ಮಹಿಳಾ ಸಬಲೀಕರಣಕ್ಕಾಗಿ ಪ್ರಪಂಚ ಪರ್ಯಟನೆಗೆ ಮುಂದಾದ ಮೈಸೂರಿನ ತಾಯಿ-ಮಗಳು

Featured, Kannada News, Regional, Top News No Comments on ಮಹಿಳಾ ಸಬಲೀಕರಣಕ್ಕಾಗಿ ಪ್ರಪಂಚ ಪರ್ಯಟನೆಗೆ ಮುಂದಾದ ಮೈಸೂರಿನ ತಾಯಿ-ಮಗಳು 34

ಬೆಂಗಳೂರು: ಮಹಿಳಾ ಸಬಲೀಕರಣ ಹಾಗೂ ವಿಮಾನಯಾನ ವಲಯಕ್ಕೆ ಹೆಚ್ಚು ಮಹಿಳೆಯರನ್ನು ಆಕರ್ಷಿಸುವ ಸಲುವಾಗಿ ಹಗುರ ವಿಮಾನದಲ್ಲಿ ಪ್ರಪಂಚ ಸುತ್ತಲು  ಮೈಸೂರಿನ ತಾಯಿ-ಮಗಳು ಮುಂದಾಗಿದ್ದಾರೆ.

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಪ್ರಪಂಚ ಪರ್ಯಟನೆಗೆ ತೊಡಗಿದ್ದು, ಮೈಸೂರು ಮೂಲದ ಮಹಿಳಾ ಪೈಲಟ್ ಆಡ್ರೆ ದೀಪಿಕಾ ಮಬೆನ್ ಹಾಗೂ ಅವರ ಪುತ್ರಿ, ಫೋಟೋಗ್ರಫಿ ವಿದ್ಯಾರ್ಥಿನಿ ಆ್ಯಮಿ ಮೆಹ್ತಾ ಅವರು ಹಗುರ ವಿಮಾನದಲ್ಲಿ ಪ್ರಪಂಚ ಸುತ್ತಲು ನಿರ್ಧರಿಸಿದ್ದಾರೆ. ಮುಂದಿನ 2018ರ ಫೆಬ್ರವರಿ ಮೊದಲ ವಾರದಲ್ಲಿ ‘ಮಾಹಿ’ ಹೆಸರಿನ ಹಗುರ ವಿಮಾನದ ಮೂಲಕ 21 ದೇಶ ಸುತ್ತುವ ಗುರಿ ಹೊಂದಿದ್ದು, ಸುಮಾರು 80 ದಿನಗಳ ಪ್ರವಾಸದಲ್ಲಿ ಭಾರತ, ಜಪಾನ್, ರಷ್ಯಾ, ಅಮೆರಿಕ, ಯುರೋಪ್ ಸುತ್ತಿ ಪಾಕಿಸ್ತಾನದ ಮಾರ್ಗವಾಗಿ ಭಾರತಕ್ಕೆ ವಾಪಸ್ ಬರಲಿದ್ದಾರೆ.

ನಿನ್ನೆ ಜಕ್ಕೂರಿನ ಸರ್ಕಾರಿ ವೈಮಾನಿಕ ತರಬೇತಿ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ವಿಶ್ವ ಪರ್ಯಟನೆಯ ಮಾಹಿತಿ ನೀಡಿದ ದೀಪಿಕಾ ಮಬೆನ್, ಪ್ರತಿಯೊಬ್ಬ ಮಹಿಳೆಯು ಆತ್ಮಸ್ಥೈರ್ಯದಿಂದ ಬದುಕು ನಡೆಸಬೇಕು ಮತ್ತು ಯಾವುದೇ ಸಮಸ್ಯೆ ಬಂದರೂ ಸಮರ್ಥವಾಗಿ ಎದುರಿಸುತ್ತೇನೆ ಎಂಬ ಛಲ ಹೊಂದಿರಬೇಕು. ಇದನ್ನು ಸಾಬೀತುಪಡಿಸಲು ಪ್ರಪಂಚ ಸುತ್ತಲು ಮುಂದಾಗಿದ್ದು, ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ಹಲವು ಸಂಸ್ಥೆಗಳು ಸಹಕಾರ ನೀಡಿವೆ ಎಂದರು.

Related Articles

Leave a comment

Back to Top

© 2015 - 2017. All Rights Reserved.