ವೈದ್ಯರುಗಳಿಗೆ ಮ್ಯಾನೆಜ್ಮೆಂಟ್ ಡೆವಲಪ್‌ಮೆಂಟ್ ತರಬೇತಿ ಶಿಬಿರ

Kannada News, Regional No Comments on ವೈದ್ಯರುಗಳಿಗೆ ಮ್ಯಾನೆಜ್ಮೆಂಟ್ ಡೆವಲಪ್‌ಮೆಂಟ್ ತರಬೇತಿ ಶಿಬಿರ 24

ಮಂಗಳೂರು: ಜಸ್ಟೀಸ್ ಕೆ. ಎಸ್ ಹೆಗ್ಡೆ ಉದ್ಯಮಾಡಳಿತ ಸಂಸ್ಥೆ ಸೆಂಟರ್ ಫಾರ್ ಎಕ್ಷೀಕ್ಯೂಟಿವ್ ಡೆವಲಪ್‌ಮೆಂಟ್ ಆಶ್ರಯದಲ್ಲಿ ವೈದ್ಯಕೀಯ ವೃತ್ತಿಯ ಡಾಕ್ಟರ್ ಗಳಿಗೆ 2 ದಿನಗಳ ಕಾರ್ಯಗಾರವು ಮಂಗಳೂರಿನ ನಿಟ್ಟೆ ಎಜ್ಯೂಕೇಷನ್ ಇಂಟರ್‌ನ್ಯಾಷನಲ್ ನಲ್ಲಿ ಜರುಗಿತು.

ವೃತ್ತಿನಿರತ ವೈದ್ಯರುಗಲ್ಲಿ ಆಡಳಿತಾತ್ಮಕ ಕೌಶಲ್ಯ ಅಭಿವೃದ್ಧಿ ಪಡಿಸುವುದರ ಜೊತೆಗೆ ಅವರಲ್ಲಿ ವೈಯಕ್ತಿಕ ಪರಿಣಾಮಕಾರಿತ್ವ, ವೃತ್ತಿಪರ ಉತ್ಕೃಷ್ಟತೆಯನ್ನು ಅಭಿವೃದ್ಧಿಪಡಿಸಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ವಿ ವೈದ್ಯರುಗಳನ್ನಗಿಸುವುದು ಕಾರ್ಯಗಾರದ ಮುಖ್ಯ ಉದ್ದೇಶವಾಗಿದೆ.

ಇನ್ನು ಈ ಕಾರ್ಯಗಾರದಲ್ಲಿ ಜಿಲ್ಲೆಯ ಬೇರೆ ಬೇರೆ ಪ್ರತಿಷ್ಠಿತ ಸಂಸ್ಥೆಗಳಾದ ನಿಟ್ಟೆ ವಿಶ್ವವಿದ್ಯಾನಿಲಯ, ಎಸ್.ಡಿ.ಎಂ, ಹಾಗೂ ಸ್ಥಳೀಯ ವೈದ್ಯಕೀಯ ಸಂಸ್ಥೆಗಳಿಂದ ಒಟ್ಟು 25 ಮಂದಿ ವೈದ್ಯರು ಸದುಪಯೋಗ ಪಡೆದುಕೊಂಡರು.

ಸಂಪನ್ಮೂಲ ವ್ಯಕ್ತಿಗಳಾಗಿ ನಿಟ್ಟೆ ವಿವಿ ಯ ಸಹ ಕುಲಪತಿ ಡಾ. ಎಂ.ಎನ್ ಮುಡಿತ್ತಾಯ, ನಿಟ್ಟೆಯ ಜಸ್ಟೀಸ್ ಕೆ.ಎಸ್ ಹೆಗ್ಡೆ, ಉದ್ಯಮಾಡಳಿತ ಸಂಸ್ಥೆಯ ಪ್ರಾಧ್ಯಾಪಕರುಗಳಾದ ಡಾ. ಸುಧೀರ್ ರಾಜ್ ಕೆ ಮತ್ತು ಡಾ ರಾಧಾಕೃಷ್ಣನ್ ಶರ್ಮಾ , ಶೇರ್ ಗ್ರೂಪ್ ಹಾಸ್ಪಿಟಲ್ ನ ಸಿ.ಇ.ಓ ಡಾ ಮುಡಿತ್, ಉಡುಪಿಯ ಡಾ. ರವೀಂದ್ರನಾಥ್ ಶ್ಯಾನುಭಾಗ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಿಟ್ಟೆ ವಿವಿಯ ಉಪಕುಲಪತಿಗಳಾದ ಡಾ ಸತೀಶ್ ಭಂಡಾರಿ ಅವರು ಮಾತನಾಡಿ ವೈದ್ಯಕೀಯ ವೃತ್ತಿ ಅತ್ಯಂತ ಮಹತ್ತರವಾಗಿದ್ದು, ವೈದ್ಯರುಗಳು ತಮ್ಮ ವೃತ್ತಿ ಕೌಶಲ್ಯವನ್ನು ಬೆಳೆಸುವುದರ ಜೊತೆಗೆ ಆಡಳಿತಾತ್ಮಕ ಕೌಶಲ್ಯಗಳನ್ನು ವೃದ್ಧಿಸಿಕೊಂಡು ಮಾನವೀಯ ಸೇವೆಗಳನ್ನು ರೋಗಿಗಳಿಗೆ ನೀಡಬೇಕು ಎಂದು ಕರೆನೀಡಿದರು.

ನಂತರ ತರಬೇತಿಯಲ್ಲಿ ಭಾಗವಹಿಸಿದ್ದ ವೈದ್ಯರುಗಳಿಗೆ ಪ್ರಮಾಣಪತ್ರ ವಿತರಿಸಲಾಯ್ತು. ಈ ವೇಳೆ ಜಸ್ಟೀಸ್ ಕೆ.ಎನ್ ಹೆಗ್ಡೆ, ಉದ್ಯಮಾಡಳಿತ ಸಂಸ್ಥೆಯ ಡಾ ಎಂ.ಪಿ ಆಚಾರ , ಡಾ ಆಶಾಲತ ಮತ್ತು ಡಾ. ಜ್ಞಾನೇಶ್ವರ್ ಪೈ ಇ ವೇಳೆ ಜೊತೆಗಿದ್ದರು.

Related Articles

Leave a comment

Back to Top

© 2015 - 2017. All Rights Reserved.