ಅಕ್ರಮ ಕಟ್ಟಡದಲ್ಲಿ ಚಾಮರಾಜ ಕ್ಷೇತ್ರ ಜೆಡಿಎಸ್ ಹೊಸ ಆಫಿಸ್..!

BREAKING NEWS, Kannada News, Regional, Top News No Comments on ಅಕ್ರಮ ಕಟ್ಟಡದಲ್ಲಿ ಚಾಮರಾಜ ಕ್ಷೇತ್ರ ಜೆಡಿಎಸ್ ಹೊಸ ಆಫಿಸ್..! 85

ಮೈಸೂರು: ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಗುರುತಿಸಿ ಕೆಡವಲು ನಿರ್ಧರಿಸಿದ್ದ ಕಟ್ಟಡವೊಂದರಲ್ಲಿ ಜೆಡಿಎಸ್ ಪಕ್ಷ ತನ್ನ ಕಚೇರಿಯನ್ನು ಸ್ಥಾಪಿಸಿದೆ ಎಂದು ಹೇಳಲಾಗುತ್ತಿದೆ. ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಚೇರಿಯನ್ನು ಆರಂಭಿಸಲಾಗಿದೆ.

ನಗರದ ಹೆಬ್ಬಾಳಿನ ವಿಶ್ವಮಾನವ ವೃತ್ತದ ಬಳಿ ಇರುವ ಕಟ್ಟಡದಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಪ್ರೊ. ಕೆ.ಎಸ್.ರಂಗಪ್ಪ ಅವರ ಅಧಿಕೃತ ಕಚೇರಿಯನ್ನು ಆರಂಭಿಸಲಾಗಿದೆ. ಸದರಿ ಕಟ್ಟಡವನ್ನು 2015ರಲ್ಲಿಯೇ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಪಾಲಿಕೆ ಗುರುತಿಸಿತ್ತು. ಈ ಕುರಿತು ಪಾಲಿಕೆ ಆಧಿಕಾರಿಗಳು ಸಂಬಂಧಿಸಿದ ವ್ಯಕ್ತಿಗಳಿಗೆ ನೋಟಿಸ್ ಕೂಡ ಜಾರಿ ಮಾಡಲಾಗಿತ್ತು ಎಂದು ಪಾಲಿಕೆ ಮೂಲಗಳು ತಿಳಿಸಿವೆ.

ಅಲ್ಲದೆ, ಕಟ್ಟಡ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಲಯ ಕಚೇರಿ 4 ರ ಅಭಿವೃದ್ಧಿ ಅಧಿಕಾರಿಗೆ ಸೂಚನೆಯನ್ನೂ ಸಹ ನೀಡಲಾಗಿತ್ತು. ಈ ಕಟ್ಟಡ ನಿರ್ಮಾಣಕ್ಕೆ ಯಾವುದೇ ರೀತಿಯ ಅನುಮತಿಯನ್ನು ಪಾಲಿಕೆ ವತಿಯಿಂದ ಪಡೆದಿಲ್ಲ ಎಂದು ಹೇಳಲಾಗಿದೆ.

Related Articles

Leave a comment

Back to Top

© 2015 - 2017. All Rights Reserved.