ದೂರು ಪೆಟ್ಟಿಗೆಗಳಿಗೆ ಬಿದ್ದ ದೂರುಗಳು ಇಲ್ಲ, ತಪಾಸಣೆ ಮಾಡೊ ತಾಳ್ಮೆ ಇಲ್ಲವೇ ಇಲ್ಲ..!

Kannada News, Regional, Top News No Comments on ದೂರು ಪೆಟ್ಟಿಗೆಗಳಿಗೆ ಬಿದ್ದ ದೂರುಗಳು ಇಲ್ಲ, ತಪಾಸಣೆ ಮಾಡೊ ತಾಳ್ಮೆ ಇಲ್ಲವೇ ಇಲ್ಲ..! 43

ಚಾಮರಾಜನಗರ: ಠಾಣೆಗಳಲ್ಲಿ ದೂರು ಸ್ವೀಕರಿಸಲು ಹಿಂದೆ ಮುಂದೆ ನೋಡಿದಾಗ ಆ ದೂರನ್ನ ದೂರು ಪೆಟ್ಟಿಗೆಗಳಿಗೆ ಹಾಕವುದು ಸೇರಿದಂತೆ ಇತರ ಸಮಸ್ಯೆಗಳ ಅನುಕೂಲಕ್ಕಾಗಿ ಮಾಡಿದ ದೂರು ಪೆಟ್ಟಿಗೆಗಳ ದೂರು ನೋಡೋವ್ರೆ ಇಲ್ಲದಂತಾಗಿದೆ. 

ಬಹುತೇಕ ಠಾಣೆಗಳಲ್ಲಿ ಇಟ್ಟಿರುವ ದೂರು ಪೆಟ್ಟಿಗೆಗಳಲ್ಲಿ ಕೆಲವೊಂದಕ್ಕೆ ಬೀಗ ಇಲ್ಲದಿರುವುದು ಕಂಡುಬಂದಿದೆ. ಕೆಲವೊಮ್ಮೆ ದೂರಿಟ್ಟರು ಆ ದೂರನ್ನ ವರ್ಷಕ್ಕೊಮ್ಮೆ ನೋಡುತ್ತಾರೊ ಎಂಬುವಂತಾಗಿದೆ. 2016 ರಲ್ಲಿ ಸಾರ್ವಜನಿಕರೊಬ್ಬರು ಎಸ್ಪಿ ಕಚೇರಿ ಮುಂಬಾಗ ಪ್ರತಿಭಟಿಸಲು ಅನುಮತಿಯ ಜೊತೆಗೆ ಸಮಸ್ಯೆ ಅರ್ಜಿಯೊಂದನ್ನ ಹಾಕಲಾಗಿತ್ತು. ಪ್ರತಿಭಟನೆ ಸಂಬಂದ ಅನುಮತಿ ನಿರಾಕರಿಸುದರೂ ಮೇಲಾದಿಕಾರಿಗೆ ಮನವಿ ಸಲ್ಲಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿ ಮಾತುಕತೆ ನಡೆಸಿ ಪ್ರತಿಭಟನೆ ಕೈ ಬಿಡಿಸಲಾಗಿತ್ತು.

ಮೇಲಾದಿಕಾರಿಗಳು ಕೇಳಿದ ಪ್ರಶ್ನೆ ಉತ್ತರಿಸಲಾಗದೆ ಅರ್ಜಿ ದೂರು ಬಂದಿಲ್ಲ ಎಂದಾಗ ದೂರು ಪೆಟ್ಟಿಗೆಗೆ ಹಾಕಿದ ನಕಲು ಹಾಗೂ ಅಲ್ಲಿ ಬೀಗ ಹಾಕದೆ ಇಡಲಾಗಿರುವ ಪೆಟ್ಟಿ ಚಿತ್ರವನ್ನ ಕಳಿಸಿದ ನಂತರ ಅಂದಿನ ಎಸ್ಪಿ ಕುಲದೀಪ್ ಕುಮಾರ್ ಅವರ ನಿರ್ದೇಶನ ಬರುವ ಮೊದಲೆ ಪೆಟ್ಟಿಗೆಗೆ ಬೀಗ ಬಿದ್ದಿತು. ಬಹುತೇಕ ಕಡೆ ದೂರು ಪೆಟ್ಟಿಗೆಗಳು ಇಲ್ಲ, ಇದ್ದರೂ ಅದನ್ನ ಪರಿಶೀಲಿಸುವ ತಾಳ್ಮೆ ಇಲ್ಲದಂತಾಗಿದೆ ಎಂಬುದು ಸಾಬೀತಾಗಿದೆ. 

ಶಂಖದಿಂದಲೇ ಬಿದ್ದರೆ ತೀರ್ಥ ಎಂಬಂತೆ ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕರ ಆದೇಶ ‌ಬರುವವರೆಗೂ ಅದೆಲ್ಲದರ ವಿವರ ಬಹುಶಃ ಜಿಲ್ಲಾ ಪೊಲೀಸ್ ಆಡಳಿತಕ್ಕೆ ಸಿಗಲಾರದು ಎಂಬುದಂತು ಸತ್ಯ.

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ 

Related Articles

Leave a comment

Back to Top

© 2015 - 2017. All Rights Reserved.