ದೇಶದಲ್ಲಿ ವಿಜ್ಞಾನ ಬೆಳೆದರು ಮೂಡನಂಬಿಕೆ ತೊಡೆದುಹಾಕಲು ಸಾಧ್ಯವಾಗಿಲ್ಲ: ಎಸ್.ವಿ ಸುಂಕನೂರು

BREAKING NEWS, Kannada News, Regional, Top News No Comments on ದೇಶದಲ್ಲಿ ವಿಜ್ಞಾನ ಬೆಳೆದರು ಮೂಡನಂಬಿಕೆ ತೊಡೆದುಹಾಕಲು ಸಾಧ್ಯವಾಗಿಲ್ಲ: ಎಸ್.ವಿ ಸುಂಕನೂರು 51

ಮೈಸೂರು: ಕಳೆದ 35 ವರ್ಷಗಳಿಂದ ವಿಜ್ಞಾನ ಪರಿಷತ್ತ್ ಮೂಡನಂಬಿಕೆ, ಕಂದಾಚಾರವನ್ನು ಹೋಗಲಾಡಿಸಲು ಸಾಕಷ್ಟು ಕಾರ್ಯಕ್ರಮ ಮಾಡಿದರೂ ಸಹ ಇಂದು ದೇಶದಲ್ಲಿ ಮೂಡನಂಬಿಕೆ ತೊಡೆದುಹಾಕಲು ಸಾಧ್ಯವಾಗಿಲ್ಲ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ನ ಅಧ್ಯಕ್ಷರಾದ ಎಸ್.ವಿ ಸುಂಕನೂರು ಅವರು ಕಳವಳ ವ್ಯಕ್ತಪಡಿಸಿದರು.

ನಗರದ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಜಿಲ್ಲಾಡಳಿತ ಹಾಗೂ ನವದೆಹಲಿಯ ರಾಷ್ಡ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ ಹಾಗೂ ಇನ್ನೀತರ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾಗಿರುವ 25 ನೇ ರಾಜ್ಯ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ತಿಳಿಸಿದರು.

ಮಕ್ಕಳ ವಿಜ್ಞಾನ ಸಮಾವೇಶಗಳ ಆಯೋಜಿಸುವ ಪ್ರಮುಖ ಉದ್ದೇಶವೆಂದರೆ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ, ಮೂಲ ವಿಜ್ಞಾನಕ್ಕೆ ಪ್ರೇರಣೆ ಹಾಗೂ ಎಲ್ಲದಕ್ಕಿಂತ ಮಿಗಿಲಾಗಿ ಸಂಶೋಧನಾ ಮನೋಭಾವ ಬೆಳೆಸುವುದಾಗಿದೆ. ಮೂಡನಂಬಿಕೆ, ಕಂದಾಚಾರವನ್ನು ಹೋಗಲಾಡಿಸಲು ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸಲು ಕಳೆದ 35 ವರ್ಷಗಳಿಂದ ವಿಜ್ಞಾನ ಪರಿಷತ್ ಕಾರ್ಯನಿರ್ವಹಿಸಿದರೂ ಮೂಡನಂಬಿಕೆ ತೊಲಗಿಸಲು ಸಾಧ್ಯವಾಗಿಲ್ಲ.

ಇಂದು ವಿದ್ಯಾರ್ಥಿಗಳು ವಿಜ್ಞಾನ ಕಲಿತರು, ಪದವಿ ಪಡೆದರೂ ಸಹ ಅವರು ವೈಜ್ಞಾನಿಕವಾಗಿ ಚಿಂತನೆ ಮಾಡಲು, ಬದುಕಲಿ ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕೇಂದ್ರ ಹಾಗೂ ರಾಜ್ಯಸರ್ಕಾರ ಎಷ್ಟೇ ಕಷ್ಟಪಟ್ಟರೂ ಸಾಧ್ಯವಾಗಿಲ್ಲ. ಏಕೆಂದರೆ ಇಂದು SSLC ಮುಗಿಸಿದ 100 ವವಿದ್ಯಾರ್ಥಿಗಳಲ್ಲಿ ಕೇವಲ 30ರಷ್ಟು ಮಾತ್ರ ವಿಜ್ಞಾನ ವಿಷಯವನ್ನ ಆಯ್ಕೆ ಮಾಡಿಕೊಳ್ಳುತ್ತಾರೆ. 100 ಜನ ಒಂದನೇ ತರಗತಿಗೆ ಸೇರಿದರೆ ಡಿಗ್ರಿ ಹಂತಕ್ಕೆ ಬರುವವರ ಸಂಖ್ಯೆ ಕೇವಲ 28 . ಈ 28ರಲ್ಲಿ ವಿಜ್ಞಾನ ವಿದ್ಯಾರ್ಥಿಗಳ ಸಂಜೆ ಎಷ್ಟಿರಬಹುದು ಎಂದರೆ ತೀರಾ ಕಡಿಮೆ. ಈಗಾಗಿ ವಿಜ್ಞಾನಕ್ಕೆ ಹೆಚ್ಚು ಪ್ರೋತ್ಸಾಹ ನೀಡಬೇಕು, ಚಿಕ್ಕಂದಿನಲ್ಲಿಯೇ ಮಕ್ಕಳಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ತನ್ವೀರ್ ಸೇಠ್, ಜಿಲ್ಲಾಧಿಕಾರಿಗಳಾದ ಡಿ. ರಂದೀಪ್, ಶಾಸಕರಾದ ಜಿ.ಟಿ ದೇವೇಗೌಡ, ವಾಸು, ನಹಿಮಾ ಸುಲ್ತಾನ, ಯುವ ವಿಜ್ಞಾನಿ ಪವನ್ ಹಾಗೂ ಮತ್ತಿತರರು ಹಾಜರಿದ್ದರು.

