ಮಕ್ಕಳ ಹಬ್ಬದಲ್ಲಿ ಕುಣಿದು ಕುಪ್ಪಳಿಸಿದ ಮುದ್ದು ಮಕ್ಕಳು

Kannada News, Regional No Comments on ಮಕ್ಕಳ ಹಬ್ಬದಲ್ಲಿ ಕುಣಿದು ಕುಪ್ಪಳಿಸಿದ ಮುದ್ದು ಮಕ್ಕಳು 24

ಮೈಸೂರು: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಬಾಲವಿಕಾಸ ಅಕಾಡೆಮಿ ಧಾರವಾಡ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಮಕ್ಕಳ ಹಬ್ಬ 2017 ರ ಕಾರ್ಯಕ್ರಮವನ್ನು ರಂಗಾಯಣದ ವನರಂಗದಲ್ಲಿ ಆಯೋಜಿಸಲಾಗಿತ್ತು. ವೇದಿಕೆಯ ಗಣ್ಯರು ಹಾಗೂ ಮಕ್ಕಳು ಆಕಾಶಕ್ಕೆ ಬಲೂನ್ ಬಿಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದೇ ಸಂದರ್ಭ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್ ಮಾತನಾಡಿ ನವೆಂಬರ್ 14 ರಂದು ಜವಹರ್ ಲಾಲ್ ನೆಹರು ಅವರ ಜನ್ಮದಿನಾಚರಣೆಯಂದು ಮಕ್ಕಳಿಗೆ ಮೃಗಾಲಯಕ್ಕೆ ಉಚಿತ ಪ್ರವೇಶ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬಾಲಮಂದಿರ ಹಾಗೂ ಸರ್ಕಾರಿ ಶಾಲಾ ಮಕ್ಕಳಿಗೆ ವರ್ಷ ಪೂರ್ತಿ ಉಚಿತ ಪ್ರವೇಶ ಹಾಗೂ ಮೃಗಾಲಯದ ಆವರಣದ ಬಾಲಭವನದಲ್ಲಿ ವನ್ಯ ಜೀವಿ ಪ್ರಕೃತಿಯ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮವನ್ನು ರೂಪಿಸಲು ಮುಂದಾಗಿದ್ದೇವೆ. ಬೆಂಗಳೂರಿನ ಬನ್ನೇರುಘಟ್ಟದಲ್ಲಿ ಮಕ್ಕಳಿಗೆ ಸಾಫಾರಿ ಮತ್ತು ಊಟದ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ಒದಗಿಸಲು ಮುಂದಾಗಿದ್ದೇವೆ ಎಂದರು.

ಬಾಲಮಂದಿರ, ಅಂಗನವಾಡಿ, ಹಾಗೂ ಪ್ರೈಮರಿ ಶಾಲೆಯ ಮಕ್ಕಳು ಅಂದ ಚಂದನೆಯ ಉಡುಪು ತೊಟ್ಟು ಕಂಗೋಳಿಸಿದರು. ಪುಟ್ಟ ಪುಟ್ಟ ಮಕ್ಕಳು ವೇದಿಕೆಯನ್ನೇರಿ ಕುಣಿದು ಕುಪ್ಪಳಿಸಿದರು. ನೆರೆದಿದ್ದ ಜನರನ್ನ ಮುದ್ದು ಮುದ್ದು ಮಕ್ಕಳು ಮನರಂಜಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಹೀಮಾ ಸುಲ್ತಾನ, ಮೈಲಾಕ್ ಅಧ್ಯಕ್ಷ ಹೆಚ್.ಎ.ವೆಂಕಟೇಶ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಪುಷ್ಪ ಅಮರನಾಥ್, ರಾಧಾಮಣೆ ಸೇರಿದಂತೆ ಮತ್ತಿತರು ಇದ್ದರು.

Related Articles

Leave a comment

Back to Top

© 2015 - 2017. All Rights Reserved.