೧೪ನೇ ಆಳ್ವಾಸ್ ನುಡಿಸಿರಿಗೆ ಚಾಲನೆ

BREAKING NEWS, Kannada News, Regional, Top News No Comments on ೧೪ನೇ ಆಳ್ವಾಸ್ ನುಡಿಸಿರಿಗೆ ಚಾಲನೆ 25

ಮೂಡಬಿದಿರೆ: ೧೪ನೇ ಆವೃತಿಯ ನುಡಿಸಿರಿ ಸಮ್ಮೇಳನಕ್ಕೆ ಚಾಲನೆ ದೊರೆತಿದ್ದು, ಡಾ.‌ಸಿ.ಎನ್. ರಾಮಚಂದ್ರನ್ ಅವರು ನುಡಿಸಿರಿಗೆ ಚಾಲನೆ ನೀಡಿದರು.

ಈ ನಂತರ ಮಾತನಾಡಿದ ಅವರು ಭಿನ್ನ ಸಂಸ್ಕೃತಿಯ, ಧರ್ಮಗಳ ಸಹಭಾಳ್ವೆ ಭಾರತೀಯ ಧರ್ಮದಲ್ಲಿ ಹಾಸುಹೊಕ್ಕಾಗಿದೆ. ಎಲ್ಲಾ ಉಪ ಧರ್ಮ, ಜಾತಿಗಳ ನಡುವೆ ಧರ್ಮ ಅಥವಾ ಸ್ವಂತಕ್ಕಾಗಿ ಚರಿತ್ರೆಯಲ್ಲಿ ಹೊಡೆದಾಡಿಕೊಂಡಿದ್ದಾರೆ. ಉದ್ದೇಶ ಹಾಗೂ ವಾಸ್ತವದ ನಡುವಿನ ಬಿರುಕು ಇದಕ್ಕೆ ಕಾರಣ ಎಂದರು.

ಯಾವುದನ್ನೂ ಸ್ಪಷ್ಟಪಡಿಸದ ಹೊರತು ಬಹುತ್ವ ಪಡೆಯಲು ಸಾಧ್ಯವಿಲ್ಲ. ಪರರ ವಿಚಾರ, ಧರ್ಮವನ್ನು ಒಪ್ಪಿಕೊಂಡರೆ ಅದು ಚಿನ್ನಗಿಂತಲೂ ಚೆನ್ನ. ಇವುಗಳು ವ್ಯಕ್ತಿನಿಷ್ಠ ನೈತಿಕ ಮೌಲ್ಯಗಳು. ಯಾವುದೇ ಸಮಾಜದಲ್ಲಿ ಸಮಾನ‌ಹಕ್ಕುಗಳನ್ನು ಪಡೆದು, ಅಸ್ಮಿತೆಯ ಉಳಿಸಿಕೊಳ್ಳುವುದು ಕಷ್ಟಸಾಧ್ಯ.

ಅಸ್ಮಿತೆಯೆನ್ನುವುದು ದೇವರ ಹಾಗೆಯಾಗಿದ್ದು, ಯಾವ ಕ್ಷಣದಲ್ಲೂ ಮಾಯವಾಗಬಹುದು. ಭಾಷೆಯ ನೆಲೆಯಲ್ಲಿ ಎಲ್ಲರೂ ಒಂದೇ ಒಂದು ಹೇಳಬಹುದು. ಆಹಾರ, ಸಂಸ್ಕೃತಿ ನೆಲೆಯಲ್ಲಿ ಭಿನ್ನತೆ ಕಾಣುತ್ತೇವೆ. ಅಸ್ಮಿತೆ ಸೂಕ್ಷ್ಮಗೊಳಿಸಿದಷ್ಟು ಅನ್ಯರು ಉತ್ಪನ್ನವಾಗುತ್ತಾ ಹೋಗುತ್ತಾರೆ.