ಇನ್ನು ಈ ಸಮಾವೇಶ ಮೂರು ದಿನಗಳ ಕಾಲ ನಡೆಯಲಿದ್ದು ಡಿಸಂಬರ್ 1 ರವರಗೆ 3 ದಿನಗಳಕಾಲ ಜರುಗಲಿದೆ. ಈ ಸಮಾವೇಶಕ್ಕೆ ಒಂದು ಸಾವಿರಕ್ಕೂ ಅಧಿಕ ಮಕ್ಕಳ ಭಾಗವಹಿಸಿದ್ದಾರೆ. ಸಂಶೋಧನ ಕಾರ್ಯಗಳು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಹಾಗೂ ಪ್ರಾಜೆಕ್ಟ್ ಕಾರ್ಯಕ್ರಮಗಳು ವಿಜ್ಞಾನ ಭವನದಲ್ಲಿ ಜರಗುತ್ತಿದೆ. ಗ್ರಾಮೀಣ ಮತ್ತು ನಗರ ಪ್ರದೇಶದ 10 ರಿಂದ 14 ವರ್ಷ ಹಾಗೂ 14 ರಿಂದ 18 ವರ್ಷದ ಮಕ್ಕಳು ತಾಲ್ಲೂಕು ಮಟ್ಟ, ಜಿಲ್ಲಾ ಮಟ್ಟದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ನಡೆಸಿ ಆಯ್ಕೆಯಾದ ರಾಜ್ಯ ಮಟ್ಟದ ವಿಜ್ಞಾನ ಸಮ್ಮೇಳನಕ್ಕೆ ರಾಜ್ಯದ ಪ್ರತಿ ಜಿಲ್ಲೆಯಿಂದ 10 ತಂಡಗಳಂತೆ 1200 ಮಕ್ಕಳು 300 ಶಿಕ್ಷಕರು ಆಗಮಿಸಿದ್ದಾರೆ. ತೀರ್ಪುಗಾರರಾಗಿ 100 ಜನ ಅಧ್ಯಾಪಕರು ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದಾರೆ.

ರಾಜ್ಯದ ಪ್ರತಿ ಜಿಲ್ಲೆಯಿಂದ 10 ತಂಡಗಳಿದ್ದು ಅದರಲ್ಲಿ 10 ರಿಂದ 14 ಗ್ರಾಮೀಣ ಪ್ರದೇಶದಿಂದ 2 ತಂಡ, ನಗರ ಪ್ರದೆಶದಿಂದ 2 ತಂಡ ಹಾಗೂ 14 ರಿಂದ 18 ವಯಸ್ಸಿನ 6 ತಂಡಗಳಲ್ಲಿ ಗ್ರಾಮೀಣ ಪ್ರದೇಶದಿಂದ 3 ತಂಡಗಳು ಹಾಗೂ ನಗರ ಪ್ರದೇಶದಿಂದ 3 ತಂಡಗಳು ಭಾಗವಹಿಸುತ್ತಿವೆ. ಅಲ್ಲದೆ ಈ ಸಮ್ಮೇಳನದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ಗುಜರಾತ್‍ನ ಅಹಮದಾಬಾದ್‍ನಲ್ಲಿ ಡಿಸಂಬರ್ 27 ರಿಂದ ನಡೆಯುವ ರಾಷ್ಟ್ರಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸುವರು.

Related Articles

Leave a comment

Back to Top

© 2015 - 2017. All Rights Reserved.