1 ರೂ ನೋಟಿಗೆ 100ರ ಸಂಭ್ರಮ

BREAKING NEWS, Featured, Kannada News, Regional, Top News No Comments on 1 ರೂ ನೋಟಿಗೆ 100ರ ಸಂಭ್ರಮ 115

ನವದೆಹಲಿ: ಒಂದು ರೂ. ಮುಖಬೆಲೆಯ ನೋಟ್ ಬಿಡುಗಡೆಯಾಗಿ ಇಂದಿಗೆ 100 ವರ್ಷ ತುಂಬಿದೆ. ಮೊದಲು 1 ರೂ. ನೋಟನ್ನು ರಾಜ 5ನೇ ಜಾರ್ಜ್ ಫೋಟೋ ಜೊತೆಗೆ 1917 ನವೆಂಬರ್ 30 ರಂದು ಪರಿಚಯಿಸಲಾಗಿತ್ತು.

ಇತರೆ ನೋಟುಗಳಿಗಿಂತ ಒಂದು ರೂ. ನೋಟು ಸಾಕಷ್ಟು ಕಾರಣಗಳಿಂದ ತನ್ನದೇ ವಿಶಿಷ್ಟತೆ ಹೊಂದಿದೆ. ಈ ನೋಟುಗಳನ್ನ ಭಾರತ ಸರ್ಕಾರ ವಿತರಿಸುತ್ತದೆಯೇ ಹೊರತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಿತರಿಸುವುದಿಲ್ಲ ಮತ್ತು ಇದು ಬಾಧ್ಯತೆಯಾಗಿರುವ ಪ್ರಾಮಿಸರಿ ನೋಟ್ ಅಲ್ಲ. ಒಂದು ರೂ. ನೋಟ್ ಏಕೈಕ ಕರೆನ್ಸಿ ನೋಟು ಅಥವಾ ಆಸ್ತಿ ಎಂದು ಹೇಳಬಹುದು.

ಮೊದಲನೇ ವಿಶ್ವ ಯುದ್ಧದ ಸಂದರ್ಭದಲ್ಲಿ ನಾಣ್ಯಗಳನ್ನ ಠಂಕಿಸಲು ಸಾಧ್ಯವಾಗದಿದ್ದಾಗ ಅಂದಿನ ವಸಹತು ಅಧಿಕಾರಿಗಳು 1917 ರಲ್ಲಿ ನೋಟನ್ನು ಮುದ್ರಿಸಿ ಚಲಾವಣೆಗೆ ತಂದಿದ್ದರು. ರಿಸರ್ವ್ ಬ್ಯಾಂಕ್ ವೆಬ್‍ಸೈಟ್ ಪ್ರಕಾರ 1926 ರಲ್ಲಿ ಈ ನೋಟಿನ ವಿತರಣೆ ನಿಲ್ಲಿಸಲಾಗಿತ್ತು. ಮತ್ತೆ 1940 ರಲ್ಲಿ ಮರು ಪರಿಚಯಿಸಲಾಯಿತು. 1994 ರಲ್ಲಿ ಮತ್ತೆ ವಿತರಣೆ ನಿಲ್ಲಿಸಿ ಇದೀಗ 2015 ರಿಂದ ಮತ್ತೆ ಚಲಾವಣೆಯಲ್ಲಿದೆ.

ಈ ಜರ್ನಿಯಲ್ಲಿ 1 ರೂ. ನೋಟು ತನ್ನ ವಿಶಿಷ್ಟತೆಯನ್ನ ಉಳಿಸಿಕೊಂಡು ಬಂದಿದೆ. ಜೊತೆಗೆ ಇದನ್ನು ಕಾನೂನು ಭಾಷೆಯಲ್ಲಿ ನಾಣ್ಯ ಎಂದೇ ಕರೆಯುತ್ತಾರೆ. ಮೊದಲ ಬಾರಿಗೆ ಬೆಳ್ಳಿ ನಾಣ್ಯಗಳಿಗೆ ಬದಲಾಗಿ 1 ರೂ. ನೋಟನ್ನು ಪರಿಚಯಿಸಲಾಗಿತ್ತು. ಮೊದಲನೇ ಮಹಾ ಯುದ್ಧದ ಸಂದರ್ಭದಲ್ಲಿ ಬೆಳ್ಳಿಯ ಬೆಲೆ ಏರಿಕೆಯಾಗಿದ್ದರಿಂದ ನೋಟು ಮುದ್ರಣ ಮಾಡಬೇಕಾಯ್ತು. ಆಗ ಅಂದಿನ ಬೆಳ್ಳಿ ನಾಣ್ಯದ ಫೋಟೋವನ್ನ ನೋಟ್ ಮೇಲೆ ಮುದ್ರಿಸಿ 1 ರೂ. ನೋಟು ಜಾರಿಗೆ ತರಲಾಗಿತ್ತು. ಅಂದಿನಿಂದ ಪ್ರತಿ 1 ರೂ. ನೋಟಿನಲ್ಲೂ ಆಯಾ ವರ್ಷದ ಒಂದು ರೂ. ನಾಣ್ಯದ ಫೋಟೋವನ್ನ ಮುದ್ರಿಸಲಾಗಿರುತ್ತದೆ.

