ಲಾಸ್’ಏಂಜಲೀಸ್’ನಲ್ಲಿ ಭಾರೀ ಟ್ರಾಫಿಕ್ ಜಾಮ್: ವಿಶ್ವಾದ್ಯಂತ ಈಗ ಇದರದ್ದೇ ಸುದ್ದಿ

International, Kannada News, Top News No Comments on ಲಾಸ್’ಏಂಜಲೀಸ್’ನಲ್ಲಿ ಭಾರೀ ಟ್ರಾಫಿಕ್ ಜಾಮ್: ವಿಶ್ವಾದ್ಯಂತ ಈಗ ಇದರದ್ದೇ ಸುದ್ದಿ 27

ಲಾಸ್’ಏಂಜಲೀಸ್: ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ಭಾರೀ ಟ್ರಾಫಿಕ್ ಜಾಮ್ ಆಗಿದ್ದು ವಿಶ್ವಾದ್ಯಂತ ಈಗ ಸುದ್ದಿಯಾಗಿದೆ.

ಅಮೆರಿಕಾದಲ್ಲಿ ಪ್ರತೀ ವರ್ಷ ನವೆಂಬರ್ ತಿಂಗಳ ನಾಲ್ಕನೇ ಗುರುವಾರ ಥ್ಯಾಕ್ಸ್ ಗಿವಿಂಗ್ ಡೇ ಆಚರಿಸಲಾಗುತ್ತದೆ. ಈ ದಿನದ ನಂತರ 3 ದಿನ ಸಾರ್ವಜನಿಕ ರಜೆ ಇರುತ್ತದೆ. ಹೀಗಾಗಿ ನವೆಂಬರ್ 23 ರಂದು ಥ್ಯಾಕ್ಸ್ ಗಿವಿಂಗ್ ಡೇ ಆಚರಣೆ ನಡೆಯಲಿದ್ದು, 26ರವರೆಗೆ ರಜೆ ಇರಲಿದೆ.

ಈ ದಿನ ಅಮೆರಿಕನ್ನರು ತಮ್ಮ ಸ್ನೇಹಿತರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಮಾತ್ರವಲ್ಲದೇ ಅವರೊಂದಿಗೆ ತಮ್ಮ ಮಧುರ ಕ್ಷಣಗಳನ್ನು ಕಳೆಯುತ್ತಾರೆ. ವೀಕೆಂಡ್ ನಲ್ಲಿ ಈ ಆಚರಣೆಬರುವ ಹಿನ್ನೆಲೆಯಲ್ಲಿ ವರ್ಷದ 4 ದಿನ ಅವರು ತಮ್ಮ ಎಲ್ಲಾ ಕೆಲಸ-ಕಾರ್ಯಗಳನ್ನು ಬಿಟ್ಟು ಗೆಳೆಯರನ್ನು ಭೇಟಿಯಾಗಲೆಂದು ತೆರಳುತ್ತಾರೆ. ಇದರಿಂದಾಗಿ ಬೃಹತ್ ಟ್ರಾಫಿಕ್ ಉಂಟಾಗುತ್ತದೆ. ರಾತ್ರಿ ವೇಳೆ ಉಂಟಾದ ಟ್ರಾಫಿಕ್ ಜಾಮ್ ದೃಶ್ಯವನ್ನು ಅಲ್ಲಿನ ಸ್ಥಳೀಯರು ಸೆರೆಹಿಡಿದ್ದಾರೆ. ವಾಹನಗಳ ರೆಡ್‍ಲೈಟ್ ಮಾರ್ಗದುದ್ದಕ್ಕೂ ಝಗಮಗಿಸುತ್ತದೆ.

Related Articles

Leave a comment

Back to Top

© 2015 - 2017. All Rights Reserved.