ಬಿಸಿಸಿಐ ಮೇಲೆ 52 ಕೋಟಿ ಭಾರಿ ದಂಡ

Kannada News, Sports No Comments on ಬಿಸಿಸಿಐ ಮೇಲೆ 52 ಕೋಟಿ ಭಾರಿ ದಂಡ 9

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೇಲೆ ಭಾರತೀಯ ಸ್ಪರ್ಧಾತ್ಮಕ ಆಯೋಗವು (ಸಿಸಿಐ) 52 ಕೋಟಿ ರೂಪಾಯಿಗಳ ಭಾರಿ ದಂಡ ಹೇರಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಅಭ್ಯಾಸಗಳಿಗೆ ವಿರುದ್ಧವಾಗಿ ನಡೆದುಕೊಂಡಿರುವುದೇ ಬಿಸಿಸಿಐ ಮೇಲೆ ದಂಡ ಹೇರಲು ಕಾರಣವಾಗಿದೆ.

ಸಿಸಿಐ ವಿಧಿಸಿರುವ 44 ಪುಟಗಳ ಆದೇಶದಲ್ಲಿ, ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಬಿಸಿಸಿಐ ಒಟ್ಟು ವಹಿವಾಟಿನ ಶೇಕಡಾ 4.48ರಷ್ಟು ಮಾತ್ರ ದಂಡ ವಿಧಿಸಲಾಗಿದೆ. 2013-14, 2014-15 ಮತ್ತು 2015-16ನೇ ಸಾಲಿನಲ್ಲಿ ಬಿಸಿಸಿಐ ಸರಾಸರಿ 1,164.7 ಕೋಟಿ ರೂ.ಗಳ ಸರಾಸರಿ ವಹಿವಾಟನ್ನು ಹೊಂದಿತ್ತು.

2013ನೇ ಇಸವಿಯಲ್ಲೂ ಇದಕ್ಕೆ ಸಮಾನವಾದ ರೀತಿಯಲ್ಲಿ ಬಿಸಿಸಿಐ ಮೇಲೆ ಸಿಸಿಐ ದಂಡ ಹೇರಿತ್ತು. ಅಂದು ಮೇಲ್ಮನವಿ ಸಲ್ಲಿಸಿದ್ದ ಬಿಸಿಸಿಐ, ನ್ಯಾಯಮಂಡಳಿಯಿಂದ ಪರವಾದ ತೀರ್ಪುನ್ನು ಪಡೆಯುವಲ್ಲಿ ಯಶಸ್ವಿಯಾಗಿತ್ತು.

Related Articles

Leave a comment

Back to Top

© 2015 - 2017. All Rights Reserved.