ಇಂದಿನಿಂದ ಕಾಫಿನಾಡಲ್ಲಿ ದತ್ತ ಜಯಂತಿ ಸಂಭ್ರಮ

BREAKING NEWS, Kannada News, Regional, Top News No Comments on ಇಂದಿನಿಂದ ಕಾಫಿನಾಡಲ್ಲಿ ದತ್ತ ಜಯಂತಿ ಸಂಭ್ರಮ 19

ಚಿಕ್ಕಮಗಳೂರು: ಇಂದಿನಿಂದ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮೂರು ದಿನಗಳ ಕಾಲ ದತ್ತ ಜಯಂತಿ ಸಂಭ್ರಮ ಆರಂಭವಾಗಲಿದೆ.

ಆದರೆ, ನಾಳೆ, ದತ್ತ ಜಯಂತಿಯ ಅಂಗವಾಗಿ ಬೃಹತ್ ಶೋಭಾಯಾತ್ರೆ ನಡೆಸಲು ತೀರ್ಮಾನ ಮಾಡಲಾಗಿದೆ. ಇದೇ ವೇಳೆ, ಈದ್’ಮಿಲಾದ್ ಕೂಡ ಇದ್ದು, ಮುಸ್ಲಿಮರು ಮೆರವಣಿಗೆ ಕೂಡ ನಡೆಸಲಿದ್ದಾರೆ. ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮಧ್ಯಾಹ್ನದವರೆಗೆ ಮುಸ್ಲಿಮರು ಮೆರವಣಿಗೆ ನಡೆಸಲು ಅನುಮತಿ ನೀಡಲಾಗಿದೆ. ಮಧ್ಯಾಹ್ನದ ನಂತರ ದತ್ತ ಜಯಂತಿಯ ಪ್ರಯುಕ್ತ ಶೋಭಾಯಾತ್ರೆಗೆ ಅನುಮತಿ ಕಲ್ಪಿಸಲಾಗಿದೆ.

ಸೂಕ್ತ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಯಾವುದೇ ರೀತಿಯಾದ ಅಹಿತಕರವಾದ ಘಟನೆಗಳು ಜರುಗದಂತೆ 3 ದಿನ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗುತ್ತಿದೆ. ಅಲ್ಲದೇ ನಗರದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳೂ ಕೂಡ ಮುಚ್ಚಿರಲಿವೆ.

Related Articles

Leave a comment

Back to Top

© 2015 - 2017. All Rights Reserved.