ಇಂದಿನಿಂದ ಶ್ರೀಲಂಕಾ ವಿರುದ್ಧ ಅಂತಿಮ ಟೆಸ್ಟ್ ಪಂದ್ಯ: ಭಾರತ ಗೆದ್ದರೆ ಮಾಡಲಿದೆ ದಾಖಲೆಗಳ ಮೇಲೆ ದಾಖಲೆ

Kannada News, Sports No Comments on ಇಂದಿನಿಂದ ಶ್ರೀಲಂಕಾ ವಿರುದ್ಧ ಅಂತಿಮ ಟೆಸ್ಟ್ ಪಂದ್ಯ: ಭಾರತ ಗೆದ್ದರೆ ಮಾಡಲಿದೆ ದಾಖಲೆಗಳ ಮೇಲೆ ದಾಖಲೆ 13

ಹೊಸದಿಲ್ಲಿ: ಇಲ್ಲಿನ ಫಿರೋಜ್‌ ಶಾ ಕೋಟ್ಲಾ ಮೈದಾನದಲ್ಲಿ ಭಾರತ ಹಾಗೂ ಶ್ರೀಲಂಕಾ ವಿರುದ್ಧ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ನಡೆಯಲಿದೆ.

ಟೀಂ ಇಂಡಿಯಾ ಈ ಪಂದ್ಯವನ್ನು ಗೆದ್ದರೆ ಲಂಕಾ ವಿರುದ್ಧದ ಸರಣಿ 2-0 ಅಂತರದಲ್ಲಿ ವಶಪಡಿಸಿಕೊಳ್ಳಲಿದೆ. ಅಲ್ಲದೆ ಸತತ 9 ಟೆಸ್ಟ್‌ ಸರಣಿಗಳನ್ನು ಗೆದ್ದ ಆಸ್ಪ್ರೇಲಿಯಾದ ದಾಖಲೆಯನ್ನೂ ಸರಿಗಟ್ಟಲಿದೆ. ಆಸೀಸ್‌ ತಂಡ 2005ರಿಂದ 2008ರ ಅವಧಿಯಲ್ಲಿ ನಿರಂತರ 9 ಟೆಸ್ಟ್‌ ಸರಣಿಗಳನ್ನು ಗೆದ್ದಿತ್ತು.
ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ಭಾರತದ ಸರಣಿ ದಿಗ್ವಿಜಯ 2015ರ ಶ್ರೀಲಂಕಾ ಪ್ರವಾಸದಿಂದ ಆರಂಭವಾಗಿತ್ತು. ಇದೀಗ ಶ್ರೀಲಂಕಾ ವಿರುದ್ಧವೇ ಸರಣಿ ಗೆದ್ದು ದಾಖಲೆ ಬರೆಯುವ ಅವಕಾಶ ವಿರಾಟ್‌ ಪಡೆಗೆ ಒದಗಿ ಬಂದಿದೆ.

5000 ರನ್‌ ಹೊಸ್ತಿಲಲ್ಲಿ ವಿರಾಟ್‌

ಅಮೋಘ ಫಾರ್ಮ್‌ನಲ್ಲಿರುವ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಟೆಸ್ಟ್‌ ವೃತ್ತಿಜೀವನದಲ್ಲಿ 5 ಸಾವಿರ ರನ್‌ಗಳ ಹೊಸ್ತಿಲಲ್ಲಿದ್ದಾರೆ. ತವರು ನೆಲ ಫಿರೋಜ್‌ ಶಾ ಕೋಟ್ಲಾದಲ್ಲಿ 25 ರನ್‌ಗಳನ್ನು ಗಳಿಸಿದರೆ, ವಿರಾಟ್‌ 5 ಸಾವಿರ ರನ್‌ ಪೂರ್ತಿಗೊಳಿಸಲಿದ್ದಾರೆ. ಇದುವರೆಗೆ ಕೊಹ್ಲಿ 62 ಟೆಸ್ಟ್‌ ಪಂದ್ಯಗಳ 104 ಇನಿಂಗ್ಸ್‌ಗಳಲ್ಲಿ 19 ಶತಕಗಳ ಸಹಿತ 51.82ರ ಸರಾಸರಿಯಲ್ಲಿ 4,975 ರನ್‌ ಗಳಿಸಿದ್ದಾರೆ. ಲಂಕಾ ವಿರುದ್ಧದ ಕೋಲ್ಕೊತಾ ಟೆಸ್ಟ್‌ನ ದ್ವಿತೀಯ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಕೊಹ್ಲಿ, ನಾಗ್ಪುರ ಟೆಸ್ಟ್‌ನಲ್ಲಿ ದ್ವಿಶತಕ ಸಿಡಿಸಿದ್ದರು.

  • ಪಂದ್ಯಾರಂಭ: ಬೆಳಗ್ಗೆ 9.30ಕ್ಕೆ
  • ಸ್ಥಳ: ಫಿರೋಜ್‌ ಶಾ ಕೋಟ್ಲಾ, ದಿಲ್ಲಿ
  • ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ತಂಡಗಳ ವಿವರ

  • ಭಾರತ: ವಿರಾಟ್‌ ಕೊಹ್ಲಿ(ನಾಯಕ), ಕೆ.ಎಲ್‌ ರಾಹುಲ್‌, ಮುರಳಿ ವಿಜಯ್‌, ಚೇತೇಶ್ವರ್‌ ಪೂಜಾರ, ಅಜಿಂಕ್ಯ ರಹಾನೆ, ರೋಹಿತ್‌ ಶರ್ಮಾ, ರವಿಚಂದ್ರನ್‌ ಅಶ್ವಿನ್‌, ವೃದ್ಧಿಮಾನ್‌ ಸಹಾ, ರವೀಂದ್ರ ಜಡೇಜಾ, ಮೊಹಮ್ಮದ್‌ ಶಮಿ, ಇಶಾಂತ್‌ ಶರ್ಮಾ, ಶಿಖರ್‌ ಧವನ್‌, ಉಮೇಶ್‌ ಯಾದವ್‌, ಕುಲ್‌ದೀಪ್‌ ಯಾದವ್‌, ವಿಜಯ್‌ ಶಂಕರ್‌.
  • ಶ್ರೀಲಂಕಾ: ದಿನೇಶ್‌ ಚಾಂದಿಮಾಲ್‌(ನಾಯಕ), ದಿಮುತ್‌ ಕರುಣಾರತ್ನೆ, ಸದೀರ ಸಮರವಿಕ್ರಮ, ಲಾಹಿರು ತಿರಿಮಾನೆ, ಏಂಜಲೊ ಮ್ಯಾಥ್ಯೂಸ್‌, ನಿರೋಶಾನ್‌ ಡಿಕ್ವೆಲ್ಲಾ, ದಿಲ್ರುವಾನ್‌ ಪೆರೆರಾ, ಜೆಫ್ರಿ ವ್ಯಾಂಡರ್ಸೆ, ರೋಶನ್‌ ಡಿ’ಸಿಲ್ವಾ, ದಶುನ್‌ ಶನಕ, ಸುರಂಗ ಲಕ್ಮಲ್‌, ಲಾಹಿರು ಗಾಮಗೆ, ಲಕ್ಷ ಣ್‌ ಸಂದಕನ್‌, ಧನಂಜಯ ಡಿ’ಸಿಲ್ವಾ.

Related Articles

Leave a comment

Back to Top

© 2015 - 2017. All Rights Reserved.