೂರು ದಿನಗಳ ಮುನ್ನವೇ ಅರಮನೆಗೆ ಆಗಮಿಸುವ ಪ್ರವಾಸಿಗರನ್ನು ಸೆಳೆಯಲಿದೆ. ಅರಮನೆಗೆ ಆಗಮಿಸುವ ಪ್ರವಾಸಿಗರೂ ಕೂಡ  ಹಳದಿ ಕೆಂಪುಬಣ್ಣದ ಕನ್ನಡ ಸಾಹಿತ್ಯ ಸಮ್ಮೇಳನದ ಅಕ್ಷರ ವಿನ್ಯಾಸದ ಸೌಂದರ್ಯವನ್ನು ಸವಿಯುವ ಜತೆಗೆ ಸಮ್ಮೇಳನದಲ್ಲೂ ಪಾಲ್ಗೊಳ್ಳಬೇಕೆಂಬ ಆಶಯವನ್ನು ಹಾಗೂ ಇದನ್ನು ಸಾಮಾಜಿಕ ಜಾಲತಾಣಗಳಲ್ಲೂ ಹರಿ ಬಿಡುತ್ತೇವೆ ಎಂದು ತಿಳಿಸಿದರು.

Related Articles

Leave a comment

Back to Top

© 2015 - 2017. All Rights Reserved.