ಕರ್ನಾಟಕ ಸೇನಾಪಡೆ ವತಿಯಿಂದ ಹಿರಿಯ ಪತ್ರಕರ್ತ ರಾಜಶೇಖರ ಕೋಟಿ ಅವರಿಗೆ ಭಾವಪೂರ್ಣ ಶ್ರಧ್ಧಾಂಜಲಿ

Kannada News, Regional No Comments on ಕರ್ನಾಟಕ ಸೇನಾಪಡೆ ವತಿಯಿಂದ ಹಿರಿಯ ಪತ್ರಕರ್ತ ರಾಜಶೇಖರ ಕೋಟಿ ಅವರಿಗೆ ಭಾವಪೂರ್ಣ ಶ್ರಧ್ಧಾಂಜಲಿ 17

ಮೈಸೂರು: ಇತ್ತೀಚೆಗೆ ನಿಧನ ಹೊಂದಿದ ಹಿರಿಯ ಪತ್ರಕರ್ತರು, ಸಂಪಾದಕರಾದ ರಾಜಶೇಖರ ಕೋಟಿ ಅವರಿಗೆ ಕರ್ನಾಟಕ ಸೇನಾ ಪಡೆ ಭಾವಪೂರ್ಣ ಶ್ರಧ್ಧಾಂಜಲಿ ಸಲ್ಲಿಸಿತು.

ನಗರದ ಜೆ.ಎಸ್.ಎಸ್ ವಿದ್ಯಾಪೀಠ ಎದುರು ಇರುವ ಶ್ರೀ ಬಸವಣ್ಣ ಅವರ ಪಾರ್ಕ್’ನಲ್ಲಿ ನಡೆದ ಈ ಶ್ರದ್ಧಾಂಜಲಿ ಸಭೆ ವೇಳೆ ಜಿಲ್ಲಾಧ್ಯಕ್ಷರಾದ ತೇಜೇಶ್ ಲೋಕೇಶ್ ಗೌಡ ಅವರು ಮಾತನಾಡ ಹಿರಿಯ ಪತ್ರಕರ್ತರು, ಹೋರಾಟಗಾರರು ಹಾಗೂ ಹಲವಾರು ಉದಯೋನ್ಮುಖ ಪತ್ರಕರ್ತರಿಗೆ ಅವಕಾಶ, ಪ್ರೋತ್ಸಾಹ ನೀಡಿ ಬೆಳೆಸಿದ, ಆಂದೋಲನ ದಿನಪತ್ರಿಕೆ ಸಂಪಾದಕರಾದ ರಾಜಶೇಖರ್ ಕೋಟಿ ಅವರ ನಿಧನ ಪತ್ರಿಕೆ ರಂಗಕ್ಕೆ, ಸಾಹಿತ್ಯ ಲೋಕಕ್ಕೆ ಹಾಗೂ ಕನ್ನಡ ಹೋರಾಟಕ್ಕೆ ತಂಬಲಾರದ ನಷ್ಟ ವಾಗಿದೆ.

1972 ರಲ್ಲಿ ಯುವಜನರ ವಾರ ಪತ್ರಿಕೆಯಾಗಿ ಆಂದೋಲನ ಪತ್ರಿಕೆ ಪ್ರಾರಂಭಿಸಿ ತುರ್ತು ಪರಿಸ್ಥಿತಿಯ ಸಮಯದಲ್ಲಿ ತುರ್ತು ಪರಿಸ್ಥಿತಿ ವಿರೋಧಿಸಿ ಪತ್ರಿಕೆ ಬರಹಗಳ ಮೂಲಕ ಹೋರಾಟವನ್ನು ನಡೆಸಿದರು. ಕನ್ನಡ ಪತ್ರಿಕೋದ್ಯಮ ದ ಬೆಳವಣಿಗೆಗೆ ಕೋಟಿ ರವರ ಕೊಡುಗೆ ಅಪಾರ. ಕನ್ನಡ ಪರ ವಿಚಾರಗಳಲ್ಲಿ ಯಾವುದೇ ರಾಜಿಯಾಗದೆ ನಿಷ್ಟುರವಾಗಿ ಕನ್ನಡ ಪರ ಬರೆಯುತ್ತಿದ್ದರು. ಎನ್ ಟಿ ಎಂ ಶಾಲೆ ಉಳಿಸುವಲ್ಲಿ ಕೋಟಿಯವರು ಪ್ರಧಾನ ಪಾತ್ರ ವಹಿಸಿದ್ದರು.

ದೀನ ದಲಿತರ ಪರ ನಿಲ್ಲುತ್ತಿದ್ದರು. ಇತ್ತೀಚೆಗೆ ಆಟೋ ಚಾಲಕರ ಸಂಘದ ಗೌರವಾಧ್ಯಕ್ಷರಾಗಿ, ಸಾವಿರಾರು ಆಟೋ ಚಾಲಕರನ್ನು ಒಗ್ಗೂಡಿಸಿ ಆಟೋ ಚಾಲಕರ ವಿವಿಧೋದ್ದೇಶ ಸಂಘ ನಿರ್ಮಾಣಕ್ಕೆ ಕಾರಣರಾಗಿದ್ದಾರೆ.
ಹೀಗೆ ಸರಳ ಸಜ್ಜನಿಕೆಯ ಪ್ರತಿರೂಪವಾಗಿ ಕಿರಿಯ ಪತ್ರಕರ್ತರಿಗೆ ಮಾದರಿಯಾಗಿರುವ ಹಿರಿಯ ಪತ್ರಕರ್ತ ರಾಜಶೇಖರ್ ಕೋಟಿ ರವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಮ್ಮ ಕರ್ನಾಟಕ ಸೇನಾ ಪಡೆ ವತಿಯಿಂದ ಅವರಿಗೆ ಪುಷ್ಪಾರ್ಚನೆ ಮಾಡಿ, ಮತ್ತೆ ಹುಟ್ಟಿ ಬನ್ನಿ ಎಂದು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದೆವು ಎಂದು ಹೇಳಿದರು.

ಈ ವೇಳೆ ಸಮಾಜ ಸೇವಕ ರಘುರಾಂ ವಾಜಪೇಯಿ, ನಗರ ಪಾಲಿಗೆ ಸದಸ್ಯ ಸುನಿಲ್, ಶಾಂತಮೂರ್ತಿ, ರಾಘವೇಂದ್ರ ಸ್ವಾಮಿ, ನಂಜುಂಡಸ್ವಾಮಿ, ರವಿತೇಜ, ಗುರುಮಲ್ಲಪ್ಪ, ಮಿನಿ ಬಂಗಾರಪ್ಪ , ರಾಧಾಕೃಷ್ಣ, ನಾಸಿರ್, ರಬ್ಬರ್, ಬಾಬು, ಗುರುಶಂಕರ್, ಶ್ರೀನಿವಾಸ್ ರಾಜಕುಮಾರ್ ಇನ್ನೂ ಮುಂತಾದವರು ಭಾಗವಹಿಸಿದ್ದರು.

Related Articles

Leave a comment

Back to Top

© 2015 - 2017. All Rights Reserved.