ತನ್ನ ಮದುವೆಗೆ ಹೆಚ್.ಡಿ.ಕುಮಾರಸ್ವಾಮಿ ಅವರು ಬರಬೇಕೆಂದು ಉಪವಾಸ ಕುಳಿತ ಈ ಮದುಮಗ..!

BREAKING NEWS, Kannada News, Regional, Top News No Comments on ತನ್ನ ಮದುವೆಗೆ ಹೆಚ್.ಡಿ.ಕುಮಾರಸ್ವಾಮಿ ಅವರು ಬರಬೇಕೆಂದು ಉಪವಾಸ ಕುಳಿತ ಈ ಮದುಮಗ..! 47

ಮಂಡ್ಯ: ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಅಧ್ಯಕ್ಷ, ಹೆಚ್.ಡಿ ಕುಮಾರಸ್ವಾಮಿ ಅವರು ತನ್ನ ಮದುವೆಗೆ ಬರಬೇಕೆಂದು ಉಪವಾಸ ಕುಳಿತಿರುವ ಘಟನೆಯೊಂದು ನಡೆದಿದೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 30 ವರ್ಷದ ರವಿ ಉಪವಾಸ ಕುಳಿತಿರುವ ವರ. ಡಿಸೆಂಬರ್ 1 ರಂದು ಇವನಿಗೆ ಮದುವೆ ನಿಶ್ಚಯವಾಗಿದೆ. ಅಂದು ನನ್ನ ಮದುವೆಗೆ ಕುಮಾರಸ್ವಾಮಿ ಅವರು ಬರಬೇಕೆಂದು ಆಗ್ರಹಿಸಿ ಉಪವಾಸ ಕುಳಿತಿದ್ದಾನೆ.

ಕುಮಾರಸ್ವಾಮಿ ಅವರ ಅಭಿಮಾನಿಯಾಗಿರುವ ವರ ರವಿ, ಮದುವೆಗೆ ಕರೆಸಲು ಜೆಡಿಎಸ್ ಮುಖಂಡರ ಬಳಿ ಮನವಿಯನ್ನು ಮಾಡಿಕೊಂಡಿದ್ದಾರೆ. ಆದರೆ ಕುಮಾರಸ್ವಾಮಿ ಬರುವ ಬಗ್ಗೆ ಜೆಡಿಎಸ್ ಮುಖಂಡರು ಯಾವುದೇ ಭರವಸೆ ಕೊಡಲಿಲ್ಲ. ಇದರಿಂದ ಮನನೊಂದು ಒಂದು ದಿನದ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ತಮ್ಮ ಮನೆಯ ಮುಂದೆ ಲಗ್ನಪತ್ರಿಕೆ, ಕುಮಾರಸ್ವಾಮಿ ಅವರ ಫೋಟೋವನ್ನು ಮುಂದೆ ಇಟ್ಟುಕೊಂಡು ಉಪವಾಸ ಕುಳಿತಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.