‘ಇಂದಿರಾ ಕ್ಯಾಂಟೀನ್​​’ನ ಕಾರ್ಯಕ್ಕೆ ಶಹಬ್ಬಾಸ್ ಎಂದ ಬಿಬಿಸಿ ನ್ಯೂಸ್

BREAKING NEWS, Regional, Top News No Comments on ‘ಇಂದಿರಾ ಕ್ಯಾಂಟೀನ್​​’ನ ಕಾರ್ಯಕ್ಕೆ ಶಹಬ್ಬಾಸ್ ಎಂದ ಬಿಬಿಸಿ ನ್ಯೂಸ್ 26

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ, ಬಡವರ ಹಸಿವು ನೀಗಿಸುವ ‘ಇಂದಿರಾ ಕ್ಯಾಂಟೀನ್​​’ನ ಕಾರ್ಯಕ್ಕೆ ಬಿಬಿಸಿ ನ್ಯೂಸ್  ಶಹಬ್ಬಾಸ್ ಎಂದಿದೆ.

ಈ ಸುದ್ದಿಯನ್ನು ಸಿ.ಎಂ ಸಿದ್ದರಾಮಯ್ಯ ಅವರು ರೀ ಟ್ವೀಟ್ ಮಾಡಿದೆ. ತಾಜಾವಾಗಿರುವ, ಬಿಸಿ, ಬಿಸಿ ಆಹಾರವನ್ನು ಜನರು ಅತ್ಯಂತ ಕಡಿಮೆ ದರದಲ್ಲಿ ಕೊಳ್ಳುತ್ತಿದ್ದು, ಈ ಯೋಜನೆ ಹೆಚ್ಚು ಜನಪ್ರಿಯವಾಗಿದೆ ಎಂದು ನ್ಯೂಸ್ ಹೇಳಿದೆ. ದಿನಗೂಲಿ ಕಾರ್ಮಿಕರು, ಚಾಲಕರು, ಭದ್ರತಾ ಸಿಬ್ಬಂದಿ, ಭಿಕ್ಷುಕರು ಸೇರಿ ಬಡವರು ಆಹಾರ ಕೊಳ್ಳುತ್ತಿದ್ದು, ಇಂಥವರ ಹಸಿವು ನೀಗಿಸುವಲ್ಲಿ, ಸರಕಾರ ತೆಗೆದುಕೊಂಡಿರುವ ಕ್ರಮಕ್ಕೆ ಬಿಬಿಸಿ ಶಹಬ್ಬಾಸ್ ಎಂದು ಹೇಳಿದೆ.

ಕೇವಲ ಐದು ರೂ.ಗೆ ತಿಂಡಿ ಸಿಗಲಿದ್ದು, ಈ ಮುಂಚೆ 30 ರೂ. ಖಾಲಿ ಮಾಡುತ್ತಿದ್ದವರು ದಿನಕ್ಕೆ 25 ರೂ. ಉಳಿಸುವಂತಾಗಿದೆ. ಮೂರು ಹೊತ್ತಿನ ಊಟಕ್ಕೆ ಸುಮಾರು 140 ರೂ. ಖಾಲಿ ಮಾಡುತ್ತಿದ್ದವರು ಇದೀಗ ಕೇವಲ 40 ರೂ.ಖಾಲಿ ಮಾಡುತ್ತಿದ್ದು, ದಿನಕ್ಕೆ 100 ರೂ.ನಷ್ಟು ಉಳಿತಾಯ ಮಾಡುತ್ತಿದ್ದಾರೆ. ಇದರಿಂದ ಬಡವರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ ಎಂಬುವುದು ಬಿಬಿಸಿ ಅಭಿಪ್ರಾಯ:

Related Articles

Leave a comment

Back to Top

© 2015 - 2017. All Rights Reserved.