ಸಾಮಾಜಿಕ ಜಾಲತಾಣದವರೆ ಹಿರಿಯ ನಟ ಶಿವರಾಮ್ ಮೃತಪಟ್ಟಿಲ್ಲ

Kannada News, Regional No Comments on ಸಾಮಾಜಿಕ ಜಾಲತಾಣದವರೆ ಹಿರಿಯ ನಟ ಶಿವರಾಮ್ ಮೃತಪಟ್ಟಿಲ್ಲ 16

ಬೆಂಗಳೂರು: ಹಿರಿಯ ನಟ ಶಿವರಾಂ ಮೃತಪಟ್ಟಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯೊಂದು ಹರಿದಾಡುತ್ತಿದ್ದು, ಶಬರಿಮಲೆಗೆ ತೆರಳಿದ್ದಾಗ ಶಿವರಾಂ ಮೃತಪಟ್ಟಿದ್ದಾರೆಂಬ ಗಾಳಿಸುದ್ದಿ ಹರಿದಾಡುತ್ತಿದೆ.

ಆದರೆ ಇದು ಕೇವಲ ವದಂತಿಯಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಶಿವರಾಂ ನಾನು ಚೆನ್ನಾಗಿದ್ದೇನೆ. ಈಗ ನಾನು ಚೆನ್ನೈನಲ್ಲಿ ಅಯ್ಯಪ್ಪ ಪೂಜೆಯಲ್ಲಿ ಇದ್ದೇನೆ. ಶನಿವಾರ ಬೆಂಗಳೂರಿಗೆ ಬರುತ್ತೇನೆ ಎಂದು ತಿಳಿಸಿದ್ದಾರೆ.

ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗುತ್ತಿರುವ ಸುದ್ದಿಯನ್ನು ನಂಬಬೇಡಿ ಎಂದು ಅವರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.