ರಾಷ್ಟ್ರಗೀತೆ ಹಾಡುವ ಮೂಲಕವೇ ರಾಷ್ಟ್ರಭಕ್ತನೆಂದು ಪ್ರೂವ್ ಮಾಡುವುದು ಸರಿಯಲ್ಲ: ಡಾ. ನಾಗತಿಹಳ್ಳಿ ಚಂದ್ರಶೇಖರ್

BREAKING NEWS, Kannada News, Regional, Top News No Comments on ರಾಷ್ಟ್ರಗೀತೆ ಹಾಡುವ ಮೂಲಕವೇ ರಾಷ್ಟ್ರಭಕ್ತನೆಂದು ಪ್ರೂವ್ ಮಾಡುವುದು ಸರಿಯಲ್ಲ: ಡಾ. ನಾಗತಿಹಳ್ಳಿ ಚಂದ್ರಶೇಖರ್ 23

ಮೂಡಬಿದರೆ: 14ನೇ ಆಳ್ವಾಸ್ ಸುಡಿಸಿರಿಯ ಸಮ್ಮೇಳನಾಧ್ಯಕ್ಷ ಡಾ.‌ನಾಗತಿಹಳ್ಳಿ ಚಂದ್ರಶೇಖರ್ ಅವರು ಮಾತನಾಡಿ ಪ್ರತೀ ವರ್ಷ ಕನ್ನಡ‌ಕುರಿತ ಚರ್ಚೆಗಳು ಸಣ್ಣ ಹಾಗೂ ದೊಡ್ಡ ಪ್ರಮಾಣದಲ್ಲಿ ನಡೆಯಬೇಕಿದೆ. ಬಹುತ್ವ‌ ಎನ್ನುವುದು ಸಾವಯವವಾಗಿದ್ದು, ಪ್ರಾಚೀ‌ನದಲ್ಲೂ ಇತ್ತು, ಆಧುನಿಕತೆಯಲ್ಲೂ ಇದೆ ಎಂದರು.

ಬಹುತ್ವ ನಿರಾಕರಿಸಿದರೆ‌ ಜೀವನವನ್ನೇ ನಿರಾಕರಿಸಿದಂತೆ. ಬಹುತ್ವವನ್ನು ಆದಿಕಾಲದಲ್ಲೂ ಹಿರಿಯಲು ಆಚರಿಸುತ್ತಾ, ಆದರಿಸುತ್ತಿದ್ದರು. ಇದನ್ನು ನಾವು ಮನಗಾಣಬೇಕಾಗಿದೆ. ರಾಷ್ಟ್ರಗೀತೆ ಹಾಡುವ ಮೂಲಕವೇ ರಾಷ್ಟ್ರಭಕ್ತನೆಂದು ಪ್ರೂವ್ ಮಾಡುವುದು ಸರಿಯಲ್ಲ. ಆದರೆ, ಅವಕಾಶ ಸಿಕ್ಕಾಗ ಗಟ್ಟಿಯಾಗಿ ರಾಷ್ಟ್ರಗೀತೆ,‌ನಾಡಗೀತೆ ಹಾಡಬೇಕು. ಹಾಡಿದರೆ ಮಾತ್ರ ಲಯವೈಖರಿ, ಸುಂದರತೆ ಕಾಣುತ್ತದೆ. ರಾಷ್ಟ್ರಗೀತೆ ಹಾಡದಿದ್ದರೆ ನಮಗೇ ನಷ್ಟ ಹೊರತು ಬೇರಾರಿಗೂ ಅಲ್ಲ.

೧೨ ಶತಮಾನದಲ್ಲಿ ಬಂದ ಬಹುತ್ವದ ಕ್ರಾಂತಿ ಎಂದಿಗೂ ಆಗಿಲ್ಲ. ಹಲವರಿಗೆ ಕಂಠಬಂದ ಕಾಲವದು. ಬಹುತ್ವ ಎನ್ನುವುದು ಶಕ್ತಿಮೂಲವಾಗಿದ್ದು, ಅದನ್ನು ಛಿದ್ರಗೊಳಿಸಬಾರದು. ಬಹುತ್ವದ ಶಕ್ತಿಮೂಲ ನಾಶವಾದರೆ, ಸಮಾಜ ನಾಶವಾದಂತೆ. ಸಮಾಜ ಸ್ವಾದವಾಗಬೇಕಾದರೆ ಎಲ್ಲವೂ ಒಂದು ಹದಕ್ಕೆ ಕರಗುವುದರೊಂದಿಗೆ ತನ್ನತನ ಉಳಿಸಬೇಕು. ಬಹುತ್ವದಿಂದ ಜಗತ್ತು ಬೇರೆ ಬೇರೆ ತಲ್ಲಣಗಳನ್ನು ಕಾಣುತ್ತಿದೆ. ಎಲ್ಲಾ ಜಾತಿ, ಧರ್ಮೀಯರೊಂದಿಗೆ ಬದುಕಬೇಕಾದ ನಮಗೆ ಬಹುತ್ವದ ಕಲ್ಪನೆ‌ ತುಂಬಾ ವಿಸ್ತಾರವಾಗಿರಬೇಕು. ಮಂಗಳೂರು ಕೋಮುಸೂಕ್ಷ್ಮ ಪ್ರದೇಶ ಹೇಳುತ್ತಾರೆ. ಆದರೆ,ನಾನು ನೋಡಿದಂತೆ ಈ ಪ್ರಾಂತ್ಯದಲ್ಲಿ ಉತ್ತಮ ವಾತಾವರಣವಿದೆ.

