ಬಾಲ್ಯ ವಿವಾಹಕ್ಕೆ ಮುಂದಾದ ಪೋಷಕರು: ಮನೆಬಿಟ್ಟು ಬಂದ ಬಾಲಕಿ

Kannada News, Regional, Top News No Comments on ಬಾಲ್ಯ ವಿವಾಹಕ್ಕೆ ಮುಂದಾದ ಪೋಷಕರು: ಮನೆಬಿಟ್ಟು ಬಂದ ಬಾಲಕಿ 17

ನಂಜನಗೂಡು: 16 ವರ್ಷದ ಬಾಲಕಿಯೊಬ್ಬಳು ಬಾಲ್ಯ ವಿವಾಹಕ್ಕೆ ಒತ್ತಾಯಿಸಿದ್ದಕ್ಕೆ ಪೋಷಕರ ವಿರುದ್ಧ ಸಿಡಿದೆದ್ದು ಮನೆಬಿಟ್ಟು ಹೊರಬಂದಿರುವ ಘಟನೆ ನಡೆದಿದೆ.

ಬಾಲಕಿಯ ಹೆಸರು ಸುಮಾ. ನಂಜನಗೂಡು ತಾಲೂಕಿನ ಮಾದೇವ ಶೆಟ್ಟಿ ಹಾಗೂ ಮಂಗಳಮ್ಮನವರ ಪುತ್ರಿ ಈಕೆ. ಮನೆಯಿಂದ ಹೊರನಡೆದ ನಂತರ ತಾಲೂಕಿನ ಮಹಿಳಾ ಮತ್ತು ಮಕ್ಕಳ ಸಾಂತ್ವಾನ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾಳೆ ಎಂದು ವರದಿಯಾಗಿದೆ.

16 ವರ್ಷದ ಸುಮಾಳಿಗೆ ತಮ್ಮ ಸಂಬಂಧಿಯೊಬ್ಬರ ಜೊತೆ ಮದುವೆ ಮಾಡಲು ಆಕೆಯ ಪೋಷಕರು ಪೀಡಿಸಿದ್ದಾರೆ. ಆದರೆ, ಇದಕ್ಕೆ ಒಪ್ಪದ ಸುಮಾ ಮನೆಯಿಂದಲೇ ಹೊರ ನಡೆದಿದ್ದಾಳೆ. ಮನೆಬಿಟ್ಟ ಸುಮಾ ಕೆಲ ಹೊತ್ತು ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದಲ್ಲಿ ಆಶ್ರಯ ಪಡೆದು ನಂತರ ಹುಲ್ಲಹಳ್ಳಿ ರಸ್ತೆಯಲ್ಲಿರುವ ಮಹಿಳಾ ಹಾಗೂ ಮಕ್ಕಳ ಇಲಾಖೆಯ ಸಾಂತ್ವಾನ ಕೇಂದ್ರದಲ್ಲಿ ಆಶ್ರಯಪಡೆದಿದ್ದಾಳೆ. ಆದರೆ ನಿರಾಶ್ರಿತೆ ಮತ್ತೆ ಮನೆಗೆ ವಾಪಾಸಾದರೆ ಜೀವ ಬೆದರಿಕೆ ಇರುವ ಕಾರಣ ಆಕೆಯನ್ನು ಮೈಸೂರಿನ ಬಾಲಕಿಯರ ಬಾಲಮಂದಿರಕ್ಕೆ ಸೇರಿಸಲಾಗಿದೆ ಎಂದು ಹೇಳಲಾಗಿದೆ.

Related Articles

Leave a comment

Back to Top

© 2015 - 2017. All Rights Reserved.