ಅಕ್ರಮ ಗಾಂಜಾ ಬೆಳೆದವರ ಮೇಲೆ ಪೊಲೀಸರ ದಾಳಿ, ಬಂಧನ

Crime, Kannada News, Regional No Comments on ಅಕ್ರಮ ಗಾಂಜಾ ಬೆಳೆದವರ ಮೇಲೆ ಪೊಲೀಸರ ದಾಳಿ, ಬಂಧನ 15

ಚಾಮರಾಜನಗರ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 1.8 ಕೆಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

ಕೊಳ್ಳೇಗಾಲ ತಾಲೂಕಿನ ಹನೂರು ಸಮೀಪದ ಆಂಡಿಪಾಳ್ಯ ಗ್ರಾಮದ ನಿವಾಸಿ ಪಳನಿಯಪ್ಪನ್ ಆಂಡಿಪಾಳ್ಯ ತನ್ನ ತೋಟದ ಮನೆಯೊಂದರಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ದಾಳಿ ನಡೆಸಿ ಎರಡು ಹಸಿ ಸಸಿಗಳು ಹಾಗೂ 600 ಗ್ರಾಂ ಒಣಗಿಸಿದ ಗಾಂಜಾ ವಶಪಡಿಸಿಕೊಂಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಹನೂರು ವ್ಯಾಪ್ತಿಯಲ್ಲಿ ವಿ.ಎಸ್. ದೊಡ್ಡಿ ಗ್ರಾಮದ ಮಂಟಯ್ಯ ಎಂಬುವವರು ಬೈಕ್ ನಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದಾಗ ಬಂಧಿಸಿ, 1.2 ಕೆಜಿ ಗಾಂಜಾ ಹಾಗೂ ಬೈಕ್ ವಶಪಡಿಸಿಕೊಂಡಿದ್ದಾರೆ.

ದಾಳಿ ವೇಳೆ ವೃತ್ತ ನಿರೀಕ್ಷಕ ಪರಶುರಾಮ್, ಪೇದೆಗಳಾದ ರಾಜು, ಮಹೇಶ್, ಕುಮಾರ್ ಉಪಸ್ಥಿತರಿದ್ದರು.

Related Articles

Leave a comment

Back to Top

© 2015 - 2017. All Rights Reserved.