ಉಗ್ರರ ಅಟ್ಟಹಾಸ: ಬಾಂಬ್, ಗುಂಡಿನ ದಾಳಿ ನಡೆಸಿ 230 ಮಂದಿ ಹತ್ಯೆ

Crime, International, Kannada News No Comments on ಉಗ್ರರ ಅಟ್ಟಹಾಸ: ಬಾಂಬ್, ಗುಂಡಿನ ದಾಳಿ ನಡೆಸಿ 230 ಮಂದಿ ಹತ್ಯೆ 12

ಕೈರೋ: ಶುಕ್ರವಾರದ ಪ್ರಾರ್ಥನೆ ನಡೆಯುತ್ತಿದ್ದ ವೇಳೆ ಉಗ್ರರು ಅಟ್ಟಹಾಸ ಮೆರೆದಿದ್ದು ಬಾಂಬ್ ಸ್ಫೋಟಿಸಿ ಹಾಗೂ ಗುಂಡಿನ ದಾಳಿ ನಡೆಸಿ 230 ಮಂದಿಯನ್ನ ಕೊಂದಿದ್ದಾರೆ.

ಈಜಿಪ್ಟ್ ನ ಉತ್ತರ ಭಾಗದ ಸಿನಾಯ್ ಪ್ರಾಂತ್ಯದ ಅಲ್-ರವ್ದಾಹ್ ಮಸೀದಿಯಲ್ಲಿ ಈ ಘಟನೆ ನಡೆದಿದ್ದು, ಈ ವೇಳೆ 109ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಶುಕ್ರವಾರದ ಪ್ರಾರ್ಥನೆ ಮುಗಿಯುತ್ತಿದ್ದಂತೆಯೇ ಮಸೀದಿಯ ಬಳಿ ಉಗ್ರರು ಬಾಂಬ್ ದಾಳಿ ನಡೆಸಿದ್ದಾರೆ. ಜೀಪಿನಲ್ಲಿ ಗನ್‍ಗಳನ್ನು ಹಿಡಿದು ಬಂದಿದ್ದ ಸುಮಾರು 40 ಉಗ್ರರು, ಆತಂಕದಿಂದ ಓಡುತ್ತಿದ್ದ ಜನರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಉಗ್ರರ ಅಟ್ಟಹಾಸಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವು ಗಣ್ಯರು ಖಂಡನೆ ವ್ಯಕ್ತಪಡಿಸಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.