ಖಾಸಗೀ ಬಸ್ ಗೆ ಸರ್ಕಾರಿ ಬಸ್ ಡಿಕ್ಕಿ: 14 ಪ್ರಯಾಣಿಕರಿಗೆ ಗಾಯ  

BREAKING NEWS, Crime, Kannada News, Regional No Comments on ಖಾಸಗೀ ಬಸ್ ಗೆ ಸರ್ಕಾರಿ ಬಸ್ ಡಿಕ್ಕಿ: 14 ಪ್ರಯಾಣಿಕರಿಗೆ ಗಾಯ   13

ಚಾಮರಾಜನಗರ: ಖಾಸಗೀ ಬಸ್ ಗೆ ಸರ್ಕಾರಿ ಬಸ್ ಡಿಕ್ಕಿ ಹೊಡೆದ ಪರಿಣಾಮ 14 ಪ್ರಯಾಣಿಕರಿಗೆ ಗಾಯವಾಗಿದೆ.  ಬೇಡರಪುರ‌ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸಮೀಪದ ಮುಖ್ಯ ರಸ್ತೆ ಯಲ್ಲಿ ಈ ದುರ್ಘಟನೆ ನಡೆದಿದೆ. 

ಮೈಸೂರಿನಿಂದ ಚಾಮರಾಜನಗರ ಕಡೆಗೆ ಖಾಸಗೀ ಬಸ್ ಎಸ್‌ಇಪಿ ಬಸ್ ಬರುತ್ತಿದ್ದಾಗ ಅದೇ ಮಾರ್ಗದಲ್ಲಿ ಹಿಂದಿನಿಂದ ಬಂದ ಸರ್ಕಾರಿ ಬಸ್ ಡಿಕ್ಕಿ ಹೊಡೆದಿದ ಪರಿಣಾಮ ಖಾಸಗೀ ಬಸ್ ನಲ್ಲಿದ್ದ ಮುರುಘೇಶ್ ಎಂಬುವರಿಗೆ ಮೂಗು ಜಖಂ ಆಗಿದೆ. ಉಳಿದಂತೆ ಮಹದೇವಸ್ವಾಮಿ, ಸಾಕಮ್ಮ, ಕುಮಾರ್, ಪಾರ್ವತಮ್ಮ,ಮಂಜು, ದಾಸಪ್ಪ ಲಿಂಗರಾಜು. ಉಮಾ ಸೇರಿದಂತೆ 16 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯವಾಗಿದೆ.  ಸಂಚಾರಿ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ 

Related Articles

Leave a comment

Back to Top

© 2015 - 2017. All Rights Reserved.