ಸಮಾಜದಲ್ಲಿ ಅನ್ಯರಿಲ್ಲದೇ ಅನನ್ಯತೆಯಿಲ್ಲ ಅಸ್ಮಿತೆಯ ಕಾರಣಕ್ಕೇ ಗತವನ್ನು‌ ಕಲ್ಪಿಸಿ ಭವ್ಯ ಸಮಾಜ ಹಾಗೂ ಕಾರಣ ಯೋಚಿಸಿ ಅತಿ ಮಾನವರನ್ನು ಸೃಷ್ಠಿಸಲಾಗುತ್ತದೆ ಅಸ್ಮಿತೆ ಹಾಗೂ ಅಧಿಕಾರ ಎದುರಾದಾಗ ಸಾಹಿತಿ, ಚಿತ್ರಕಾರರು ಸಮಸ್ಯೆ ಎದುರಿಸಬೇಕಾಯಿತು. ಬಹುತ್ವ ಒಪ್ಪಿಕೊಂಡರೆ‌ ಅಸ್ಮಿತೆ ಕಡಿಮೆಯಾಗುತ್ತವೆ. ಬದಲಾವಣೆಯಿಂದ ಬಹುತ್ವದೊಂದಿಗೆ ಬೆರೆಯಲು ಸಾಧ್ಯ ಇದಕ್ಕೆ ಕೂಡುಗೆರೆ ಸ್ಥಳಗಳನ್ನು ಶೋಧಿಸಬೇಕು. ಎರಡು ಧರ್ಮಗಳನ್ನು ಹತ್ತಿರ ತರಬಹುದು. ಆದರೆ, ಕೂಡಿಗೆರೆಗಳಂತೆ ಅವುಗಳ ವಿಶೇಷತೆಗಳನ್ನು ಒಳಗೊಳ್ಳಿಸಿ ತರಬೇಕು. ಬಹುತ್ವದ ಎಂಬ ಶೋಧಕ್ಕೆ ನುಡಿಸಿರಿ ವೇದಿಕೆಯಾಗಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಇನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನುಬಳಿಗಾರ್ ಅವರು ಮಾತನಾಡಿ, ಕನ್ನಡ ಸಾಹಿತ್ಯ, ಸಂಸ್ಕೃತಿಗೆ ಧಕ್ಕೆಯಾದಾಗ ಇಂತಹ‌ ಸಮ್ಮೇಳನ ಒಗ್ಗಟ್ಟಿಗೆ ಪೂರಕ. ಸಮ್ಮೇಳನ ನಾವೆಲ್ಲರೂ ಒಂದೇ ಎನ್ನುವ ಭಾವನೆ ಮೂಡಿಸುತ್ತದೆ. ಭಿನ್ನ ಅಭಿಪ್ರಾಯಗಳನ್ನು ದೂರವಿರಿಸಿ ಎಲ್ಲರನ್ನು ಒಗ್ಗೂಡಿಸುತ್ತದೆ ಎಂದು ತಿಳಿಸಿದರು.

ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ ಅವರು ಮಾತನಾಡಿ ರಾಜಕೀಯ ಪಕ್ಷಗಳು ಸಮಾಜದಲ್ಲಿ ಕಂದಕ ನಿರ್ಮಾಣ ಮಾಡುತ್ತಿದೆ. ಪಕ್ಷಗಳಿಗೆ ಓಟು ಹಾಕಿದರೂ ಸ್ಥಿತಿ ಕಂಡು ನಾಚಿಗೆಯಾಗುವ ಪರಿಸ್ಥಿತಿ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಾಧ್ಯಮಗಳ ಮೇಲೂ ಅಸಮಾಧಾನ ತೋರಿದ ಡಾ. ಮೋಹನ್ ಆಳ್ವ

ಮಾಧ್ಯಮಗಳು ಸುಳ್ಳನ್ನೇ ಸತ್ಯವೆಂದು ತೋರಿಸುವಂತಾಗಿವೆ. ಒಂದು ನುಡಿಸಿರಿ, ವಿರಾಸತ್ ಬದಲಾವಣೆ ಸಾಧ್ಯವಿಲ್ಲದಿರಬಹುದು. ಆದರೆ, ನುಡಿಸಿರಿಯ ಮೂರು ದಿನಗಳ ಕಾಲ ಸಂಬಂಧ, ಪ್ರೀತಿಯ ಮೌಲ್ಯ ತೋರಿಸುತ್ತದೆ ಎಂದು ಹೇಳಿದರು.

ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಕೆ. ಅಭಯಚಂದ್ರ ಜೈನ್, ಮಾಜಿ ಸಚಿವ ಅಮರನಾಥ ಶೆಟ್ಟಿ, ಕ್ಯಾ. ಗಣೇಶ್ ಕಾರ್ಣಿಕ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮ ಉದ್ಘಾಟನೆಗು ಮೊದಲು ಮೂಡಬಿದಿರೆಯ ಆಳ್ವಾಸ್ ನುಡಿಸಿರಿಯ ಅದ್ದೂರಿ ಮೆರವಣಿಗೆಯನ್ನು ಫಾ. ಎಫ್ ಎಕ್ಸ್ ಗೋಮ್ಸ್, ಧರ್ಮಗುರುಗಳು ಮೂಲ್ಕಿ ಮೆರವಣಿಗೆಗೆ ಚಾಲನೆ ನೀಡಿದರು.

ಮೆರವಣಿಗೆ ರಾಜ್ಯ ಹಾಗೂ ದೇಶದ ವಿವಿಧ ಜನಪದ ಪ್ರಕಾರಗಳಿಂದ ಕೂಡಿತ್ತು. ನುಡಿಸಿರಿ ಅಧ್ಯಕ್ಷ ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮೋಹನ್ ಆಳ್ವ, ಶಾಸಕ ಅಭಯಚಂದ್ರ ಜೈನ್ ಉಪಸ್ಥಿತರಿದ್ದರು. ಮೆರವಣಿಗೆಯಲ್ಲಿ ನೂರಕ್ಕೂ ಮಿಕ್ಕಿ ಜನಪದ ಕಲಾ ಪ್ರಕಾರಗಳು ಭಾಗಿಯಾಗಿದ್ದವು.

Related Articles

Leave a comment

Back to Top

© 2015 - 2017. All Rights Reserved.