ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

Crime, Kannada News, Regional No Comments on ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ 19

ವಿಜಯಪುರ: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿಂದಗಿ ತಾಲೂಕಿನ ಕೊಕಟನೂರು ಗ್ರಾಮದಲ್ಲಿ ನಡೆದಿದೆ.

ಇನ್ನು ರೈತ ಸ್ವಂತ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶ್ರೀಶೈಲ ಶರಣಪ್ಪ ತಳೇವಾಡ (ಸಾತಿಹಾಳ) 32 ಆತ್ಮಹತ್ಯೆ ಮಾಡಿಕೊಂಡ ರೈತ.

10 ಎಕರೆ ಜಮೀನಿನಲ್ಲಿ ತೊಗರಿ ಹಾಗೂ ಹತ್ತಿ ಬೆಳೆ ಬೆಳೆದಿದ್ದ, ಕನ್ನೋಳ್ಳಿ ಗ್ರಾಮೀಣ ಬ್ಯಾಂಕ್ 3 ಲಕ್ಷ, ಸಿಂದಗಿ ಕಾರ್ಪೊರೇಷನ್ ಬ್ಯಾಂಕ್ 3.50 ಲಕ್ಷ ಹಾಗೂ ಖಾಸಗಿ‌ ವ್ಯಕ್ತಿಗಳ ಬಳಿ 5 ಲಕ್ಷ ಸಾಲ ಮಾಡಿದ್ದರು. ಸಾಲ ತೀರಿಸಲಾಗದು ಎಂದು‌ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ಮಲ್ಲಿಕಾರ್ಜುನ ಅಲ್ಲಾಪುರ 

Related Articles

Leave a comment

Back to Top

© 2015 - 2017. All Rights Reserved.