ವರದಿಯನ್ನು ಪರಿಶೀಲಿಸುವ ವ್ಯವಧಾನ ಯಾವ ಸಂಪಾದಕರರಿಗೂ ಇಲ್ಲ: ಡಾ. ನಿರಂಜನ ವಾನಳ್ಳಿ

BREAKING NEWS, Kannada News, Regional, Top News No Comments on ವರದಿಯನ್ನು ಪರಿಶೀಲಿಸುವ ವ್ಯವಧಾನ ಯಾವ ಸಂಪಾದಕರರಿಗೂ ಇಲ್ಲ: ಡಾ. ನಿರಂಜನ ವಾನಳ್ಳಿ 51

ಮೂಡಬಿದಿರೆ: ಪತ್ರಿಕೆ ದುಡ್ಡು ಬಿತ್ತಿ ದುಡ್ಡು ಬೆಳೆಯುವ ಉದ್ಯಮ ಎಂದು ಡಾ. ನಿರಂಜನ ವಾನಳ್ಳಿ ಅವರು ಹೇಳಿದರು.

ಆಳ್ವಾಸ್ ನುಡಿಸಿರಿ -೨೦೧೭ ರ ಎರಡನೇ ದಿನದ ಮೊದಲ ವಿಚಾರಗೋಷ್ಟಿಯಲ್ಲಿ ಸ್ವವಿಮರ್ಷೆಯ ನೆಲೆ ವಿಷಯದ ಕುರಿತಾಗಿ ರತ್ನಾಕರವರ್ಣಿ ವೇದಿಕೆಯಲ್ಲಿ ಮಾತನಾಡಿದ ಅವರು ವರದಿಯನ್ನು ಪರಿಶೀಲಿಸುವ ವ್ಯವಧಾನ ಯಾವ ಸಂಪಾದಕರರಿಗೂ ಇಲ್ಲ. ಗೇಟ್ ಕೀಪಿಂಗ್ ಕೆಲಸದ ಕೊರತೆ ಮತ್ತು ಆತ್ಮಸಾಕ್ಷಿಯನ್ನು ಕಾಪಾಡುವ ಜನ ಬೇಕು. ದಿನಪತ್ರಿಕೆಗಳು ಟ್ಯಾಬ್ಲಾಯ್ಡ್ಗಳಾಗಿ ಪರಿವರ್ತನೆಗೊಳ್ಳುತ್ತಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು.

ಸುದಿ ಆಗಬೇಕಾದ್ದು ಸುದ್ದಿ ಆಗಲ್ಲ. ನಿಷ್ಪಕ್ಷಪಾತವಾಗಿರಬೇಕಾದಲ್ಲಿ ಹಣ ಕೆಲಸ ಮಾಡುತ್ತೋ ಅಲ್ಲಿ ಪತ್ರಿಕೆಯ ಆಶಯ ಸಾಯುತ್ತೆ. ಇವತ್ತಿನ ಪತ್ರಿಕೆ ಹಣದ ಪ್ರಭಾವ ಇಲ್ಲದೆ ನೆಲೆಸುವುದಿಲ್ಲ. ಕಾಸಿಗಾಗಿ ಸುದ್ದಿಯ ಸಂಧರ್ಭ ಓಟಿನ ಸಂಧರ್ಭದಲ್ಲಿ ಕಾಣಬಹುದು. ಪತ್ರಿಕೆ ಜನರ ದನಿಯಾಗಬಹುದೇ ಎಂಬ ಪ್ರಶ್ನೆ ಕಾಡುತ್ತದೆ.

ಎಲ್ಲಾ ವರ್ಗಗಳನ್ನು ಜಾತಿಗಳನ್ನು ಮೀರಿ ಕನ್ನಡ ಪತ್ರಿಕೋದ್ಯಮ ಬೆಳೆದಿದೆ. ಬಹುತ್ವದ ದನಿಗಳು ಪತ್ರಿಕೋದ್ಯಮದಲ್ಲಿ ಕಾಣಬಹುದು. ಆದರೆ ಪ್ರತೀ ಸುದ್ದಿಯ ಆಳವನ್ನು ತಲುಪಬಹುದಾದ ದೃಷ್ಟಿತ್ವ ಇಲ್ಲ. ಅನುಚಾನವಾಗಿ ಆಳವಾಗಿ ಪರಿಹಾತ ಕಂಡುಹಿಡಿಯುವ ಜವಾಬ್ದಾರಿ ಕಾಣುತ್ತಿಲ್ಲ. ಪತ್ರಿಕೆಗಳಲ್ಲಿ ಗೇಟ್ ಕೀಪರ್ಸ್ ಬೇಕು. ನಕಾರಾತ್ಮಕ ಧೋರಣೆಯಿಂದ ಪತ್ರಿಕೋದ್ಯಮ ಕಟ್ಟಲು ಸಾದ್ಯವಿಲ್ಲ. ಸಮಾಜವನ್ನು ಒಡೆಯುವ ಬದಲು ಕಟ್ಟುವ ಕೆಲಸ ನಡಿಯಬೇಕು. ಪತ್ರಕರ್ತರು ವಿಶ್ವಾಸಾರ್ಹತೆ ಉಳಿಸಿಕೊಳ್ಳದಿದ್ದರೆ ಎಲ್ಲವನ್ನೂ ಕಳೆದುಕೊಂಡ ಹಾಗೆ. ಭಾರತದಲ್ಲಿ ಇವತ್ತೂ ಪತ್ರಿಕೆಗಳು ಪ್ರಸಾರವನ್ನು ಹೆಚ್ಚಿಸಿಕೊಳ್ಳುತ್ತಾ ಇದೆ. ಚಳುವಳಿಗಳನ್ನು ಹುಟ್ಟು ಹಾಕುವ ಧೈರ್ಯ ಶಕ್ತಿ ಇವತ್ತು ಪತ್ರಿಕೆಗಳಿಗಿಲ್ಲ ಎಂದರು.

Related Articles

Leave a comment

Back to Top

© 2015 - 2017. All Rights Reserved.