
MYSORE ಅಲ್ಲ MYSURUಗಾಗಿ ಜಾಗೃತಿ ಜಾಥ
Kannada News, Regional, Top News November 30, 2017 No Comments on MYSORE ಅಲ್ಲ MYSURUಗಾಗಿ ಜಾಗೃತಿ ಜಾಥ 33ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಪದ ಇಂಗ್ಲಿಷ್ ನಲ್ಲಿ MYSORE ಎಂದು ಇದ್ದಿದ್ದನ್ನು ಸರ್ಕಾರ MYSURU ಎಂದು ಬಳಸಲು ಆದೇಶ ಹೊರಡಿಸಿತ್ತು. ಆದರೆ ಕೆಲವು ಕಡೆ ಬದಲಾಣೆಯಾಗಿದ್ದು ಅಲವು ಕಡೆ ಮೊದಲಿನ ಪದವನ್ನೆ ಬಳಕೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸಿ MYSORE ಬದಲು MYSURU ಪದ ಬಳಕೆ ಮಾಡುವಂತೆ ಆಗ್ರಹಿಸಲು ವಿಶ್ವಾಸ ಸೇವಾ ಟ್ರಸ್ಟ್ ವಿ ಪಾರ್ ಮೈಸೂರು ಯಾತ್ರೆಯನ್ನು ರಾಮದಾಸ್ ಅವರ ನೇತ್ರುತ್ವದಲ್ಲಿ ಇಂದು ಹಮ್ಮಿ ಕೊಂಡಿತ್ತು.
ಅರಮನೆ ನಗರಿಗೆ ಮೈಸೂರ್ ಬದಲು ಮೈಸೂರು ಪದದ ಬಳಕೆ ಅತಿ ಸುಂದರ. ಆದ್ದರಿಂದ ಇನ್ನೂ ಮುಂದೆ ಎಲ್ಲರೂ ಇದನ್ನೆ ಬಳಕೆ ಮಾಡುವಂತೆ ಮತ್ತೊಮ್ಮೆ ಸರ್ಕಾರ ಆದೇಶ ನೀಡ ಬೇಕು, ಜನರು MYSURU ಪದವನ್ನೆ ಬಳಕೆ ಮಾಡುವಂತೆ ಯಾತ್ರೆಯಲ್ಲಿ ಆಗ್ರಹಿಸಲಾಯಿತು.
ವಿಶ್ವಾಸ ಸೇವಾ ಟ್ರಸ್ಟ್ ಮುಂದಾಳತ್ವದಲ್ಲಿ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಡಿಸಿ ಕಚೇರಿ ವರೆಗೆ ಮೆರವಣಿಗೆ ಮೂಲಕ ತೆರಳಿ ಮನವಿ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ರಾಮದಾಸ್ ಸೇರಿದಂತೆ ನಗರ ಪಾಲಿಕೆ ಸದಸ್ಯರಾದ ಬಿ ವಿ ಮಂಜುನಾಧ್ ಟಸ್ಟ್ ನ – ಸುಭಾಷ್ , ಆದಿ ಹಸಗುಲಿ , ರುತ್ವಿಕ್ , ನಿಶಾಂತ್ ,ಚಿರಾಗ್ ಸುಮುಕ್ , ಧನುಷ್ , ಹರಿಹರನ್ , ಸುಬ್ರಹ್ಮಣ್ಯ ಹಾಜರಿದ್ದರು ಹಾಗು ನಟರಾಜ ವಿದ್ಯ ಸಂಸ್ಥೆಯ ವಿಧ್ಯಾಥಿಗಳು ಹಾಗು ಅನೇಕ ಗಣ್ಯರು ಭಾಗಿಯಾಗಿ ಬೆಂಬಲ ನೀಡಿದ್ದು, ಸಾರ್ವಜನಿಕರು ಸಾಥ್ ನೀಡಿ MYSORE ಪದದ ಬದಲು MYSURU ಪದ ಬಳಕೆ ಆಗ್ರಹಿಸಿದರು.
Leave a comment