ಅಣೆಕಟ್ಟೆಯಿಂದ ಬಿಟ್ಟ 44 ಟಿಎಂಸಿ ನೀರು ನಾಪತ್ತೆ: ಎಲ್ಲೋಯ್ತು ಅಷ್ಟೊಂದು ನೀರು..?

Kannada News, National No Comments on ಅಣೆಕಟ್ಟೆಯಿಂದ ಬಿಟ್ಟ 44 ಟಿಎಂಸಿ ನೀರು ನಾಪತ್ತೆ: ಎಲ್ಲೋಯ್ತು ಅಷ್ಟೊಂದು ನೀರು..? 16

ಹೈದರಾಬಾದ್: ಅಣೆಕಟ್ಟೆಯಿಂದ ಬಿಟ್ಟ 44 ಟಿಎಂಸಿ ನೀರು ಕಾಣೆಯಾಗಿದೆ ಎಂಬ ವಿಚಿತ್ರ ಘಟನೆಯೊಂದು ನಡೆದಿದೆ. ಸೆ. 10 ರಿಂದ ಅ.30ರವರೆಗೆ ಆಂಧ್ರಪ್ರದೇಶವು ತೆಲಂಗಾಣಕ್ಕೆ ಬಿಟ್ಟ ಒಟ್ಟಾರೆ 195 ಟಿಎಂಸಿ ನೀರಿನ ಪೈಕಿ 44 ಟಿಎಂಸಿ ನೀರು ‘ನಾಪತ್ತೆ’ಯಾಗಿದೆ ಎಂದು ಹೇಲಾಗುತ್ತಿದೆ.

ಈ ಅವಧಿಯಲ್ಲಿ ಆಂಧ್ರವು ಶ್ರೀ ಶೈಲ ಅಣೆಕಟ್ಟೆ ಯಿಂದ ತೆಲಂಗಾಣದ ನಾಗಾರ್ಜುನ ಸಾಗರ ಅಣಕಟ್ಟೆಗೆ 195 ಟಿಎಂಸಿ ನೀರು ಬಿಡುಗಡೆ ಮಾಡಿತ್ತು. ಆದರೆ ನಾಗಾರ್ಜುನ ಸಾಗರ ಅಣೆಕಟ್ಟೆಗೆ ಬಂದ ನೀರಿನ ಪ್ರಮಾಣ 151 ಟಿಎಂಸಿ ಮಾತ್ರ. ಮಾರ್ಗ ಮಧ್ಯೆ 10 ಟಿಎಂಸಿ ನೀರು ಆವಿಯಾಯಿತು ಎಂದು ಸುಮ್ಮನಾಗಬಹುದಾದರೂ ಇನ್ನುಳಿದ 34 ಟಿಎಂಸಿ ನೀರು ಎಲ್ಲಿ ಹೋಯಿತು ಎಂದು ನಾಗಾರ್ಜುನಸಾಗರ ಮುಖ್ಯ ಎಂಜಿನಿಯರ್ ಸುನೀಲ್ ಪ್ರಶ್ನಿಸಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.