ಇತರೆ ಬ್ಯಾಂಕ್ ನೋಟುಗಳಂತೆ ಇದಕ್ಕೆ ಆರ್‍ಬಿಐ ಗವರ್ನರ್ ಸಹಿ ಮಾಡುವುದಿಲ್ಲ. ಬದಲಾಗಿ ಹಣಕಾಸು ಕಾರ್ಯದರ್ಶಿ ಸಹಿ ಮಾಡುತ್ತಾರೆ. ಮೊದಲ ಒಂದು ರೂ. ನೋಟು ಮೂವರು ಬ್ರಿಟಿಷ್ ಹಣಕಾಸು ಕಾರ್ಯದರ್ಶಿಗಳಾದ ಎಮ್‍ಎಮ್‍ಎಸ್ ಗುಬ್ಬೆ, ಎಸಿ ಮ್ಯಾಕ್ ವಾಟರ್ಸ್ ಮತ್ತು ಎಚ್ ಡೆನ್ನಿಂಗ್ ಅವರ ಸಹಿ ಹೊಂದಿತ್ತು. ಸ್ವಾತಂತ್ರ್ಯದ ನಂತರದಿಂದ ಇಲ್ಲಿಯವರೆಗೆ 18 ಹಣಕಾಸು ಕಾರ್ಯದರ್ಶಿಗಳನ್ನ ಒಳಗೊಂಡಂತೆ ಪ್ರತಿ ನೋಟಿನ ಮೇಲೂ ಹಣಕಾಸು ಕಾರ್ಯದರ್ಶಿ ಸಹಿ ಮಾಡುತ್ತಾರೆ.

ಒಂದು ರೂ. ನೋಟನ್ನ ಎರಡು ಬಾರಿ ಚಲಾವಣೆಯಿಂದ ಹಿಂಪಡೆಯಲಾಗಿತ್ತು. ನೋಟಿನ ವಿನ್ಯಾಸದಲ್ಲೂ ಮೂರು ಬಾರಿ ಬದಲಾವಣೆಯನ್ನ ಮಾಡಲಾಗಿದೆ. 1940 ರಲ್ಲಿ ಬ್ರಿಟಿಷ್ ಈ ನೋಟಿನ ಗಾತ್ರವನ್ನ ಅರ್ಧಕ್ಕೆ ಇಳಿಸಿದ್ದರ ಜೊತೆಗೆ ಲಕ್ಷಣಗಳನ್ನು ಬದಲಾಯಿಸಿತ್ತು. 1949 ರಲ್ಲಿ ಸರ್ಕಾರ ಬ್ರಿಟಿಷ್ ಚಿಹ್ನೆಗಳ ಬದಲಾಗಿ ಹೊಸದಾಗಿ ನಿರ್ಮಾಣವಾಗಿದ್ದ ಗಣರಾಜ್ಯದ ಅಧಿಕೃತ ಚೆಹ್ನೆಗಳನ್ನ ತಂದಿತ್ತು. ಕೊನೆಯದಾಗಿ 2016ರಲ್ಲಿ ನೋಟಿನ ವಿನ್ಯಾಸದಲ್ಲಿ ಬದಲಾವಣೆಯಾಗಿ ಪ್ರಸ್ತುತ ಜಾರಿಯಲ್ಲಿವಂತೆ ಇದೆ.

Related Articles

Leave a comment

Back to Top

© 2015 - 2017. All Rights Reserved.