ಒಳ್ಳೆಯದನ್ನು ಬಯಸುವವರು ಸಾಕಷ್ಟಿದ್ದಾರೆ. ಬಹುತ್ವಕ್ಕೆ ವಿರುದ್ಧವಾಗಿರುವ ಕೋಮುವಾದ ಯಾವ ಧರ್ಮದಲ್ಲಿದ್ದರೂ ಖಂಡನೀಯ. ಹಿಂದೂ, ಮುಸ್ಲಿಂ, ಕ್ರೈಸ್ತರಲ್ಲಿ ಉತ್ತಮ ಬಾಂಧವ್ಯವಿದೆ. ಆದರೆ, ಮಾಧ್ಯಮಗಳಲ್ಲಿ ಅತಿರೇಕ ನಿರ್ಮಿಸುವುದು ತಪ್ಪು. ಕನ್ನಡವನ್ನು ಕಟ್ಟುವ ಕೆಲಸ ಎಲ್ಲಾ ಭಾಷೆಗಳು‌ ಮಾಡಬೇಕು. ಬಹುತ್ವ ಎಲ್ಲದಕ್ಕೂ ಅನ್ವಯಿಸಲ್ಪಡುತ್ತಿದ್ದು, ಇವೆಲ್ಲಾ ಸೇರಿದರೆ ಕರ್ನಾಟಕ. ಮೊಬೈಲ್ ಎಂಬ ನ್ಯೂಕ್ಲಿಯರ್ ಬಾಂಬ್ ಅನ್ನು ನಾವು ಹೊಂದಿದ್ದೇವೆ. ಮೊಬೈಲ್ ಯಾವ ದೃಷ್ಟಿಯಿಂದಲೂ ಅಣುಬಾಂಬ್ ಕಡಿಮೆಯಿಲ್ಲ. ಫಾರ್ವರ್ಡ್ ಮೆಸೇಜ್ ಎಂಬ ರೇಡಿಯೇಷನ್ ಒಬ್ಬರಿಂದ ಒಬ್ಬರಿಗೆ ಹಬ್ಬಿ ಸತ್ಯ,‌ಮಿಥ್ಯದ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡುತ್ತದೆ. ಸಾಮಾಜಿಕ ಜಾಲತಾಣಗಳನ್ನು ಪರಿವರ್ತನೆ ಮಾಡದಿದ್ದಲ್ಲಿ ನಮಗೆ ಉಳಿಗಾಲವಿಲ್ಲ. ಅನುಯಾಯಿಯೆಂದರೆ ಸಾಮಾಜಿಕ‌ ಜಾಲತಾಣಗಳಲ್ಲಿ ಲೈಕ್ ಕೊಡುವವರಲ್ಲ. ಇವತ್ತು ಎಲ್ಲವೂ ಚಹಾಕಪ್ ನ ಕ್ರಾಂತಿ.

ಲೇಖನಗಳನ್ನು ಪುಸ್ತಕ ಬಿಟ್ಟು ಕಂಪ್ಯೂಟರ್ ಗಳ ಮೂಲಕ ಓದುವ ಪರಿಸ್ಥಿಯಿದೆ. ಇಂದಿನ‌ ತಾಂತ್ರಿಕ ಪರಿಕರಗಳನ್ನು ಬಳಸಿ‌ಬಹುತ್ವ ಹೇಗೆ ಉಳಿಸುವುದು ಎಂದು ನೋಡಬೇಕಿದೆ ಎಂದು ಹೇಳಿದರು.

Related Articles

Leave a comment

Back to Top

© 2015 - 2017. All Rights Reserved.